ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಕೆಲವು ನಗರಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಇ-ಚಲನ್ ನೀಡಲಾಗುತ್ತದೆ. ಕೆಲವು ವಾಹನ ಸವಾರರು ಇ-ಚಲನ್ ನೀಡಿದರೂ ದಂಡವನ್ನು ಪಾವತಿಸುವುದೇ ಇಲ್ಲ. ಈ ಕಾರಣಕ್ಕೆ ಥಾಣೆ ಪೊಲೀಸರು ಇ-ಚಲನ್ ಪಡೆದು ದಂಡ ಪಾವತಿಸದವರ ಕಾರುಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಪ್ರತಿದಿನ ಥಾಣೆ ಪೊಲೀಸರು 2500ಕ್ಕೂ ಹೆಚ್ಚು ಇ-ಚಲನ್‌ಗಳನ್ನು ನೀಡುತ್ತಾರೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಚಲನ್‌ಗಳು ಪಾವತಿಯಾಗದ ಕಾರಣ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿಯಮವು ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ. ಮೊದಲು ದಂಡ ಪಾವತಿಸಲು 10 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ನಂತರ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು.

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಥಾಣೆ ಟ್ರಾಫಿಕ್ ಪೊಲೀಸರು, ಮಹಾಟ್ರಾಫಿಕ್ ಆ್ಯಪ್, ವೆಬ್‌ಸೈಟ್, ಪೇಟಿಎಂಗಳಂತಹ ಅನೇಕ ಪಾವತಿ ಆಯ್ಕೆಗಳನ್ನು ನೀಡಿದ್ದರೂ ಜನರು ದಂಡ ಪಾವತಿಸುತ್ತಿಲ್ಲ. ಹಾಗಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಥಾಣೆ ಸಂಚಾರಿ ಪೊಲೀಸರು 2019ರ ಫೆಬ್ರವರಿ 14ರಿಂದ ಇ-ಚಲನ್ ನೀಡುತ್ತಿದ್ದಾರೆ. 18 ಪೋಸ್ಟ್‌ ಹಾಗೂ 300 ಇ-ಚಲನ್ ಸಾಧನಗಳ ಮೂಲಕ ಪ್ರತಿದಿನ 2500 ಇ-ಚಲನ್‌ಗಳನ್ನು ನೀಡಲಾಗುತ್ತದೆ.

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

2019ರಲ್ಲಿ ಥಾಣೆ ಪೊಲೀಸರು ರೂ.21 ಕೋಟಿ ದಂಡ ವಿಧಿಸಿ 6,30,000 ಇ-ಚಲನ್‌ಗಳನ್ನು ನೀಡಿದ್ದಾರೆ. 2020ರಲ್ಲಿ ಲಾಕ್‌ಡೌನ್ ನಡುವೆಯೂ ರೂ.22 ಕೋಟಿ ದಂಡ ವಿಧಿಸಿ 5,52,000 ಇ-ಚಲನ್‌ಗಳನ್ನು ನೀಡಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಈ ಪೈಕಿ 50%ಗೂ ಹೆಚ್ಚು ಜನರು ಇ-ಚಲನ್ ದಂಡವನ್ನು ಪಾವತಿಸಿಲ್ಲ. ದಂಡ ಸಂಗ್ರಹಿಸದ ಕಾರಣಕ್ಕೆ ಜನರು ಮತ್ತೆ ಮತ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ದಂಡವನ್ನು ಸಂಗ್ರಹಿಸಲು ಪೊಲೀಸರು ಥಾಣೆ, ಡೊಂಬಿವಾಲಿ, ಕಲ್ಯಾಣ್, ಬದ್ಲಾಪುರ, ಉಲ್ಹಾಸ್‌ನಗರ ಹಾಗೂ ಭಿವಾಂಡಿಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಲಿದ್ದು, ದಂಡ ಪಾವತಿಸದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಈ ನಡುವೆ ಮುಂಬೈನ ಬೆಸ್ಟ್ ಕಾರ್ಪೊರೇಷನ್ ಶೀಘ್ರದಲ್ಲೇ 100 ಹೊಸ ಡಬಲ್ ಡೆಕ್ಕರ್ ಬಸ್ಸುಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸಿದೆ. ಈ ಬಸ್‌ಗಳನ್ನು ಈಗ ಚಾಲನೆಯಲ್ಲಿರುವ 75 ಡಬಲ್ ಡೆಕ್ಕರ್ ಬಸ್‌ಗಳ ಬದಲು ರಸ್ತೆಗಿಳಿಸಲಾಗುವುದು.

ದಂಡ ಪಾವತಿಸದವರ ಕಾರುಗಳನ್ನು ವಶಕ್ಕೆ ಪಡೆಯಲು ಮುಂದಾದ ಸಂಚಾರಿ ಪೊಲೀಸರು

ಈ ಹೊಸ ಬಸ್ಸುಗಳು ಹಲವು ಆಧುನಿಕ ಫೀಚರ್ ಗಳನ್ನು ಹೊಂದಿವೆ. ಈ ಬಸ್ಸುಗಳು ಸಿಸಿಟಿವಿ ಕ್ಯಾಮೆರಾ, ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಕಮ್ಯೂನಿಕೇಶನ್ ಡಿವೈಸ್, ಹೆಲ್ತ್ ಕಿಟ್‌ಗಳನ್ನು ಹೊಂದಿರಲಿವೆ. ಈ ಬಸ್‌ಗಳಲ್ಲಿ ಪ್ರಯಾಣಿಕರು ಹತ್ತಲು, ಇಳಿಯಲು ಮುಂಭಾಗ ಹಾಗೂ ಹಿಂಭಾಗದಲ್ಲಿ ಡೋರುಗಳನ್ನು ನೀಡಲಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Traffic police to seize cars if e-challan not paid on time. Read in Kannada.
Story first published: Saturday, November 21, 2020, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X