ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ಭಾರತದಲ್ಲಿ ಲಾಕ್ ಡೌನ್ ಜಾರಿಯಾದ ನಂತರ ಭಾರತೀಯ ರೈಲ್ವೆಯು ಬೇರೆ ರಾಜ್ಯಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ವಿಶೇಷ ಶ್ರಮಿಕ್ ರೈಲುಗಳ ಸಂಚಾರವನ್ನು ಆರಂಭಿಸಿತ್ತು.

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ಮೇ 1ರಿಂದ ಜುಲೈ 9ರವರೆಗೆ ಈ ವಿಶೇಷ ಶ್ರಮಿಕ ರೈಲಿನ ಸೇವೆಯನ್ನು ನೀಡಿತ್ತು. ಈ ಅವಧಿಯಲ್ಲಿ ಶ್ರಮಿಕ ರೈಲಿನ ಟಿಕೆಟ್‌ನಿಂದ ರೂ.429.29 ಕೋಟಿ ಗಳಿಸಿರುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ. ಈ ರೈಲುಗಳ ಸಂಚಾರಕ್ಕಾಗಿ ಭಾರತೀಯ ರೈಲ್ವೆ ಸುಮಾರು ರೂ.2400 ಕೋಟಿ ಖರ್ಚು ಮಾಡಿತ್ತು. ರೈಲ್ವೆ ಗುಜರಾತ್ ನಿಂದ ರೂ.102 ಕೋಟಿ, ಮಹಾರಾಷ್ಟ್ರದಿಂದ ರೂ.85 ಕೋಟಿ ಹಾಗೂ ತಮಿಳುನಾಡಿನಿಂದ ರೂ.34 ಕೋಟಿ ಗಳಿಸಿದೆ.

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ಟಿಕೆಟ್ ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಿತ್ತು. ಸ್ಥಳೀಯ ಆಡಳಿತಗಳು ಕಾರ್ಮಿಕರಿಂದ ಹಣ ವಸೂಲಿ ಮಾಡಿವೆ ಎಂದು ವರದಿಗಳಾಗಿವೆ. ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಮೇ 1ರಿಂದ ಈ ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಾಯಿತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ಈ ರೈಲುಗಳ ಸಂಚಾರಕ್ಕಾಗಿ ರೂ.2400 ಕೋಟಿಗಳನ್ನು ಖರ್ಚು ಮಾಡಲಾಗಿದ್ದು, ಠೇವಣಿ ಮಾಡಿದ ಹಣವನ್ನು ಶ್ರಮಿಕ ರೈಲು ಚಾಲನೆ ಮಾಡಿದ ಖರ್ಚಿನ ರಶೀದಿಯಂತೆ ತೆಗೆದುಕೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ವಿಶೇಷ ಶ್ರಮಿಕ ರೈಲಿನಲ್ಲಿ ಪ್ರತಿ ಪ್ರಯಾಣಿಕರ ಟಿಕೆಟ್ ದರವು ಸರಾಸರಿ ರೂ.600ಗಳೆಂದು ರೈಲ್ವೆ ಇಲಾಖೆಯು ಜೂನ್‌ನಲ್ಲಿ ತಿಳಿಸಿತ್ತು. ಆದರೆ ಪ್ರತಿಯೊಬ್ಬ ವ್ಯಕ್ತಿಗೆ ರೂ.3400 ವೆಚ್ಚವಾಗಿದ್ದು, ಈ ಮೊತ್ತವನ್ನು ರಾಜ್ಯ ಸರ್ಕಾರಗಳಿಂದ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ಶ್ರಮಿಕ ರೈಲು ಸಂಚಾರಕ್ಕಾಗಿ ರೈಲ್ವೆ ಇಲಾಖೆಯು 85%ನಷ್ಟು ಮೊತ್ತವನ್ನು ಭರಿಸಿದ್ದರೆ, ರಾಜ್ಯ ಸರ್ಕಾರಗಳು 15%ನಷ್ಟು ಮೊತ್ತವನ್ನು ಭರಿಸಿವೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದಾಗಿ ಲಾಕ್‌ಡೌನ್ ಅವಧಿಯಲ್ಲಿ ಲಕ್ಷಾಂತರ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಸಾಧ್ಯವಾಗಿದೆ.

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ಮೇ 1ರಿಂದ ಜುಲೈ 9ರ ನಡುವೆ ರೈಲ್ವೆ ಒಟ್ಟು 4,496 ರೈಲುಗಳನ್ನು ಓಡಿಸಿದ್ದು, ಅದರಲ್ಲಿ 63 ಲಕ್ಷ ಜನರು ಪ್ರಯಾಣಿಸಿದ್ದಾರೆ. ಸಾಮಾನ್ಯ ಸ್ಲೀಪರ್ ಗಳ ಟಿಕೆಟ್‌ ಬೆಲೆಯನ್ನು ರೂ.30ರಷ್ಟು ಹಾಗೂ ಸೂಪರ್‌ಫಾಸ್ಟ್ ಗಳ ಶುಲ್ಕವನ್ನು ರೂ.20ರಷ್ಟು ಹೆಚ್ಚಿಸಲಾಗಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಶ್ರಮಿಕ ರೈಲು ಸಂಚಾರದಿಂದ ಬಂದ ಲಾಭವೆಷ್ಟು? ಮಾಹಿತಿ ಬಿಚ್ಚಿಟ್ಟ ರೈಲ್ವೆ ಇಲಾಖೆ

ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದ್ದ ಕಾರ್ಮಿಕರು ಯಾವುದೇ ಖರ್ಚು ಮಾಡದೆ ಅವರ ಮನೆಗಳಿಗೆ ತಲುಪಲಿ ಎಂಬ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಯಿತು. ಭಾರತದಲ್ಲಿ ಇನ್ನೂ ಸಾಮಾನ್ಯ ರೈಲುಗಳ ಸೇವೆಯನ್ನು ಆರಂಭಿಸಿಲ್ಲ. ಪರಿಸ್ಥಿತಿಗೆ ಅನುಸಾರವಾಗಿ ರೈಲುಗಳ ಸೇವೆಯನ್ನು ಆರಂಭಿಸಲಾಗುವುದು.

Most Read Articles

Kannada
English summary
Rs 429 crores earned from Shramik special train fare. Read in Kannada.
Story first published: Saturday, July 25, 2020, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X