ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ದಸರಾ ಸಂಭ್ರಮದ ವೇಳೆ ನೀರಿಕ್ಷೆಗೂ ಮೀರಿ ಹೊಸ ವಾಹನಗಳನ್ನು ಮಾರಾಟ ಮಾಡಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಮುಂಬರುವ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಯಲ್ಲಿದ್ದು, ಹೊಸ ಖರೀದಿಯನ್ನು ಆಕರ್ಷಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಲಾಗಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಲಾಕ್‌ಡೌನ್‌ ವಿಧಿಸಿದ್ದ ಅವಧಿಯಿಂದ ಕಳೆದ ತಿಂಗಳಿನ ತವಕವು ಹೊಸ ವಾಹನಗಳ ಮಾರಾಟದಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ದಸರಾ ಸಂಭ್ರಮವು ನೀರಿಕ್ಷೆಗೂ ಮೀರಿ ಆದಾಯ ತಂದುಕೊಟ್ಟಿದ್ದು, ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಟೊಯೊಟಾ ಕಂಪನಿಯು ಕೂಡಾ ಅಕ್ಟೋಬರ್ ಅವಧಿಯಲ್ಲಿ ಭಾರೀ ಪ್ರಮಾಣದ ವಾಹನ ಮಾರಾಟ ಮಾಡಿದ್ದು, ಕಳೆದ ತಿಂಗಳಿಗಿಂತಲೂ ಶೇ.52ರಷ್ಟು ಹೆಚ್ಚಿನ ಪ್ರಮಾಣದ ಕಾರು ಮಾರಾಟ ಮಾಡಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ದಸರಾ ಮತ್ತು ದೀಪಾವಳಿ ಪ್ರಯುಕ್ತ ಘೋಷಣೆ ಮಾಡಲಾಗಿದ್ದ ವಿವಿಧ ಡಿಸ್ಕೌಂಟ್‌ಗಳು ಮತ್ತು ಸರಳ ಸಾಲಸೌಲಭ್ಯಗಳು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದ್ದು, ಟೊಯೊಟಾ ಕೂಡಾ ಹಲವಾರು ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಇದೀಗ ದೀಪಾವಳಿ ವಿಶೇಷಕ್ಕೆ ಮತ್ತಷ್ಟು ಹೊಸ ಆಫರ್‌ಗಳನ್ನು ಘೋಷಣೆ ಮಾಡಿರುವ ಟೊಯೊಟಾ ಕಂಪನಿಯು ಆಯ್ದ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಯ್ಕೆಗಳೊಂದಿಗೆ ಆಕರ್ಷಕ ಇಎಂಐ ಮರುಪಾವತಿ ಆಯ್ಕೆಗಳನ್ನು ನೀಡುತ್ತಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ದೀಪಾವಳಿ ಸಂಭ್ರಮಕ್ಕಾಗಿ ಕಾರು ಖರೀದಿಸುವ ಗ್ರಾಹಕರಿಗೆ ಟೊಯೊಟಾ ಕಂಪನಿಯು ಯಾರಿಸ್ ಮತ್ತು ಗ್ಲಾಂಝಾ ಕಾರುಗಳ ಮೇಲೆ ಬೈಬ್ಯಾಕ್ ಆಯ್ಕೆ ನೀಡಿದ್ದರೆ ಇನ್ನುಳಿದ ಎಲ್ಲಾ ಕಾರು ಮಾದರಿಗಳ ಮೇಲೂ ಇಎಂಐ ಮರುಪಾವತಿಗಳಿಗೆ ಸರಳ ಆಯ್ಕೆಗಳನ್ನು ನೀಡುತ್ತಿದೆ. ಬೈಬ್ಯಾಕ್ ಆಯ್ಕೆಯಲ್ಲಿ ಕಾರು ಖರೀದಿಸುವ ಗ್ರಾಹಕರು ನಿಗದಿತ ಅವಧಿ ನಂತರ ಕಂಪನಿಗೆಯೇ ಕಾರನ್ನು ಉತ್ತಮ ಬೆಲೆಗೆ ಮರಳಿಸಬಹುದಾಗಿದ್ದು, ಇಎಂಐ ಮರುಪಾವತಿಗೂ ಕೂಡಾ ಗರಿಷ್ಠ ಅವಕಾಶ ನೀಡಲಾಗಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಆಕರ್ಷಕ ಇಎಂಐ ಮರು ಪಾವತಿ ಆಯ್ಕೆಯಿಂದಾಗಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ 3 ತಿಂಗಳು ವಿನಾಯ್ತಿ ಸಿಗಲಿದ್ದು, ಹೊಸ ಕಾರನ್ನು ಇದೀಗ ಖರೀದಿ ಮಾಡಿ 3 ತಿಂಗಳು ನಂತರ ಇಎಂಐ ಮರುಪಾವತಿಯನ್ನು ಆರಂಭಿಸಬಹುದಾಗಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಇಎಂಐ ಮರುಪಾವತಿಯ ಆಯ್ಕೆಯಲ್ಲಿ ಮತ್ತೊಂದು ವಿಧಾನವಿದ್ದು, ಟೊಯೊಟಾ ಕಾರು ಖರೀದಿಸಿದ ಆರು ತಿಂಗಳ ತನಕ ಇಎಂಐ ದರದಲ್ಲಿ ಅರ್ಧ ಮೊತ್ತವನ್ನು ಮಾತ್ರ ಪಾವತಿಸಬಹುದಾಗಿದೆ. ವಿನಾಯ್ತಿ ಪಡೆದ ಇಎಂಐ ದರವು ಇನ್ನುಳಿದ ಇಎಂಐ ದರಗಳಲ್ಲಿ ಸೇರ್ಪಡೆಗೊಂಡಿರಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊಸ ಕಾರು ಖರೀದಿಯನ್ನು ಸರಳಗೊಳಿಸಲು ಈ ಆಫರ್ ಸಾಕಷ್ಟು ಅನುಕೂಲಕರ ಎನ್ನಬಹುದು.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಇದಲ್ಲದೆ ಟೊಯೊಟಾ ಕಂಪನಿಯು ಗ್ಲಾಂಝಾ, ಯಾರಿಸ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಡಿಸ್ಕೌಂಟ್ ಸಹ ಘೋಷಣೆ ಮಾಡಿದ್ದು, ಆಯ್ದ ಕಾರುಗಳ ಖರೀದಿ ಮೇಲೆ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ ನೀಡುತ್ತಿದೆ.

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಗ್ಲಾಂಝಾ ಕಾರು ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.10 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5 ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಲಭ್ಯವಿದ್ದಲ್ಲಿ ಯಾರಿಸ್ ಕಾರು ಖರೀದಿ ಮೇಲೆ ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್‌ ಲಭ್ಯವಿದೆ.

MOST READ: ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ದೀಪಾವಳಿ ಸ್ಪೆಷಲ್: ಟೊಯೊಟಾ ವಿವಿಧ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಆಫರ್

ಇನ್ನು ಎಂಪಿವಿ ಕಾರು ಮಾದರಿಯಾದ ಇನೋವಾ ಕ್ರಿಸ್ಟಾ ಖರೀದಿ ಮೇಲೆ ರೂ. 15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.30 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ. 20 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆಫರ್‌ಗಳು ಸೀಮಿತ ಅವಧಿ ಮಾತ್ರ ಅನ್ವಯವಾಗಲಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Cars Festive Finance Schemes For November 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X