ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಕೆಯಾಗುತ್ತಲೇ ಇದೆ. ಡೀಸೆಲ್ ಬೆಲೆ, ಪೆಟ್ರೋಲ್‌ ಬೆಲೆಗೆ ಸಮನಾಗುತ್ತಿದೆ. ಪೆಟ್ರೋಲ್ ಬೆಲೆಯೂ ಸಹ ಹೆಚ್ಚುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಸತತ 17ನೇ ದಿನವೂ ಏರಿಕೆ ಕಂಡಿದೆ.

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಇಂದು ಪೆಟ್ರೋಲ್ ಬೆಲೆಯನ್ನು 20 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 55 ಪೈಸೆಗಳಷ್ಟು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರವು ರೂ.79.76ಗಳಾದರೆ, ಡೀಸೆಲ್ ಬೆಲೆ ರೂ.79.40ಗಳಾಗಿದೆ. ಕಳೆದ 17 ದಿನಗಳಲ್ಲಿ ಪೆಟ್ರೋಲ್ ಬೆಲೆ ರೂ.8.50 ಹಾಗೂ ಡೀಸೆಲ್ ಬೆಲೆ ರೂ.9.77ಗಳಷ್ಟು ಹೆಚ್ಚಾಗಿದೆ.

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಬೆಲೆ ಏರಿಕೆಗೆ ಮೊದಲು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.71.86ಗಳಾಗಿದ್ದರೆ, ಡೀಸೆಲ್ ಬೆಲೆ ರೂ.69.83ಗಳಾಗಿತ್ತು. ಪ್ರತಿ ರಾಜ್ಯ ಹಾಗೂ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿಭಿನ್ನವಾಗಿದ್ದರೂ, ಅವುಗಳ ಮೇಲೆ ವಿಧಿಸಲಾಗುವ ತೆರಿಗೆಯಿಂದಾಗಿ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಭೋಪಾಲ್‌ನಲ್ಲಿ ಇಂದಿನ ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ ರೂ.87.39ಗಳಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ರೂ.78.87ಗಳಾಗಿದೆ. ಡೀಸೆಲ್ ಬೆಲೆ ಸಾರ್ವತ್ರಿಕ ಏರಿಕೆಯನ್ನು ಕಂಡಿದೆ. ಆದರೂ ಸತತವಾಗಿ ಬೆಲೆ ಏರಿಕೆಯಾಗುತ್ತಲೇ ಇದೆ.

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ತೈಲ ಕಂಪನಿಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಇಂಧನದ ಬೆಲೆಯು ಮತ್ತಷ್ಟು ಹೆಚ್ಚಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನದ ಬೆಲೆ ಏರಿಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಜಾಗತಿಕ ಕಚ್ಚಾ ತೈಲದ ಬೆಲೆಯು ದ್ವಿಗುಣಗೊಂಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಮಾರ್ಚ್ ತಿಂಗಳ ಕೊನೆಗೆ ಇಂಧನದ ಬೇಡಿಕೆಯು ಕುಸಿದಿತ್ತು. ಏಪ್ರಿಲ್‌ ತಿಂಗಳಿನಲ್ಲಿ ಸಾರ್ವತ್ರಿಕ ಕುಸಿತ ದಾಖಲಾಗಿತ್ತು. ಮೇ ತಿಂಗಳಿನಲ್ಲಿ ಲಾಕ್‌ಡೌನ್‌ನಿಂದ ವಿನಾಯಿತಿ ದೊರೆತ ಹಿನ್ನೆಲೆಯಲ್ಲಿ ಇಂಧನಕ್ಕೆ ಮತ್ತೆ ಬೇಡಿಕೆ ಉಂಟಾಯಿತು.

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಕಳೆದ ಫೆಬ್ರವರಿಯವರೆಗೆ, ಪೆಟ್ರೋಲಿಯಂ ಉತ್ಪನ್ನ ಮಾರಾಟವು 1.9%ನಷ್ಟು ಬೆಳವಣಿಗೆಯನ್ನು ದಾಖಲಿಸಿತ್ತು. ಮಾರ್ಚ್‌ ತಿಂಗಳಿನಲ್ಲಿ ಈ ದರವು 18%ನಷ್ಟು ಕಡಿಮೆಯಾಯಿತು. ಇದರಿಂದಾಗಿ ಆರ್ಥಿಕ ವರ್ಷದ ಮಾರಾಟದ ಬೆಳವಣಿಗೆಯು 0.22%ಗಳಿಗೆ ಸೀಮಿತವಾಯಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸತತ 17ನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ

ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಓಡಾಡಲು ಆರಂಭಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಇಂಧನ ಮಾರಾಟವು ಕುಸಿತಗೊಂಡಿದ್ದರೆ, ಜೂನ್ ಮೊದಲಾರ್ಧದಲ್ಲಿ ಇಂಧನ ಮಾರಾಟವು ಭಾರೀ ಪ್ರಮಾಣದ ಏರಿಕೆ ಕಂಡಿದೆ.

Most Read Articles

Kannada
English summary
Petrol Diesel price increases for the 17th consecutive day. Read in Kannada.
Story first published: Tuesday, June 23, 2020, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X