ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಐ20 ನ್ಯೂ ಜನರೇಷನ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸ್ಪೋರ್ಟಿ ವಿನ್ಯಾಸದೊಂದಿಗೆ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಐ20 ಕಾರು ಮಾದರಿಯು 2014ರಿಂದಲೂ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಬಾರಿ ಉನ್ನತೀಕರಣಗೊಳ್ಳುವ ಮೂಲಕ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಇದೀಗ ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ರಸ್ತೆಗಿಳಿದಿದೆ. ಹೊಸ ಕಾರು ಪ್ರಮುಖ ಮೂರು ಎಂಜಿನ್ ಮಾದರಿಗಳೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.79 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 11.17 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹೊಸ ಐ20 ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಆಕರ್ಷಕ ಸ್ಪೋರ್ಟಿ ಲುಕ್ ಮತ್ತು ವಿವಿಧ ಎಂಜಿನ್ ಆಯ್ಕೆಗಳು ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಲಿವೆ.

ಹೊಸ ಐ20 ಕಾರುಗಳ ವೆರಿಯೆಂಟ್ ಮತ್ತು ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)

ಮ್ಯಾಗ್ನಾ ಸ್ಪೋರ್ಟ್ಜ್ ಆಸ್ಟಾ ಆಸ್ಟಾ (ಒ)
1.2 ಲೀ ಕಪ್ಪಾ ಪೆಟ್ರೋಲ್ 5-ಎಂಟಿ ರೂ. 6,79,900 ರೂ. 7,59,900 ರೂ. 8,69,900 ರೂ. 9,19,900
ಐವಿಟಿ ರೂ. 8,59,900 ರೂ. 9,69,900
1.0 ಲೀ ಟರ್ಬೋ ಜಿಡಿಐ ಪೆಟ್ರೋಲ್ ಐಎಂಟಿ ರೂ. 8,79,900 ರೂ. 9,89,900
7-ಡಿಸಿಟಿ ರೂ. 10,66,900 ರೂ. 11,17,900
1.5 ಲೀ ಯು2 ಸಿಆರ್‌ಡಿಐ ಡೀಸೆಲ್ 6-ಎಂಟಿ ರೂ. 8,19,900 ರೂ. 8,99,900 ರೂ. 10,59,900
ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಆಕರ್ಷಕ ಎಕ್ಸ್‌ಟಿರಿಯರ್ ಡಿಸೈನ್ ಹೊಂದಿರುವ ಹೊಸ ಕಾರಿನಲ್ಲಿ ಏರೋ ಡೈನಾಮಿಕ್ ಆಗಿರುವ ಮುಂಭಾಗವು ಸ್ಪೋರ್ಟಿ ಲುಕ್ ನೀಡಿದ್ದು, ಈ ಕಾರಿನಲ್ಲಿ ಹೈ ಹಾಗೂ ಲೋ ಬೀಮ್ ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ಹೊಂದಿರುವ ಸ್ಲೀಕ್ ಆದ ಹೆಡ್‌ಲೈಟ್ ಕ್ಲಸ್ಟರ್ ಅನ್ನು ನೀಡಲಾಗಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಇದರ ಜೊತೆಗೆ ಈ ಕಾರು ಹ್ಯಾಲೊಜೆನ್ ಬಲ್ಬ್ ಹೊಂದಿರುವ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳನ್ನು ಸಹ ಹೊಂದಿದ್ದು, ಸ್ಪೋರ್ಟ್‌ನೆಸ್ ಹೆಚ್ಚಿಸಲು ಫ್ರಂಟ್ ಲಿಪ್ ಸ್ಪ್ಲಿಟರ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ಲೋಗೋವನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗಗಳು ಕ್ರೋಮ ಅಂಶಗಳನ್ನು ಹೊಂದಿಲ್ಲ. ಸೈಡ್ ಪ್ರೊಫೈಲ್ ನಲ್ಲಿ ಈ ಹ್ಯಾಚ್‌ಬ್ಯಾಕ್‌ ಕಾರಿಗೆ ಸೂಕ್ತವಾಗಿರುವ ಡ್ಯುಯಲ್-ಟೋನ್ ಐದು-ಸ್ಪೋಕ್ ನ 16-ಇಂಚಿನ ಅಲಾಯ್ ವ್ಹೀಲ್ ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಇಂಡಿಕೇಟರ್ ಹೊಂದಿರುವ ಕಪ್ಪು ಬಣ್ಣದ ಒಆರ್ ವಿಎಂಗಳನ್ನು ನೀಡಲಾಗಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹೊಸ ಕಾರಿನ ಡೋರ್ ಹ್ಯಾಂಡಲ್‌ ಹಾಗೂ ವಿಂಡೋಗಳ ಸುತ್ತಲೂ ಕ್ರೋಮ್‌ ಅಂಶಗಳನ್ನು ಜೋಡಣೆ ಮಾಡಲಾಗಿದ್ದು, ಹೊಸ ಐ20 ಕಾರಿನಲ್ಲಿ ಕಪ್ಪು ರೂಫ್ ಹಾಗೂ ಪ್ರೀಮಿಯಂ ಟಚ್ ಹೊಂದಿರುವ ಸನ್‌ರೂಫ್ ನೀಡಲಾಗಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹಿಂಭಾಗದಲ್ಲಿ ಜೆಡ್ ಶೇಫ್‌ನಲ್ಲಿರುವ ಎಲ್ಇಡಿ ಅಂಶವನ್ನು ಹೊಂದಿರುವ ಸ್ಲೀಕ್ ಟೆಲ್‌ಲೈಟ್ ಯುನಿಟ್, ವಾಷರ್ ಹೊಂದಿರುವ ಹಿಂಭಾಗದ ವೈಪರ್ ಅನ್ನು ಸಹ ನೀಡಲಾಗಿದೆ. ಹಾಗೆಯೇ ಶಾರ್ಕ್ ಫಿನ್ ಆಂಟೆನಾ ಹಾಗೂ ಫೇಕ್ ರೇರ್ ಡಿಫ್ಯೂಸರ್ ಗಳು ಹೊಸ ಐ20 ಹ್ಯಾಚ್ ಬ್ಯಾಕ್ ಕಾರಿನ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹ್ಯುಂಡೈ ಕಂಪನಿಯು ಹೊರಭಾಗದಲ್ಲಿನ ವಿನ್ಯಾಸದಂತೆ ಕಾರಿನ ಇಂಟಿರಿಯರನ್ನು ಕೂಡಾ ಪ್ರೀಮಿಯಂ ಅಂಶಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಹೊಸ ಐ20 ಕಾರಿನ ಇಂಟಿರಿಯರ್ ರೆಡ್ ಹೈ ಲೈಟ್ ಗಳೊಂದಿಗೆ ಕಪ್ಪು ಬಣ್ಣವನ್ನು ಹೊಂದಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹೊಸ ಕಾರಿನಲ್ಲಿ ಆಕರ್ಷಕ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಪ್ರೇರಿತ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಬೂಟ್‌ ಸ್ಪೆಸ್‌ನಲ್ಲಿ ಸಬ್ ವೂಫರ್ ಹಾಗೂ ಏಳು-ಸ್ಪೀಕರ್ ಬೋಸ್ ಸಿಸ್ಟಂಗಳನ್ನು ನೀಡಲಾಗಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಜೊತೆಗೆ ಆರಾಮದಾಯಕ ಚಾಲನೆಗೆ ಪೂರಕವಾದ ಲೆದರ್ ವ್ರಾಪ್ ಸ್ಟೀಯರಿಂಗ್ ವ್ಹೀಲ್, ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಇನ್ಫೋಟೇನ್‌ಮೆಂಟ್ ಸಿಸ್ಟಂ ಕಂಟ್ರೋಲ್ ಮಾಡಲು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಕ್ರೂಸ್ ಕಂಟ್ರೋಲ್ ಗಳನ್ನು ಕಂಟ್ರೋಲ್ ಮಾಡುವ ಬಟನ್ ಗಳಿವೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಕಪ್ಪು ಬಣ್ಣದ ಸೀಟುಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ ಗಳು, 88 ಎಂಎಂ ಲೆಗ್ ರೂಂ ಸೌಲಭ್ಯವಿದ್ದು, ಹಳೆಯ ಕಾರಿಗಿಂತಲೂ 26 ಲೀಟರ್ ಹೆಚ್ಚು ಬೂಟ್ ಅಂದರೆ 311 ಲೀಟರ್ ನಷ್ಟು ಬೂಟ್ ಅನ್ನು ಹೊಂದಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಐ20 ಕಾರಿನಲ್ಲಿ ಹ್ಯುಂಡೈ ಕಂಪನಿಯು ಒಂದು ಡೀಸೆಲ್ ಮತ್ತು ಎರಡು ಪೆಟ್ರೋಲ್ ಎಂಜಿನ್‌ಗಳ ಆಯ್ಕೆ ನೀಡಿದ್ದು, 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯು ಡಿಸಿಟಿ ಅಥವಾ ಆರು-ಸ್ಪೀಡಿನ ಐಎಂಟಿ ಟ್ರಾನ್ಸ್ ಮಿಷನ್‌ನೊಂದಿಗೆ 120-ಬಿಹೆಚ್‌ಪಿ ಉತ್ಪಾದಿಸುತ್ತದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

1.2-ಲೀಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರುವ ಎನ್‌ಎ ಕಪ್ಪಾ ಎಂಜಿನ್ ಮಾದರಿಯು ಐದು-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಹೆಚ್‌ಪಿ ಪವರ್ ಉತ್ಪಾದಿಸಲಿದ್ದರೆ, 1.5-ಲೀಟರಿನ ಡೀಸೆಲ್ ಎಂಜಿನ್ ಮಾದರಿಯು ಆರು-ಸ್ಪೀಡಿನ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ 100-ಬಿಹೆಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಸ್ಪೋರ್ಟಿ ವಿನ್ಯಾಸಕ್ಕೆ ತಕ್ಕಂತೆ ಹೊಸ ಕಾರಿನಲ್ಲಿ 6 ಸಿಂಗಲ್ ಟೋನ್ ಮತ್ತು 2 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಪೊಲಾರ್ ವೈಟ್, ಟೈಪೊನ್ ಸಿಲ್ವರ್, ಟೈಟಾನ್ ಗ್ರೇ, ಫ್ಲೈರಿ ರೆಡ್, ಸ್ಟೆರಿ ನೈಟ್ ಮತ್ತು ಮೆಟಾಲಿಕ್ ಕಾಪರ್ ಬಣ್ಣ ಹೊಂದಿದ್ದರೆ ಡ್ಯುಯಲ್ ಟೋನ್‌ನಲ್ಲಿ ಪೊಲಾರ್ ವೈಟ್/ಬ್ಲ್ಯಾಕ್, ಫ್ಲೈರಿ ರೆಡ್/ಬ್ಲ್ಯಾಕ್ ಬಣ್ಣಗಳ ಆಯ್ಕೆ ಲಭ್ಯವಿದೆ.

ಹೊಚ್ಚ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಿಡುಗಡೆ

ಈ ಮೂಲಕ ಹಳೆಯ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿ ಮತ್ತು ಶಾರ್ಪ್ ಎಡ್ಜ್ ಡಿಸೈನ್ ಹೊಂದಿರುವ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮಾರುತಿ ಸುಜುಕಿ ಬಲೆನೊ ಮತ್ತು ಟಾಟಾ ಆಲ್‌ಟ್ರೊಜ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಸೆಗ್ಮೆಂಟ್ ಇನ್ ಫೀಚರ್ಸ್‌ಗಳಲ್ಲಿ ಪ್ರತಿಸ್ಪರ್ಧಿ ಕಾರುಗಳಿಂತಲೂ ಹೊಸ ಐ20 ಸಾಕಷ್ಟು ಸುಧಾರಿತ ಅಂಶಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
All-New Hyundai i20 Premium Hatchback Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X