ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ವಾಹನ ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟರ್ ಇಂಡಿಯಾ, ಬೆಂಗಳೂರಿನ ಬಿಡದಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯನ್ನು ಪುನಃ ಆರಂಭಿಸಿದೆ. ಟೊಯೊಟಾ ಕಂಪನಿಯು ಕಳೆದ ವಾರ ಈ ಘಟಕದಲ್ಲಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ಜೂನ್ 17ರಂದು ಟೊಯೊಟಾದ ಈ ಉತ್ಪಾದನಾ ಘಟಕದ ಇಬ್ಬರು ಸಿಬ್ಬಂದಿಗಲಲ್ಲಿ ಕರೋನಾ ವೈರಸ್ ಸೋಂಕು ಪತ್ತೆಯಾಗಿತ್ತು. ಮೊದಲ ಉದ್ಯೋಗಿಗೆ ಜೂನ್ 7ರಂದು ಸೋಂಕು ತಗುಲಿರುವುದು ಪತ್ತೆಯಾದರೆ, ಎರಡನೇ ಉದ್ಯೋಗಿಗೆ ಜೂನ್ 16ರಂದು ಸೋಂಕು ತಗುಲಿರುವುದು ಪತ್ತೆಯಾಗಿತ್ತು.

ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ಘಟಕವನ್ನು ಪೂರ್ತಿಯಾಗಿ ಸ್ವಚ್ವಗೊಳಿಸಿ, ಸುರಕ್ಷತೆಯನ್ನು ಖಚಿತಪಡಿಸಿದ ನಂತರ, ಉತ್ಪಾದನೆಯನ್ನು ಪುನರಾರಂಭಿಸಲು ಕಂಪನಿಯು ನಿರ್ಧರಿಸಿದೆ. ಟೊಯೊಟಾ ಕಂಪನಿಯು ಉತ್ಪಾದನಾ ಘಟಕದ ಸಿಬ್ಬಂದಿ ಕರೋನಾ ವೈರಸ್ ಸೋಂಕಿಗೆ ಒಳಗಾದ ಮೂರನೇ ಕಾರು ತಯಾರಕ ಕಂಪನಿಯಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ಟೊಯೊಟಾದ ಹೊರತಾಗಿ, ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಂಪನಿಯ ಸಿಬ್ಬಂದಿ ಸಹ ಕರೋನಾ ಸೋಂಕಿಗೆ ಒಳಗಾಗಿದ್ದರು. ಟೊಯೊಟಾ ಕಿರ್ಲೋಸ್ಕರ್ ತನ್ನ ಹೇಳಿಕೆಯಲ್ಲಿ, ಬಿಡದಿಯ ಉತ್ಪಾದನಾ ಘಟಕದಲ್ಲಿರುವ ಇಬ್ಬರು ಸಿಬ್ಬಂದಿಗಳಲ್ಲಿ ಕರೋನಾ ವೈರಸ್ ಪತ್ತೆಯಾಗಿದೆ ಎಂದು ಹೇಳಿತ್ತು.

ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ಈ ಕಾರಣಕ್ಕೆ ಕಂಪನಿಯು ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಇತರ ನೌಕರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನಾ ಘಟಕವನ್ನು ಸ್ವಚ್ವಗೊಳಿಸಿ ಸ್ಯಾನಿಟೈಜ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ಉತ್ಪಾದನಾ ಘಟಕದಲ್ಲಿನ ಸುರಕ್ಷತೆಯನ್ನು ಖಾತರಿಪಡಿಸಿ ಕೊಂಡು ಎಲ್ಲಾ ಕಡ್ಡಾಯ ನಿಯಮಗಳನ್ನು ಅನುಸರಿಸಿದ ನಂತರ, ಉತ್ಪಾದನೆಯನ್ನು ಪುನರಾರಂಭಿಸಲು ಕಂಪನಿಯು ಸ್ಥಳೀಯ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದಿಂದ ಅನುಮತಿಯನ್ನು ಪಡೆಯಲಾಗಿದೆ ಎಂದು ಕಂಪನಿ ಹೇಳಿದೆ.

ತಾತ್ಕಾಲಿಕ ವಿರಾಮದ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಟೊಯೊಟಾ

ಸೋಂಕಿಗೆ ತುತ್ತಾದ ಇಬ್ಬರೂ ಉದ್ಯೋಗಿಗಳೊಂದಿಗೆ ಕಂಪನಿಯು ಸಂಪರ್ಕದಲ್ಲಿದ್ದು, ಅವರ ವೈದ್ಯಕೀಯ ಚಿಕಿತ್ಸೆಗಳನ್ನು ನೋಡಿಕೊಳ್ಳುತ್ತಿದೆ. ಜೊತೆಗೆ ಕಂಪನಿಯು ಸೋಂಕಿತ ಉದ್ಯೋಗಿಗಳ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಎದುರಿಸಲು ಅವರಿಗೆ ನಿರ್ದೇಶನಗಳನ್ನು ನೀಡುತ್ತಿದೆ.

Most Read Articles

Kannada
English summary
Toyota resumes operations in Bidadi plant after temporary halt. Read in Kannada.
Story first published: Tuesday, June 23, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X