ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಕರೋನಾ ವೈರಸ್ ಮಾಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮುಂದಾಗಿವೆ.

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ದೇಶದ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಸಮೂಹ ಸಂಸ್ಥೆಗಳು ಕೂಡಾ ಕರೋನಾ ವಿರುದ್ಧ ಹೋರಾಟಕ್ಕಾಗಿ ಭಾರೀ ಪ್ರಮಾಣದ ದೇಣಿಗೆ ನೀಡಿದ್ದು, ದೇಶದ ಜನರ ಮೆಚ್ಚುಗೆ ಪಾತ್ರವಾಗಿದೆ.

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ ಸಂಸ್ಥೆಗಳು ಒಟ್ಟಾಗಿ ರೂ.1,500 ಕೋಟಿ ದೇಣಿಗೆ ನೀಡಿದ್ದು, ದೇಣಿಗೆಯಲ್ಲಿ ಅರ್ಧದಷ್ಟು ಹಣದ ರೂಪದಲ್ಲಿ ಮತ್ತು ಇನ್ನುಳಿದ ಹಣದಲ್ಲಿ ವೈದ್ಯಕೀಯ ಉಪಕರಣಗಳು, ವೆಂಟಿಲೆಟರ್, ಫೇಸ್‌ಮಾಸ್ಕ್, ಟೆಸ್ಟಿಂಗ್ ಕಿಟ್ ಮತ್ತು ವೈದ್ಯಕೀಯ ಸೇವೆಗಳಲ್ಲಿ ಬಳಸುವ ಪ್ರೋಟೆಕ್ವಿವ್ ಕ್ಲಾಥ್‌ಗಳನ್ನು ಅವಶ್ಯಕತೆಯಿರುವ ಸರ್ಕಾರಿ ಆಸ್ಪತ್ರೆಗಳಿಗೆ ದೇಣಿಗೆ ನೀಡಲಿದೆ.

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಇನ್ನು ದೇಶದ ಮತ್ತೊಂದು ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಗ್ರೂಪ್ ಕಂಪನಿಯು ಕೂಡಾ ಕರೋನಾ ವೈರಸ್ ವಿರುದ್ದ ಹೋರಾಟಕ್ಕಾಗಿ ಸರ್ಕಾರಕ್ಕೆ ರೂ. 100 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಹಣದ ಬದಲು ವೈದ್ಯಕೀಯ ಉಪಕರಣಗಳನ್ನು ನೀಡಲು ಮುಂದಾಗಿದೆ. ಸುಮಾರು 200ಕ್ಕೂ ಹೆಚ್ಚು ಎನ್‌ಜಿಓ ಸಂಸ್ಥೆಗಳ ಮೂಲಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್‌ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗಿದೆ.

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಬಜಾಜ್ ಕಂಪನಿಯು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಬಜಾಜ್ ಮಾತ್ರವಲ್ಲದೇ ಪ್ರಮುಖ ಆಟೋ ಕಂಪನಿಗಳು ವಿವಿಧ ಮಾದರಿಯ ನೆರವು ಘೋಷಣೆ ಮಾಡಿವೆ.

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಎಂಜಿ ಮೋಟಾರ್ ಕಂಪನಿಯು ರೂ.2 ಕೋಟಿ ದೇಣಿಗೆ ನೀಡಿದಲ್ಲಿ ಮಹೀಂದ್ರಾ ಮತ್ತು ಮಾರುತಿ ಸುಜುಕಿ ಕಂಪನಿಗಳು ವೈದ್ಯಕೀಯ ಸೇವೆಗೆ ಬೇಕಿರುವ ಅಗತ್ಯ ಉಪಕರಣಗಳನ್ನು ಉತ್ಪಾದನೆ ಆರಂಭಿಸುವುದಾಗಿ ಹೇಳಿಕೊಂಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 6.30 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 29 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 6.30 ಲಕ್ಷ ಜನರಲ್ಲಿ ಇದುವರೆಗೆ ಸುಮಾರು 1.38 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.7 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ ಆಟೋ ಉತ್ಪಾದನಾ ಘಟಕಗಳಲ್ಲಿ ಇದೀಗ ವೈದಕೀಯ ಉಪಕರಣಗಳ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ವೆಂಟಿಲೆಟರ್ ಮತ್ತು ಮಾಸ್ಕ್‌ ಉತ್ಪಾದನೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

MOST READ: ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು..!

ಕರೋನಾ ವಿರುದ್ದ ಹೋರಾಟಕ್ಕಾಗಿ ರೂ.1,500 ಕೋಟಿ ದೇಣಿಗೆ ನೀಡಿದ ಟಾಟಾ ಸಮೂಹ ಸಂಸ್ಥೆಗಳು..

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕೂಡಾ ಮಹತ್ವದ ನಿರ್ಧಾರವೊಂದರನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ 1 ಮಿಲಿಯನ್(10 ಲಕ್ಷ) ಫೇಸ್ ಮಾಸ್ಕ್‌ಗಳನ್ನು ಅಭಿವೃದ್ದಿಪಡಿಸಿ ಕೊಡುವುದಾಗಿ ಹೇಳಿಕೊಂಡಿದೆ.

Most Read Articles

Kannada
English summary
tata group of companies Commits 1,500 Cr Help. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X