Just In
Don't Miss!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಫೋಕ್ಸ್‌ವ್ಯಾಗನ್ ವೆಂಟೊ
ಫೋಕ್ಸ್‌ವ್ಯಾಗನ್ ವೆಂಟೊ ಕಾರು ಸುಮಾರು ಒಂದು ದಶಕದ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಫೋಕ್ಸ್‌ವ್ಯಾಗನ್ ವೆಂಟೊ ಸಿ-ಸೆಗ್ಮೆಂಟ್ ಸೆಡಾನ್ ಅಂದಿನಿಂದ ಇಂದಿನವರೆಗೂ ಬದಲಾಗದೆ ಉಳಿದಿದೆ.

ಕೊನೆಗೂ ಫೋಕ್ಸ್‌ವ್ಯಾಗನ್ ಈ ವೆಂಟೊ ಸೆಡಾನ್ ಕಾರನ್ನು ಹೊಸ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ತಲೆಮಾರಿನ ವೆಂಟೊ ಸೆಡಾನ್ ಮುಂದಿನ ವರ್ಷಾಂತ್ಯದಲ್ಲಿ ಬಿಡುಗಡೆಯಗಬಹುದೆಂದು ನಿರೀಕ್ಷಿಸುತ್ತೇವೆ. ಫೋಕ್ಸ್‌ವ್ಯಾಗನ್ ಕಂಪನಿಯು ವೆಂಟೊ ಸೆಡಾನ್ ಕಾರಿನ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಇನ್ನು ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿವೆ.

ಪ್ಲಾಟ್‌ಫಾರ್ಮ್
ಪ್ರಸ್ತುತ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರು ಅದೇ ಪಿಕ್ಯೂ 25 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದರ ಸೋದರಸಂಬಂಧಿ ಸ್ಕೋಡಾ ರ‍್ಯಾಪಿಡ್ ಮಾದರಿಯು ಇದೇ ಪಿಕ್ಯೂ 25 ಪ್ಲಾಟ್‌ಫಾರ್ಮ್ ನಡಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಫೋಕ್ಸ್‌ವ್ಯಾಗನ್ ಗ್ರೂಪ್ ಭಾರತದಲ್ಲಿ ಕಾಂಪ್ಯಾಕ್ಟ್ ಕಾರುಗಳಿಗಾಗಿ ಎಲ್ಲಾ ಹೊಸ ಪ್ಲಾಟ್‌ಫಾರ್ಮ್ನಲ್ಲಿ ಕಾರ್ಯನಿರ್ವಹಿಸುತ್ತಿದೆ, ಹೆಚ್ಚು ಸ್ಥಳೀಕರಿಸಲ್ಪಟ್ಟ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಹೊಸ ತಲೆಮಾರಿನ ವೆಂಟೊ ಕಾರನ್ನು ಅಭಿವೃದ್ದಿ ಪಡಿಸಬಹುದು.

ವಿನ್ಯಾಸ
ವಿನ್ಯಾಸವು ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಲ್ಲಿ ದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆ. ಈ ಸೆಡಾನ್ ಮೊದಲ ಬಾರಿಗೆ ಭಾರತಕ್ಕೆ ಬಂದಾಗಿನಿಂದ ಸ್ಟೈಲಿಂಗ್ ಮುಂಭಾಗದಲ್ಲಿ ನವೀಕರಿಸಲಾಗಿಲ್ಲ ಮತ್ತು ತಾತ್ಕಾಲಿಕ ನವೀಕರಣಗಳೊಂದಿಗೆ ಮುಂದುವರಿಯುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆದರೆ ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರು ಎಲ್ಲಾ ಹೊಸ ವಿನ್ಯಾಸದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದು ಇತರ ಜಾಗತಿಕ ಫೋಕ್ಸ್‌ವ್ಯಾಗನ್ ಕಾರುಗಳಿಗೆ ಅನುಗುಣವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಫೀಚರ್‌ಗಳು
ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರು ಪೂರ್ಣ ಎಲ್‌ಇಡಿ ಲೈಟಿಂಗ್, ಸಂಪೂರ್ಣ ಡಿಜಿಟಲ್ ‘ವರ್ಚುವಲ್ ಕಾಕ್‌ಪಿಟ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್ ಜೊತೆಗೆ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಮತ್ತು ಕನೆಕ್ಟಿವಿಟಿ ಕಾರ್ ಟೆಕ್ ಮುಂತಾದ ಫೀಚರ್‌ಗಳನ್ನು ನೀಡಬಹುದು.
MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಸುರಕ್ಷತೆ
ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, ನೇಕ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಬಿಎಸ್ ವಿಥ್ ಇಬಿಡಿ, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಜೊತೆಗೆ ಕೆಲವು ಹೊಸ ಹೆಚ್ಚುವರಿ ಸುರಕ್ಷತಾ ಫೀಚರ್‌ಗಳನ್ನು ಒಳಗೊಂಡಿರುತ್ತದೆ.

ಎಂಜಿನ್
ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಲ್ಲಿ ಅದೇ 1.0-ಲೀಟರ್, ಮೂರು-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಟಿಎಸ್ಐ ಎಂಜಿನ್ ಅನ್ನು ಅಳವಡಿಸಬಹುದು. ಪ್ರಸ್ತುತ ತಲೆಮಾರಿನಲ್ಲಿ ಇದೆ ಎಂಜಿನ್ ಅನ್ನು ಹೊಂದಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳಲ್ಲಿ ಸಣ್ಣ ಬದಲಾವಣೆಗಳಾಗಬಹುದು. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಬಹುದು.

ಬೆಲೆ
ಪ್ರಸ್ತುತ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.93 ಲಕ್ಷದಿಂದ ರೂ. 13.39 ಲಕ್ಷಗಳವರೆಗೆ ಹೋಗುತ್ತದೆ. ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಕಾರಿನ ಬೆಲೆಯು ತುಸು ದುಬಾರಿಯಾಗಿರುತ್ತದೆ.

ಪ್ರತಿಸ್ಪರ್ಧಿ
ಹೊಸ ತಲೆಮಾರಿನ ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ರ‍್ಯಾಪಿಡ್ , ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಟೊಯೊಟಾ ಯಾರೀಸ್ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.