ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಸೊನಾಲಿಕಾ ಕಂಪನಿಯು 2020ರ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯ ಟ್ರಾಕ್ಟರುಗಳನ್ನು ಮಾರಾಟ ಮಾಡಿದೆ. ಅಕ್ಟೋಬರ್‌ ತಿಂಗಳಿನಲ್ಲಿ 19,000 ಯೂನಿಟ್ ಟ್ರಾಕ್ಟರುಗಳನ್ನು ಮಾರಾಟ ಮಾಡಿರುವುದಾಗಿ ಸೊನಾಲಿಕಾ ಕಂಪನಿ ಹೇಳಿದೆ.

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಈ ಮೂಲಕ ತಿಂಗಳೊಂದರಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಾರಾಟವನ್ನು ದಾಖಲಿಸಿದೆ. ಇದರ ಜೊತೆಗೆ ಕಂಪನಿಯು 2020ರ ಅಕ್ಟೋಬರ್‌ ತಿಂಗಳಿನಲ್ಲಿ 15,218 ಟ್ರಾಕ್ಟರುಗಳನ್ನು ಉತ್ಪಾದಿಸಿದೆ. ಕಂಪನಿಯು ಕಳೆದ ವರ್ಷದ ಅಕ್ಟೋಬರ್ ತಿಂಗಳಿಗಿಂತ ಈ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ 13.3%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಸೊನಾಲಿಕಾ ಕಂಪನಿಯು 20-120 ಹಾರ್ಸ್ ಪವರ್ ಹೊಂದಿರುವ ಟ್ರಾಕ್ಟರುಗಳನ್ನು ಉತ್ಪಾದಿಸುತ್ತದೆ. ಸದ್ಯಕ್ಕೆ ಕಂಪನಿಯು 70ಕ್ಕೂ ಹೆಚ್ಚು ಕೃಷಿ ಉಪಕರಣ ಹಾಗೂ ವಾಹನಗಳನ್ನು ಉತ್ಪಾದಿಸುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಟ್ರಾಕ್ಟರುಗಳ ಮಾರಾಟವು ಹೆಚ್ಚಾಗಲು ಕೃಷಿಯ ಪ್ರಗತಿಯೇ ಕಾರಣವೆಂದು ಸೊನಾಲಿಕಾ ಕಂಪನಿ ಹೇಳಿದೆ. ಲಾಕ್‌ಡೌನ್ ಮುಗಿದ ನಂತರ ಟ್ರಾಕ್ಟರುಗಳ ಮಾರಾಟ ಪ್ರಮಾಣವು ವೇಗವಾಗಿದೆ ಎಂದು ಕಂಪನಿ ತಿಳಿಸಿದೆ.

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಲಾಕ್‌ಡೌನ್ ನಂತರ ಕಂಪನಿಯು ಬೇಡಿಕೆಗೆ ಅನುಗುಣವಾಗಿ ಟ್ರಾಕ್ಟರುಗಳನ್ನು ಉತ್ಪಾದಿಸುತ್ತಿದೆ. ಕರೋನಾ ಸಾಂಕ್ರಾಮಿಕ ರೋಗವು ಟ್ರಾಕ್ಟರ್ ಮಾರಾಟದ ಮೇಲೆ ಪರಿಣಾಮವನ್ನು ಬೀರಿದ್ದರೂ ಕೃಷಿ ಉಪಕರಣಗಳ ಮೇಲೆ ಕಡಿಮೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಲಾಕ್‌ಡೌನ್ ಮುಗಿದ ನಂತರ ಕಂಪನಿಯು ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿತು. ಈ ಅಂಕಿಅಂಶಗಳನ್ನು ನೋಡಿದರೆ ಲಾಕ್‌ಡೌನ್ ನಂತರ ಕೃಷಿ ಕ್ಷೇತ್ರದಲ್ಲಿ ವಾಹನಗಳ ಮಾರಾಟ ಪ್ರಮಾಣವು ಸುಧಾರಿಸಿದೆ ಎಂದು ಹೇಳಬಹುದು.

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಲಾಕ್‌ಡೌನ್‌ನಿಂದಾಗಿ ಕಾರುಗಳ ಮಾರಾಟವು 80%-90%ನಷ್ಟು ಕುಸಿದಿದ್ದರೆ, ಟ್ರಾಕ್ಟರುಗಳ ಮಾರಾಟವು ಹೆಚ್ಚಾಗಿದೆ. ವರದಿಗಳ ಪ್ರಕಾರ ಮಹೀಂದ್ರಾ ಕಂಪನಿಯು ತನ್ನ ನಾಗ್ಪುರ ಉತ್ಪಾದನಾ ಘಟಕದಲ್ಲಿ 10 ಲಕ್ಷ ಟ್ರಾಕ್ಟರುಗಳ ನಿರ್ಮಾಣವನ್ನು ಪೂರ್ಣಗೊಳಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಭಾರತದಲ್ಲಿ ಲಾಕ್‌ಡೌನ್ ನಂತರ ಟ್ರಾಕ್ಟರುಗಳಿಗೆ ಬೇಡಿಕೆಯು ನಿರಂತರವಾಗಿ ಹೆಚ್ಚುತ್ತಿದೆ. ದೇಶದ ಪ್ರಮುಖ ಟ್ರಾಕ್ಟರ್ ತಯಾರಕ ಕಂಪನಿಯಾದ ಮಹೀಂದ್ರಾ ಟ್ರಾಕ್ಟರ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಸೊನಾಲಿಕಾ ಟ್ರಾಕ್ಟರುಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗುತ್ತದೆ.

ಲಾಕ್‌ಡೌನ್ ಎಫೆಕ್ಟ್: ಟ್ರಾಕ್ಟರ್ ಮಾರಾಟದಲ್ಲಿ ಹೊಸ ದಾಖಲೆ ಬರೆದ ಸೊನಾಲಿಕಾ

ಈ ಟ್ರಾಕ್ಟರುಗಳನ್ನು ಸೊನಾಲಿಕಾ ಕಂಪನಿಯ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಕೃಷಿ ಕ್ಷೇತ್ರದ ಬೆಳವಣಿಗೆ ಹಾಗೂ ಅಭಿವೃದ್ಧಿಯಿಂದಾಗಿ ಲಾಕ್‌ಡೌನ್ ನಂತರವೂ ಟ್ರಾಕ್ಟರುಗಳ ಮಾರಾಟ ಉತ್ತಮವಾಗಿದೆ ಎಂದು ಕಂಪನಿ ಹೇಳಿದೆ.

Most Read Articles

Kannada
English summary
Sonalika tractors creates new record in sales. Read in Kannada.
Story first published: Tuesday, November 3, 2020, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X