ಎಂಪಿವಿ ಸೆಗ್‍ಮೆಂಟಿನಲ್ಲಿಯೂ ಪಾರುಪತ್ಯ ಸಾಧಿಸಿದ ಮಾರುತಿ ಸುಜುಕಿ
ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಎಂಪಿವಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಎಂಪಿವಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ರೆನಾಲ್ಟ್ ಟ್ರೈಬರ್ ಎಂಪಿವಿಯು ಟೊಯೊಟಾ ಇನೋವಾ ಕ್ರಿಸ್ಟಾವನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ
ಕಳೆದ ವರ್ಷದ ಅತಿ ಹೆಚ್ಚು ಮಾರಾಟವಾದ ಎಂಪಿವಿ ಪಟ್ಟಿಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯ ಒಟ್ಟು 6,650 ಯುನಿಟ್‍ಗಳು ಮಾರಾಟವಾಗಿವೆ. ಇದು ತನ್ನ ಇದರ ಪ್ರತಿಸ್ಪರ್ಧಿಗಳ ಮಾರಾಟಕ್ಕೆ ಹೋಲಿಸಿದರೆ ಉತ್ತಮವಾಗಿ ಮಾರಾಟವಾಗಿದೆ. ಆದರೆ 2018ರ ಮಾರಾಟಕ್ಕೆ ಹೋಲಿಸಿದರೆ ಶೇ.7 ರಷ್ಟು ಕುಸಿತವಾಗಿವೆ.

ಮಹೀಂದ್ರಾ ಬೊಲೆರೊ
ಅತಿ ಹೆಚ್ಚು ಮಾರಾಟವಾದ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಮಹೀಂದ್ರಾ ಬೊಲೆರೊ ಪಡೆದುಕೊಂಡಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಮಹೀಂದ್ರಾ ಬೊಲೆರೊ ಎಂಪಿವಿಯ ಒಟ್ಟು 5,661 ಯುನಿಟ್‍ಗಳು ಮಾರಾಟವಾಗಿವೆ. ಇನ್ನೂ 2018ರ ಡಿಸೆಂಬರ್ ತಿಂಗಳಲ್ಲಿ ಮಹೀಂದ್ರಾ ಬೊಲೆರೊ ಎಂಪಿವಿಯ 4,832 ಯುನಿಟ್‍ಗಳು ಮಾರಾಟವಾಗಿವೆ. 2018ರ ಮಾರಾಟವನ್ನು ಕಳೆದ ಡಿಸೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.17ರಷ್ಟು ಏರಿಕೆಯಾಗಿದೆ.

ರೆನಾಲ್ಟ್ ಟ್ರೈಬರ್
ಇಷ್ಟು ದಿನಗಳ ಕಾಲ ದೇಶಿಯ ಮಾರುಕಟ್ಟೆಯಲ್ಲಿ ಹೆಣಗಾಡುತ್ತಿದ್ದ ಫ್ರೆಂಚ್ ಬ್ರ್ಯಾಂಡ್ ಆದ ರೆನಾಲ್ಟ್ ಕಂಪನಿಯ ಟ್ರೈಬರ್ ಅದ್ಬುತ ಯಶಸ್ಸನ್ನು ಗಳಿಸಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ರೆನಾಲ್ಟ್ ಟ್ರೈಬರ್ ಎಂಪಿವಿಯ 5,631 ಯುನಿಟ್‍ಗಳು ಮಾರಾಟವಾಗಿವೆ. ಇದು ಬೆಲೆರೊ ಎಂಪಿವಿಗಿಂತ 30 ಯುನಿಟ್‍ಗಳು ಕಡಿಮೆಯಾಗಿದೆ.

ಟೊಯೊಟಾ ಇನೋವಾ ಕ್ರಿಸ್ಟಾ
ಜನಪ್ರಿಯ ಟೊಯೊಟಾ ಇನೋವಾ ಕ್ರಿಸ್ಟಾ ಅತಿ ಹೆಚ್ಚು ಮಾರಾಟವಾದ ಎಂಪಿವಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಇನೋವಾ ಕ್ರಿಸ್ಟಾದ ಒಟ್ಟು 3,414 ಯುನಿಟ್‍ಗಳು ಮಾರಾಟವಾಗಿವೆ. ಕಂಪನಿಯು ಇತ್ತೀಚಿಗೆ ಬಿಎಸ್-6 ಇನೋವಾ ಕ್ರಿಸ್ಟಾವನ್ನು ಬಿಡುಗಡೆಗೊಳಿಸಿದೆ.

ಮಾರುತಿ ಸುಜುಕಿ ಮಾರುತಿ ಎಕ್ಸ್‌ಎಲ್ 6
ಎರ್ಟಿಗಾ ಎಂಪಿವಿಯ ಪ್ರೀಮಿಯಂ ಪುನರಾವರ್ತನೆಯಾದ ಮಾರುತಿ ಸುಜುಕಿ ಎಕ್ಸ್ ಎಕ್ಸ್‌ಎಲ್ 6 ಈ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಮಾರುತಿ ಎಕ್ಸ್‌ಎಲ್ 6 ಎಂಪಿವಿಯ ಒಟ್ಟು 2,521 ಯುನಿಟ್‍ಗಳು ಮಾರಾಟವಾಗಿವೆ. ಹೊಸ ಮಾರುತಿ ಎಕ್ಸ್‌ಎಲ್ 6 ಅನ್ನು ಬ್ರ್ಯಾಂಡ್‍ನ ನೆಕ್ಸಾ ಡೀಲರ್‍ಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಮಹೀಂಪ್ರಾ ಮರಾಜೋ
ಈ ಪಟ್ಟಿಯಲ್ಲಿ ಟಾಪ್-5 ಸ್ಥಾನಗಳ ನಂತರ ಆರನೇ ಸ್ಥಾನವನ್ನು ಮಹೀಂಪ್ರಾ ಮರಾಜೋ ಪಡೆದುಕೊಂಡಿದೆ. ಮಹೀಂದ್ರಾ ಮರಾಜೊ 2018ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿದರು. ಕಳೆದ ಡಿಸೆಂಬರ್ ತಿಂಗಳಲ್ಲಿ ಮಾರಾಜೊ ಎಂಪಿವಿಯ ಒಟ್ಟು 1,292 ಯುನಿಟ್‍ಗಳು ಮಾರಾಟವಾಗಿವೆ. 2018ರ ಡಿಸೆಂಬರ್ ತಿಂಗಳಲ್ಲಿ ಮರಾಜೊ ಎಂಪಿವಿಯ 3,206 ಯುನಿಟ್‍ಗಳು ಮಾರಾಟವಾಗಿತ್ತು. ಕಳೆದ ಡಿಸೆಂಬರ್ ತಿಂಗಳ ಮಾರಾಟವನ್ನು 2018ರ ಡಿಸೆಂಬರ್ ಹೋಲಿಸಿದರೆ ಬರೊಬ್ಬರಿ ಶೇ.60 ರಷ್ಟು ಮಾರಾಟದಲ್ಲಿ ಕುಸಿದಿದೆ.

ಈ ಪಟ್ಟಿಯಲ್ಲಿ ಆರನೇ ಸ್ಥಾನದ ನಂತರ ಟಾಟಾ ಹೆಕ್ಸಾ, ಹೋಂಡಾ ಬಿಆರ್-ವಿ, ದಟ್ಸನ್ ಗೋ ಮತ್ತು ಮಹೀಂದ್ರಾ ಜೈಲೊ ಎಂಪಿವಿಗಳು ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಟಾಟಾ ಹೆಕ್ಸಾ 317 ಯುನಿಟ್‍ಗಳು, ಹೋಂಡಾ ಬಿಆರ್-ವಿ 82 ಯುನಿಟ್‍ಗಳು, ದಟ್ಸನ್ ಗೋ 67 ಮತ್ತು ಮಹೀಂದ್ರಾ ಜೈಲೊ 41 ಯುನಿಟ್‍ಗಳು ಮಾರಾಟವಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಸೆಗ್‍ಮೆಂಟ್‍ನಲ್ಲಿಯು ಮಾರುತಿ ಸುಜುಕಿ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಎಂಪಿವಿ ಸೆಗೆಮೆಂಟ್‍ನಲ್ಲಿ ಇತರ ಜನಪ್ರಿಯ ಬ್ರ್ಯಾಂಡ್‍ಗಳನ್ನು ಹಿಂದಿಕ್ಕಿ ಮಾರುತಿ ಸುಜುಕಿಯ ಎರ್ಟಿಗಾ ಆಗ್ರಸ್ಥಾನ ಪಡೆದಿದೆ.


Click it and Unblock the Notifications