ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಭಾರತೀಯ ಆಟೋ ಮೊಬೈಲ್ ಉದ್ಯಮವು ಕೆಲವು ತಿಂಗಳ ಸಂಕಷ್ಟದ ನಂತರ ಮತ್ತೆ ಚೇತರಿಕೆ ಕಾಣುತ್ತಿದೆ. ಲಾಕ್ ಡೌನ್ ಕಾರಣದಿಂದಾಗಿ ಏಪ್ರಿಲ್‌ ತಿಂಗಳಿನಲ್ಲಿ ಯಾವುದೇ ಕಾರುಗಳ ಮಾರಾಟವಾಗಿರಲಿಲ್ಲ. ಲಾಕ್ ಡೌನ್ ನಲ್ಲಿ ವಿನಾಯಿತಿ ದೊರೆತ ನಂತರ ಮೇ ತಿಂಗಳಿನಲ್ಲಿ ಕಾರುಗಳ ಮಾರಾಟವನ್ನು ಆರಂಭಿಸಲಾಯಿತು.

ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮೇ ತಿಂಗಳಿನಲ್ಲಿ ಆಟೋ ಮೊಬೈಲ್ ಕಂಪನಿಗಳು ಉತ್ಪಾದನೆಯನ್ನು ಪುನರಾರಂಭಿಸಿದವು. ಜೂನ್ ತಿಂಗಳಿನಲ್ಲಿ ಕಾರು ಮಾರಾಟವು ಚೇತರಿಕೆಯನ್ನು ಕಂಡಿದೆ. ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. 2020ರ ಜೂನ್‌ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಹತ್ತು ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮಾರುತಿ ಆಲ್ಟೊ ಮತ್ತೆ ಭಾರತದ ಹೆಚ್ಚು ಮಾರಾಟವಾಗುವ ಕಾರ್ ಆಗಿ ಹೊರ ಹೊಮ್ಮಿದೆ. ಜೂನ್ ತಿಂಗಳಿನಲ್ಲಿ ಆಲ್ಟೊ ಕಾರಿನ 7298 ಯುನಿಟ್ ಗಳು ಮಾರಾಟವಾಗಿವೆ. 2019ರ ಜೂನ್‌ ತಿಂಗಳಿನಲ್ಲಿ 18,733 ಯುನಿಟ್ ಗಳು ಮಾರಾಟವಾಗಿದ್ದವು. ಇದರಿಂದಾಗಿ ಈ ವರ್ಷದ ಮಾರಾಟವು ಹಿಂದಿನ ವರ್ಷದ ಮಾರಾಟಕ್ಕಿಂತ 61%ನಷ್ಟು ಕುಸಿದಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಹ್ಯುಂಡೈ ಕ್ರೆಟಾ ಎಸ್‌ಯುವಿ ಎರಡನೇ ಸ್ಥಾನದಲ್ಲಿದೆ. ಜೂನ್ ತಿಂಗಳಿನಲ್ಲಿ ಹ್ಯುಂಡೈ ಕ್ರೆಟಾದ 7207 ಯುನಿಟ್ ಗಳು ಮಾರಾಟವಾಗಿವೆ. ಕಳೆದ ವರ್ಷದ ಜೂನ್‌ ತಿಂಗಳಿನಲ್ಲಿ 8334 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಮಾರಾಟದಲ್ಲಿ 13.52%ನಷ್ಟು ಕುಸಿತವಾಗಿದೆ.

ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಕಿಯಾ ಸೆಲ್ಟೋಸ್ ಎಸ್‌ಯುವಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಿಯಾ ಸೆಲ್ಟೋಸ್‌ನ 7114 ಯುನಿಟ್‌ಗಳು 2020ರ ಜೂನ್ ತಿಂಗಳಿನಲ್ಲಿ ಮಾರಾಟವಾಗಿವೆ. ಕಿಯಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ಸೆಲ್ಟೋಸ್ ಅನ್ನು ಹಲವಾರು ಫೀಚರ್ ಗಳೊಂದಿಗೆ ಅಪ್ ಡೇಟ್ ಮಾಡಿದ ಕಾರಣಕ್ಕೆ ಮಾರಾಟವು ಉತ್ತಮವಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಮಾರುತಿ ವ್ಯಾಗನ್ಆರ್ ಕಾರಿನ 6,972 ಯುನಿಟ್‌ಗಳು ಮಾರಾಟವಾಗಿವೆ. 2019ರ ಜೂನ್‌ನಲ್ಲಿ 10,228 ಯುನಿಟ್ ಗಳು ಮಾರಾಟವಾಗಿದ್ದವು. ಇದರಿಂದ ಮಾರುತಿ ವ್ಯಾಗನ್ಆರ್ ಮಾರಾಟವು 31.83%ನಷ್ಟು ಕುಸಿದಿದೆ. ಐದನೇ ಸ್ಥಾನದಲ್ಲಿರುವ ಮಾರುತಿ ಸುಜುಕಿಯ ಡಿಜೈರ್ ಮಾರಾಟದಲ್ಲಿ 60.76%ನಷ್ಟು ಕುಸಿತವನ್ನು ದಾಖಲಿಸಿದೆ.

ಸ್ಥಾನ ಮಾದರಿ ಜೂನ್-20 ಜೂನ್-19 ಬೆಳವಣಿಗೆ
1 ಮಾರುತಿ ಸುಜುಕಿ ಆಲ್ಟೋ 7,298 18,733 -61.04
2 ಹ್ಯುಂಡೈ ಕ್ರೆಟಾ 7,207 8,334 -13.52
3 ಕಿಯಾ ಸೆಲ್ಟೋಸ್ 7,114 - -
4 ಮಾರುತಿ ಸುಜುಕಿ ವ್ಯಾಗನ್ ಆರ್ 6,972 10,228 -31.83
5 ಮಾರುತಿ ಸುಜುಕಿ ಡಿಜೈರ್ 5,834 14,868 -60.76
6 ಮಾರುತಿ ಸುಜುಕಿ ಬ್ರೆಝಾ 4,542 8,871 -48.80
7 ಮಾರುತಿ ಸುಜುಕಿ ಬಲೆನೊ 4,300 13,689 -68.59
8 ಮಾರುತಿ ಸುಜುಕಿ ಸೆಲೆರಿಯೋ 4,145 4,871 -14.90
9 ಹ್ಯುಂಡೈ ವೆನ್ಯೂ 4,129 8,763 -52.88
10 ಟಾಟಾ ಟಿಯಾಗೋ 4,069 5,537 -26.51
ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಈ ವರ್ಷದ ಜೂನ್ ತಿಂಗಳಿನಲ್ಲಿ ಮಾರುತಿ ಸುಜುಕಿ ಡಿಜೈರ್ ನ 5,834 ಯುನಿಟ್‌ಗಳು ಮಾರಾಟವಾಗಿವೆ. ನಂತರದ ಸ್ಥಾನಗಳಲ್ಲಿರುವ ಮಾರುತಿ ಸುಜುಕಿ ಕಂಪನಿಯ ಬ್ರೆಝಾ ಕಾರಿನ 4,542 ಯುನಿಟ್, ಬಲೆನೊ ಕಾರಿನ 4,300 ಯುನಿಟ್ ಹಾಗೂ ಸೆಲೆರಿಯೊ ಕಾರಿನ 4,145 ಯುನಿಟ್ ಜೂನ್ ತಿಂಗಳಿನಲ್ಲಿ ಮಾರಾಟವಾಗಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಜೂನ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರುಗಳಿವು

ಒಂಬತ್ತನೇ ಸ್ಥಾನದಲ್ಲಿ ಹ್ಯುಂಡೈ ವೆನ್ಯೂ 4,129 ಯುನಿಟ್‌ಗಳ ಮಾರಾಟದೊಂದಿಗೆ 52.88%ನಷ್ಟು ಕುಸಿತ ಕಂಡಿದೆ. ಹತ್ತನೇ ಸ್ಥಾನದಲ್ಲಿರುವ ಟಾಟಾ ಟಿಯಾಗೊದ 4,069 ಯುನಿಟ್ ಗಳು ಮಾರಾಟವಾಗಿವೆ. ಒಟ್ಟಾರೆಯಾಗಿ ಟಾಪ್ 10 ಕಾರುಗಳ ಮಾರಾಟವು 40.77%ನಷ್ಟು ಕುಸಿದಿದೆ.

Most Read Articles

Kannada
English summary
Top selling cars in Indian market during June 2020. Read in Kannada.
Story first published: Thursday, July 2, 2020, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X