ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಜಪಾನ್ ಮೂಲದ ವಾಹನ ತಯಾರಕ ಕಂಪನಿ ಟೊಯೊಟಾ ಕ್ಯಾಬ್ ಅಗ್ರಿಗೇಟರ್‍ಗಳಿಗಾಗಿ ಹೊಸ ಯಾರೀಸ್ ರೂಪಾಂತರವನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಟೊಯೊಟಾ ಕಂಪನಿಯ ಕಾರುಗಳು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಯಾರೀಸ್ ಕಾರನ್ನು ಮುಖ್ಯವಾಗಿ ಖಾಸಗಿ ಖಾರೀದಿದಾರರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸಲಿದೆ. ಆದರೆ ಈ ಪ್ಲೀಟ್ ಕಾರು ಉತ್ತಮ ಸಾಮರ್ಥ್ಯವನ್ನು ಹೊಂದಿರಲಿದೆ. ಪ್ಲೀಟ್ ರೂಪಾಂತರದ ವೇಗವನ್ನು ಸೀಮಿತಗೊಳಿಬಹುದು. ಟೊಯೊಟಾ ಕಂಪನಿಯು ತನ್ನ ಎಟಿಯೋಸ್ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇಟಿಯೋಸ್ ಕಾರು ಮಾರಾಟದಲ್ಲಿ ಕುಸಿತವಾಗಿರುವುದರಿಂದ ಸ್ಥಗಿತಗೊಳಿಸಿದರು. ಆದರೆ ಎಟಿಯೋಸ್ ಕಾರು ಖಾಸಗಿ ಮತ್ತು ಕಮರ್ಷಿಯಲ್ ಖರೀದಿದಾರರಿಗೆ ಲಭ್ಯವಿದೆ.

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಟೊಯೊಟಾ ಯಾರೀಸ್ ಕಾರಿನಲ್ಲಿ 1.5 ಲೀಟರಿನ 4 ಸಿಲಿಂಡರ್ ಬಿ‍ಎಸ್ 4 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 107 ಬಿ‍‍ಹೆಚ್‍‍ಪಿ ಪವರ್ ಹಾಗೂ 140 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಥವಾ 7 ಸ್ಪೀಡಿನ ಸಿವಿಟಿ ಗೇರ್‍‍ಬಾಕ್ಸ್ ನೀಡಲಾಗುವುದು.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಟೊಯೊಟಾ ಇಟಿಯೋಸ್‍‍ನಲ್ಲಿ ಅಳವಡಿಸಲಾಗಿರುವ ಪೆಟ್ರೋಲ್ ಎಂಜಿನ್ ಅನ್ನು ಯಾರೀಸ್‍‍ನಲ್ಲಿಯೂ ಅಳವಡಿಸಿದೆ. ಆದರೆ ಯಾರೀಸ್‍‍ನಲ್ಲಿರುವ ಎಂಜಿನ್ ಅನ್ನು ಡ್ಯುಯಲ್ ವಿವಿಟಿ - ಐ ಸಿಸ್ಟಂಗೆ ಅಪ್‍‍ಗ್ರೇಡ್ ಮಾಡಲಾಗಿದೆ.

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಈ ಸಿಸ್ಟಂ ಎಂಜಿನ್‍‍ನಲ್ಲಿರುವ ವಾಲ್ವ್ ಗಳನ್ನು ಆರ್‍‍ಪಿ‍ಎಂ ಮೂಲಕ ನಿಯಂತ್ರಿಸುತ್ತದೆ. ಇದರಿಂದಾಗಿ ಎಂಜಿನ್ ಪರ್ಫಾಮೆನ್ಸ್ ಹಾಗೂ ಫ್ಯೂಯಲ್ ಎಫಿಶಿಯನ್ಸಿ ಹೆಚ್ಚುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಯಾರೀಸ್ ಕಾರು ಡ್ಯುಯಲ್ ಟೋನ್ ಬಣ್ಣ, ಪಿಯಾನೊ ಬ್ಲಾಕ್ ಫಿನಿಶ್ ಹೊಂದಿರುವ ಫ್ರಂಟ್ ಗ್ರಿಲ್, ಎಲ್‍ಇ‍‍ಡಿ ಡಿ‍ಆರ್‍ಎಲ್ ಹೊಂದಿರುವ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಗೂ ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳನ್ನು ಹೊಂದಿದೆ.

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಪ್ರಯಾಣಿಕರ ಸುರಕ್ಷತೆಗಾಗಿ ಯಾರೀಸ್ ಕಾರಿನಲ್ಲಿ 7 ಏರ್‍‍ಬ್ಯಾಗ್, ಹಿಲ್ ಸ್ಟಾರ್ಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಎ‍‍ಬಿ‍ಎಸ್ ಹಾಗೂ ಇ‍‍ಬಿ‍ಡಿ, ಬ್ರೇಕ್ ಅಸಿಸ್ಟ್, ಟಿ‍ಪಿ‍ಎಂ‍ಎಸ್, ಫ್ರಂಟ್ ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮ್ಯಾಂಡರ್ ಹಾಗೂ ಹೈ ಸ್ಪೀಡ್ ಅಲರ್ಟ್ ಸಿಸ್ಟಂಗಳಿವೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಇದರೊಂದಿಗೆ ಟೊಯೊಟಾ ಕಂಪನಿಯು ತನ್ನ ಹೊಸ ತಲೆಮಾರಿನ ಲ್ಯಾಂಡ್ ಕ್ರೂಸರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ ಹಲವಾರು ದಶಕಗಳಿಂದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಯಾಗಿದೆ.

ಬಿಡುಗಡೆಯಾಗಲಿದೆ ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರು

ಸಾಮಾನ್ಯ ಯಾರೀಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವರ್ನಾ ಹಾಗೂ ಮಾರುತಿ ಸುಜುಕಿಯ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಟೊಯೂಟಾ ಕಂಪನಿಯು ಯಾರೀಸ್ ಕಮರ್ಷಿಯಲ್ ವೆರಿಯೆಂಟ್ ಕಾರನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Yaris Commercial Variant Launching Soon. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X