ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಭಾರತದಲ್ಲಿ ಕರೋನಾ ವೈರಸ್ ಆರ್ಭಟ ಇಳಿಮುಖವಾಗುತ್ತಿರುವಾಗ ಕಾರುಗಳ ಮಾರಾಟದಲ್ಲಿ ಹಲವು ತಿಂಗಳು ಬಳಿಕ ಚೇತರಿಕೆಯನ್ನು ಕಾಣುತ್ತಿದೆ. ವರ್ಷಾಂತ್ಯದಲ್ಲಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳ ಮೇಲೆ ಆಫರ್ ನೀಡುವ ಮೂಲಕ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಆದರೆ ವೆಚ್ಚ ನಿರ್ವಹಣೆಗಾಗಿ ಹಲವು ಕಾರು ತಯಾರಕ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಿವಿಧ ಮಾದರಿಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಇದರ ನಡುವೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸಲು ಜನವರಿ 1 ರಿಂದ ತನ್ನ ಸರಣಿಯಲ್ಲಿರುವ ಕಾರುಗಳ ಬೆಲೆಯನ್ನು ಮಾದರಿಯ ಆಧಾರದ ಮೇಲೆ ರೂ.28,000 ಗಳವರೆಗೆ ಹೆಚ್ಚಿಸ್ದಲಾಗಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಮತ್ತು ಲೋಹಗಳು ಸೇರಿದಂತ ಕಚ್ಚಾ ವಸ್ತುಗಳ ವೆಚ್ಚದಲ್ಲಿ ಸ್ಥಿರವಾದ ಏರಿಕೆ ಕಂಡು ಬಂದಿದೆ. ಅಲ್ಲದೇ ಇನ್ ಪುಟ್ ವೆಚ್ಚಗಳು ಸ್ಥಿರವಾಗಿ ಹೆಚ್ಚುತ್ತಿರುವ ಪರಿಣಾಮವಾಗಿ ತಮ್ಮ ಕಾರುಗಳ ಬೆಲೆಯನ್ನು ಜನವರಿ 1 ರಿಂದಲೇ ಬೆಲೆ ಹೆಚ್ಚಿಸಲಾಗುತ್ತದೆ ಎಂದು ರೆನಾಲ್ಟ್ ಇಂಡಿಯಾ ಹೇಳಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ರೆನಾಲ್ಟ್ ಇಂಡಿಯಾ ಮಾಧ್ಯಮ ಪ್ರಕಟನೆಯಲ್ಲಿ, ರೆನಾಲ್ಟ್ ಕಂಪನಿಗೆ ಭಾರತವು ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಬ್ರ್ಯಾಂಡ್ ತನ್ನ ಪೋರ್ಟ್ಫೋಲಿಯೊದಲ್ಲಿ ಕೆಲವು ಜನಪ್ರಿಯ ಜಾಗತಿಕ ಮಾದರಿಗಳನ್ನು ಹೊಂದಿದೆ. ಆದರೆ ತಮ್ಮ ಸರಣಿಯಲ್ಲಿರುವ ಎಲ್ಲಾ ಕಾರುಗಳ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ರೆನಾಲ್ಟ್ ಇಂಡಿಯಾ ಕಂಪನಿಯ ಸಣ್ಣ ಹ್ಯಾಚ್‌ಬ್ಯಾಕ್ ಕ್ವಿಡ್ ಮತ್ತು ಸಬ್‌ಕಾಂಪ್ಯಾಕ್ಟ್ ಎಂಪಿವಿ, ಟ್ರೈಬರ್‌ಗೆ ಬಲವಾದ ಬೇಡಿಕೆಯಿಂದಾಗಿ ಮಾರಾಟದಲ್ಲಿ ಚೇತರಿಕೆಯ ಹಾದಿಯಲ್ಲಿದೆ. ಇವೆರಡೂ ತಿಂಗಳಿಗೆ ಸರಾಸರಿ 5000ಕ್ಕೂ ಹೆಚ್ಚು ಯುನಿಟ್ ಗಳು ಮಾರಾಟವಾಗುತ್ತೀವೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಕಿಗರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರಿಂದಾಗಿ ಹೊಸ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯು ಮತ್ತಷ್ಟು ತಡವಾಗಲಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಈ ಹಿಂದೆ ಹೊಸ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಅನಾವರಣಗೊಳಿಸಿದಾಗ ಈ ವರ್ಷ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದರು. ಆದರೆ ರೆನಾಲ್ಟ್ ಟ್ರೈಬರ್ ಟರ್ಬೊ ಪೆಟ್ರೋಲ್ ಆವೃತ್ತಿಯು ಬಿಡುಗಡೆಯು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಫ್ರೆಂಚ್ ವಾಹನ ತಯಾರಕ ಕಂಪನಿಯಾದ ರೆನಾಲ್ಟ್ ತನ್ನ ಹೊಸ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದರು. ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯು ಐದು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ಹೊಸ ರೆನಾಲ್ಟ್ ಡಸ್ಟರ್ ಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ 'ಎಚ್‌ಆರ್ 13' 1.3-ಲೀಟರ್, ನಾಲ್ಕು ಸಿಲಿಂಡರ್, ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 156 ಬಿಹೆಚ್‌ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಸಿವಿಟಿ ಯುನಿಟ್ ಅನ್ನು ಜೋಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ರೆನಾಲ್ಟ್ ತನ್ನ ಜೊಯ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಮತ್ತೊಮ್ಮೆ ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಡೆಸಿದೆ. ರೆನಾಲ್ಟ್ ಈ ಹೊಸ ಜೊಯ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ವರ್ಷದಿಂದ ಭಾರತದಲ್ಲಿ ದುಬಾರಿಯಾಗಲಿವೆ ರೆನಾಲ್ಟ್ ಕಾರುಗಳು

ರೆನಾಲ್ಟ್ ಇಂಡಿಯಾ ತನ್ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಯನ್ನು ಮುಂದಿನ ವರ್ಷದ ಆರಂಭದಿಂದಲೇ ಹೆಚ್ಚಿಸಲಿದೆ. ರೆನಾಲ್ಟ್ ಇಂಡಿಯಾ ಮುಂದಿನ ತಿಂಗಳು ನಿಗದಿಯಾದ ಬೆಲೆ ಏರಿಕೆಗೆ ಮುಂಚಿತವಾಗಿ 2020ರ ಡಿಸೆಂಬರ್‌ನಲ್ಲಿ ಹೆಚ್ಚಿನ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

Most Read Articles

Kannada
English summary
Renault India To Hike Car Prices By Up To ₹ 28,000 From January 1, 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X