ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಕಾರುಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ಗ್ರಾಹಕರ ಬೇಡಿಕೆ ಅನುಸಾರವಾಗಿ ಹತ್ತಕ್ಕೂ ಹೆಚ್ಚು ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಸೆಡಾನ್ ಕಾರು ಆವೃತ್ತಿಗಳಿಗೆ ಉತ್ತಮ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಮಾದರಿಯ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯೊಂದನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ. ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿಗೊಳ್ಳುತ್ತಿದ್ದು, ಗೊಶಾಖ್ ಎನ್ನುವ ಕೋಡ್ ನೆಮ್ ಮೇಲೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ.

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಹೊಸ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್, ಸ್ಕೋಡಾ ರ‍್ಯಾಪಿಡ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಆಲ್‌ಟ್ರೊಜ್ ಡಿಸೈನ್ ಆಧರಿಸಿ ಹೊಸ ಕಾರನ್ನು ಸಿದ್ದಪಡಿಸಲಾಗುತ್ತಿದೆ.

MOST READ: ವಿದೇಶದಲ್ಲಿ ಹೆತ್ತವರಿಗೆ ಸರ್ಪೈಸ್​ ಗಿಫ್ಟ್ ಕೊಟ್ಟ ಅನಿವಾಸಿ ಭಾರತೀಯ

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಹೊಸ ಕಾರು ಬಹುತೇಕ ಆಲ್‌ಟ್ರೊಜ್ ಮತ್ತು ಇ-ವಿಷನ್ ಕಾರಿನ ಹೋಲಿಕೆಯನ್ನೇ ಪಡೆದುಕೊಂಡಿದ್ದು, ಕಂಪ್ಯಾಕ್ಟ್ ಸೆಡಾನ್ ಕಾರುಗಳ ಪ್ರಮುಖ ಪ್ರಮುಖ ತಾಂತ್ರಿಕ ಅಂಶವಾಗಿರುವ ಸಬ್ ಫೋರ್ ಮೀಟರ್ ಉದ್ದಳತೆ ಹೊಂದಿದೆ.

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಹಾಗೆಯೇ ಹೊಸ ಕಾರನ್ನು ಸಂಪೂರ್ಣವಾಗಿ ವ್ಯಯಕ್ತಿಕ ಕಾರು ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿಪಡಿಸುತ್ತಿರುವ ಟಾಟಾ ಕಂಪನಿಯು ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಜೋಡಣೆ ಮಾಡಲಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಜೊತೆಗೆ ಹೊಸ ಕಾರನ್ನು ನೆಕ್ಸ್ಟ್ ಜನರೇಷನ್ ಟಿಗೋರ್ ಕಾರಿನೊಂದಿಗೆ ಅಭಿವೃದ್ದಿಗೊಳಿಸಲಾಗುತ್ತಿದ್ದು, ಹೊಸ ಕಾರು ಬದಲಿ ಹೆಸರಿನೊಂದಿಗೆ ಬಿಡುಗಡೆಯಾಗುತ್ತಾ ಅಥವಾ ನೆಕ್ಸ್ಟ್ ಜನರೇಷನ್ ಟಿಗೋರ್ ಮಾದರಿಯಲ್ಲೇ ವಿಲೀನ ಮಾಡಲಾಗುತ್ತಾ ಎನ್ನುವ ಬಗ್ಗೆ ಸ್ಪಷ್ಟನೆಯಿಲ್ಲ.

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಒಟ್ಟಿನಲ್ಲಿ ಹೊಸ ಕಾರು ಕಂಪ್ಯಾಕ್ಟ್ ಸೆಡಾನ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಬಹುದಾದ ಎಲ್ಲಾ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, 2021ರ ಆರಂಭದಲ್ಲಿ ಇಲ್ಲವೆ ಕೊನೆಯಲ್ಲಿ ರಸ್ತೆಗಿಳಿಯಲಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಮಾಹಿತಿಗಳ ಪ್ರಕಾರ, ಹೊಸ ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರವೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಆಲ್‌ಟ್ರೊಜ್‌ ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಬಳಕೆ ಮಾಡಲಾಗಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನೇ ಪಡೆದುಕೊಳ್ಳಬಹುದಾಗಿದೆ.

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಗ್ರಾಹಕರ ಬೇಡಿಕೆಯಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದು, ಗ್ರಾಹಕರನ್ನು ಸೆಳೆಯುವುದಕ್ಕಾಗಿ ಯೋಜನೆ ರೂಪಿಸಿರುವ ಟಾಟಾ ಕಂಪನಿಯು ಹೊಸ ಕಾರನ್ನು ಬದಲಿ ಹೆಸರಿನೊಂದಿಗೆ ಟಿಗೋರ್ ಸ್ಥಾನದಲ್ಲಿ ಬಿಡುಗಡೆ ಮಾಡಬಹುದಾಗಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಹೋಂಡಾ ಅಮೇಜ್ ಕಾರಿಗೆ ಪೈಪೋಟಿ ನೀಡಲಿದೆ ಟಾಟಾ ಹೊಸ ಕಂಪ್ಯಾಕ್ಟ್ ಸೆಡಾನ್

ಹೊಸ ಕಾರು ಬಿಡುಗಡೆಯ ನಂತರ ಟಿಗೋರ್ ಕಾರು ಮಾರಾಟದಿಂದ ಸ್ಥಗಿತಗೊಳ್ಳಲಿದ್ದು, ಪೆಟ್ರೋಲ್ ಮಾದರಿಯೊಂದಿಗೆ ಮಾರಾಟಗೊಳ್ಳಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 6 ಲಕ್ಷದಿಂದ ರೂ.9 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.

Most Read Articles

Kannada
English summary
New Tata Compact-Sedan Codenamed 'Goshaq' Under Development: To Rival The Honda Amaze. Read in Kannada.
Story first published: Friday, April 24, 2020, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X