ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಕರೋನಾ ವೈರಸ್‌ನಿಂದಾಗಿ ಇಡೀ ದೇಶದ ಅರ್ಥವ್ಯವಸ್ಥೆಯೇ ಬುಡಮೇಲಾಗಿದ್ದು, ಲಾಕ್ ಡೌನ್ ಪರಿಣಾಮ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರವು ಸಂಕಷ್ಟ ಪರಿಸ್ಥಿತಿಯಲ್ಲೂ ಹಲವು ವಿನಾಯ್ತಿಗಳನ್ನು ಘೋಷಣೆ ಮಾಡಿದ್ದು, ಮುಂದಿನ ಮೂರು ತಿಂಗಳ ಕಾಲ ಇಎಂಐ ಪಾವತಿಗೆ ಸಮಯಾವಕಾಶ ನೀಡಿದೆ.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ವಾಣಿಜ್ಯ ಚಟುವಟಿಕೆಗಳನ್ನು ಏಕಾಏಕಿ ಬಂದ್ ಮಾಡಿರುವುದರಿಂದ ಗೃಹ ಸಾಲ, ವಾಹನ ಸಾಲ, ವ್ಯಯಕ್ತಿಕ ಸಾಲಗಳ ಇಎಂಐ(ಮಾಸಿಕ ಕಂತು) ಮರುಪಾವತಿಗೆ ಭಾರೀ ಸಂಕಷ್ಟ ಎದುರಾಗುವುದನ್ನು ಅರಿತಿರುವ ಕೇಂದ್ರ ಸರ್ಕಾರವು ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಇಎಂಐ ಪಾವತಿದಾರರಿಗೆ ಸಮಯಾವಕಾಶ ನೀಡಿದೆ. ಇದು ವಾಹನಗಳ ಮೇಲೆ ಸಾಲ ಪಡೆದಿರುವವರಿಗೆ ಸಾಕಷ್ಟು ಅನುಕೂಲಕರವಾಗಲಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಸುವ ಬಿಕ್ಕಟ್ಟನ್ನು ಹೊಗಲಾಡಿಸಲಿದೆ.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಇಎಂಐ ಕಂತುಗಳನ್ನು ಮರುಪಾವತಿಸಲು ಜೂನ್ ತನಕ ಸಮಯಾವಕಾಶ ನೀಡಿದ್ದು, ಕಾರುಗಳು ಮತ್ತು ಬೈಕ್‌ಗಳ ಮೇಲೆ ಸಾಲವನ್ನು ಹೊಂದಿರುವ ಲಕ್ಷಾಂತರ ವಾಹನ ಮಾಲೀಕರಿಗೆ ಇದು ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಇನ್ನು ದೇಶಾದ್ಯಂತ ಮುಂದಿನ ತಿಂಗಳು ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಸಿದ್ದು, ಕರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಮಾಲಿನ್ಯ ತಡೆಯುವ ಉದ್ದೇಶದಿಂದ ಕಳೆದ 2 ವರ್ಷಗಳ ಹಿಂದೆಯೇ ಬಿಎಸ್-6 ಎಮಿಷನ್ ನಿಯಮವನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿ ತರುವಂತೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಆಟೋ ಕಂಪನಿಗಳಿಗೆ ಖಡಕ್ ಸೂಚನೆ ನೀಡಿತ್ತು. ಆದೇಶದಂತೆ ಏಪ್ರಿಲ್ 1ರಿಂದ ಜಾರಿಗೆ ಮಾಡಲು ಇನ್ನು 15 ದಿನಗಳು ಬಾಕಿ ಇರುವಾಗ ದೇಶದಲ್ಲಿ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿದ್ದು, ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಇದರಿಂದ ಕಂಗಾದ ವಾಹನ ಉತ್ಪಾದನಾ ಸಂಸ್ಥೆಗಳು ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಇಂದು ಮತ್ತೆ ಸುಪ್ರೀಂಕೋರ್ಟ್ ತದತಟ್ಟುವ ಮೂಲಕ ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆದರೆ ಮಾರಾಟ ಅವಧಿ ವಿಸ್ತರಣೆಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಅವಧಿ ವಿಸ್ತರಣೆ ಮಾಡಿತು.

MOST READ: ಕರೋನಾ ವೈರಸ್: ವೆಂಟಿಲೆಟರ್ ಉತ್ಪಾದನೆ ಚಾಲನೆ ನೀಡಿದ ಮಾರುತಿ ಸುಜುಕಿ

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಈ ಹಿಂದೆಯೂ ಎರಡು ಬಾರಿ ಆಟೋ ಕಂಪನಿಗಳು ಬಿಎಸ್-4 ವಾಹನಗಳ ಮಾರಾಟಕ್ಕೆ ಅವಧಿಯ ವಿಸ್ತರಣೆಯ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್ ಕಡ್ಡಾಯವಾಗಿ ಎಪ್ರಿಲ್ 1ರಿಂದ ಬಿಎಸ್-6 ಆದೇಶವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿತ್ತು.

ವಾಹನಗಳ ಮೇಲಿನ ಸಾಲಕ್ಕೆ ಮೂರು ತಿಂಗಳ ಇಎಂಐ ವಿನಾಯ್ತಿ ನೀಡಿದ ಆರ್‌ಬಿಐ

ಆದರೆ ಇದೀಗ ಕರೋನಾ ವೈರಸ್‌ನಿಂದ ವಾಹನ ಮಾರಾಟ ಬಂದ್ ಆಗಿರುವುದರಿಂದ ಆಟೋ ಕಂಪನಿಗಳ ಹೊಸ ಮರುಪರಿಶೀಲನಾ ಅರ್ಜಿಯನ್ನು ಮಾನ್ಯ ಮಾಡಿ ಷರತ್ತುಗಳೊಂದಿಗೆ ಮತ್ತೊಂದು ಅವಕಾಶವನ್ನು ನೀಡಿದೆ.

More from DriveSpark

Article Published On: Saturday, March 28, 2020, 21:02 [IST]
English summary
Three Months Relief From Vehicle Loan EMIs Announced By RBI. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+