ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಕರೋನಾ ವೈರಸ್ ಪರಿಣಾಮ ಕಾರು ಉತ್ಪಾದನೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಕಾರು ಕಂಪನಿಗಳು ಇದೀಗ ಬೇಡಿಕೆ ಹೆಚ್ಚುತ್ತಿದ್ದಂತೆ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿದ್ದು, ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಭರಾಟೆಯಲ್ಲಿ ಕಾರ್ಮಿಕರ ನೀತಿಗಳಿಗೆ ವಿರುದ್ಧವಾಗಿ ಉತ್ಪಾದನೆ ಕೈಗೊಳ್ಳುತ್ತಿರುವುದು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಲಾಕ್‌ಡೌನ್ ಅವಧಿಯಲ್ಲಿನ ಕಾರು ಮಾರಾಟ ಇಳಿಕೆಯ ನೆಪವೊಡ್ಡಿ ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿರುವ ವಾಹನ ಕಂಪನಿಗಳು ಉತ್ಪಾದನಾ ಗುರಿತಲುಪಲು ಮುಂದಾಗಿದ್ದು, ಕೋವಿಡ್ ಸಂದರ್ಭದಲ್ಲೂ ಲಾಭದ ನೀರಿಕ್ಷೆಯೊಂದಿಗೆ ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಇದೇ ಕಾರಣಕ್ಕೆ ಟೊಯೊಟಾ ಕೀರ್ಲೋಸ್ಕರ್ ಮೋಟಾರ್ಸ್ ಕಂಪನಿಯು ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರು ಉತ್ಪಾದನೆಯು ಕುಂಠಿತಗೊಂಡಿದೆ.

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಹೌದು, ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಟೊಯೊಟಾ ಆಡಳಿತ ಮಂಡಳಿಯು ಕೋವಿಡ್ ಸುರಕ್ಷಾ ನಿಯಮಗಳ ಉಲ್ಲಂಘನೆ ಆರೋಪದಡಿ ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಕಾರ್ಮಿಕರ ಒಕ್ಕೂಟದ ಪದಾಧಿಕಾರಿಗಳನ್ನು ಅಮಾನತು ಖಂಡಿಸಿ ಅಹೋರಾತ್ರಿ ಧರಣಿ ನಡೆಸಲಾಗಿದ್ದು, ಕಾರ್ಮಿಕರ ಪ್ರತಿಭಟನೆಯ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯು ತಾತ್ಕಾಲಿಕ ಲಾಕೌಟ್ ಘೋಷಣೆ ಮಾಡಿದೆ.

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಕಾರ್ಮಿಕರ ಪ್ರತಿಭಟನೆ ಕುರಿತು ಪ್ರಕ್ರಿಯೆಸಿರುವ ಟೊಯೊಟಾ ಆಡಳಿತ ಮಂಡಳಿಯು ನೌಕರರು ಹಾಗೂ ಪಾಲುದಾರರ ಯೋಗಕ್ಷೇಮ ಕಾಯಲು ಕಂಪನಿಯು ಬದ್ದವಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಅನುಚಿತವಾಗಿ ವರ್ತಿಸುತ್ತಿರುವುದಕ್ಕೆ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದೆ.

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಕಂಪನಿಯ ಕಾನೂನು ಮತ್ತು ಸೇವಾ ನಿಯಮಗಳಂತೆ ಶಿಸ್ತು ಉಲ್ಲಂಘಿಸಿದ ಕಾರ್ಮಿಕರನ್ನು ಅಮಾನತುಗೊಳಿದ್ದು, ಕಾರ್ಮಿಕರ ಯೂನಿಯನ್ ಜೊತೆಗೂಡಿ ಸಮಸ್ಯೆ ಬಗೆಹರಿಸಲು ಮಾತುಕತೆ ನಡೆಸಲಾಗುತ್ತಿದೆ ಎಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಇನ್ನು ಟೊಯೊಟಾ ಕಂಪನಿಯು ಕಾರು ಮಾರಾಟ ಗುರಿತಲುಪಲು ಕಾರ್ಮಿಕರ ಮೇಲೆ ಒತ್ತಡ ಹೇರುತ್ತಿರುವುದಲ್ಲದೆ ದುಂಡಾವರ್ತನೆಯ ಆರೋಪಗಳು ಕೇಳಿಬಂದಿದ್ದು, ಜಪಾನ್‌ನಲ್ಲಿರುವ ಮುಖ್ಯ ಕಾರು ಉತ್ಪಾದನಾ ಘಟಕದ ಸೂಚನೆ ಮೇರೆಗೆ ಕಾರ್ಯನಿರ್ವಹಿಸುವಂತೆ ಒತ್ತಡ ಹಾಕಲಾಗುತ್ತಿದೆ.

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಆದರೆ ಕಾರ್ಮಿಕರ ನೀತಿ ನಿಯಮಗಳ ಪ್ರಕಾರ ಕಾರ್ಯನಿರ್ವಹಣೆಗೆ ಪಟ್ಟುಹಿಡಿರುವ ಕಾರ್ಮಿಕರ ಒಕ್ಕೂಟವು ಆಡಳಿತ ಮಂಡಳಿಯೊಂದಿಗೆ ವಾಗ್ವಾದ ನಡೆಸುತ್ತಿದ್ದು, ಶೀಘ್ರದಲ್ಲೇ ಕಾರ್ಮಿಕರ ಒಕ್ಕೂಟದ ಜೊತೆಗೂಡಿ ಸಮಸ್ಯೆ ಬಗೆಹರಿಸುವುದಾಗಿ ಕಂಪನಿಯು ಭರವಸೆ ನೀಡಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಬಿಡದಿಯಲ್ಲಿ ಕಾರ್ಮಿಕರ ಮುಷ್ಕರ- ಟೊಯೊಟಾ ಕಾರು ಉತ್ಪಾದನೆಯಲ್ಲಿ ಕುಂಠಿತ

ಇನ್ನು ಯುನಿಯನ್ ಕಾರ್ಮಿಕರ ಪ್ರತಿಭಟನೆಯಿಂದ ಲಾಕೌಟ್ ಆಗಿರುವ ಉತ್ಪಾದನಾ ಘಟಕದಲ್ಲಿ ಕಾರು ಉತ್ಪಾದನೆಯು ಕುಂಠಿತಗೊಂಡಿದ್ದು, ಗುತ್ತಿಗೆ ಕಾರ್ಮಿಕರೊಂದಿಗೆ ಕನಿಷ್ಠ ಪ್ರಮಾಣದ ಉತ್ಪಾದನೆ ಕೈಗೊಳ್ಳಲಾಗುತ್ತಿದೆ. ಇದರಿಂದ ದೀಪಾವಳಿ ಸಂಭ್ರಮಾಚರಣೆಯ ವೇಳೆ ಟೊಯೊಟಾ ಹೊಸ ಕಾರುಗಳ ವಿತರಣೆಯ ನೀರಿಕ್ಷೆಯಲ್ಲಿರುವ ಗ್ರಾಹಕರಿಗೆ ತುಸು ವಿಳಂಬವಾಗುವ ಸಾಧ್ಯತೆಗಳಿದ್ದು, ಪರಿಸ್ಥಿತಿ ತಿಳಿಗೊಳಿಸಲು ಹಲವು ಪ್ರಯತ್ನಗಳು ನಡೆದಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Declares Lockout At Bidadi Plant following Union Workers Protest. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X