ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಭಾರತದಲ್ಲಿ ವಾಹನಗಳಿಗೆ ಸಂಬಂಧಿಸಿದ ಹೊಸ ಕಾನೂನುಗಳು ಜಾರಿಯಾಗುತ್ತಲೇ ಇರುತ್ತವೆ. ಕೇಂದ್ರ ಸರ್ಕಾರದ ಜೊತೆಗೆ ಹಲವು ರಾಜ್ಯ ಸರ್ಕಾರಗಳೂ ಸಹ ವಾಹನಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೆ ತರುತ್ತವೆ.

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈಗ ರಾಜ್ಯ ಸರ್ಕಾರವೊಂದು ವಾಹನಗಳಲ್ಲಿ ಲೋಕೇಶನ್ ಟ್ರಾಕರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವು ಕಮರ್ಷಿಯಲ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಅದರಂತೆ, ಶಾಲಾ, ಕಾಲೇಜು ವಾಹನಗಳು, ಟೂರ್ ಬಸ್ಸುಗಳು, ಲಾರಿ, ಟ್ರಕ್ ​​ಸೇರಿದಂತೆ ಎಲ್ಲಾ ಕಮರ್ಷಿಯಲ್ ವಾಹನಗಳು ಟ್ರಾಕರ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರದ ಸಾರಿಗೆ ಆಯುಕ್ತರಾದ ಅವಿನಾಶ್ ಥಕ್ನೆ, ಜಿಪಿಎಸ್ ಸಾಧನಗಳು ವಾಹನಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ನೆರವಾಗುತ್ತವೆ. ಇದರಿಂದ ಅಪರಾಧಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಯೋಜನೆಯು ಕೇರಳದಲ್ಲಿ ಯಶಸ್ವಿಯಾಗಿದೆ. ಅಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಮೂಲಕ ಆಕ್ರಮಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು. ಈ ತಂತ್ರಜ್ಞಾನವನ್ನು ಜಾರಿಗೊಳಿಸುವ ಮೂಲಕ ಅಕ್ರಮಗಳನ್ನು ನಿಯಂತ್ರಿಸಬಹುದು.

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಇದರಿಂದ ವಾಹನಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು. ವಾಹನವು ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದೆಯೇ ಅಥವಾ ನಿಯಮಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದನ್ನು ಸುಲಭವಾಗಿ ತಿಳಿಯಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಇದರಿಂದ ವಾಹನವೊಂದು ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಆ ಮಾರ್ಗದಲ್ಲಿರುವ ಸಂಚಾರ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಅವರು ತಕ್ಷಣ ವಾಹನವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಇದರಿಂದ ಪ್ರಮುಖ ಅಪರಾಧ ಘಟನೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಹೊಸ ನಿಯಮದ ಹಿನ್ನೆಲೆಯಲ್ಲಿ ಕೆಲವು ಮಾರಾಟಗಾರರನ್ನು ಆಯ್ಕೆ ಮಾಡಲಾಗಿದೆ. ಅವರ ಮೂಲಕ ಮಾತ್ರವೇ ಜಿಪಿಎಸ್ ಸಾಧನವನ್ನು ಖರೀದಿಸಬೇಕು ಎಂದು ಹೇಳಲಾಗಿದೆ. ಈ ಸಾಧನಗಳನ್ನು ನೇರವಾಗಿ ಮಹಾರಾಷ್ಟ್ರದ ಟ್ರಾಫಿಕ್ ಕಂಟ್ರೋಲ್ ರೂಂಗೆ ಸಂಪರ್ಕಿಸಲಾಗುವುದು. ಅಲ್ಲಿ ಎಲ್ಲಾ ವಾಹನಗಳನ್ನು ಮೇಲ್ವಿಚಾರಣೆ ಮಾಡಲಾಗುವುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಉಪಕರಣವನ್ನು ಅಳವಡಿಸುವುದರಿಂದ ಕಾರು ಕಳ್ಳತನವಾಗುವುದನ್ನು ತಡೆಯಬಹುದು. ಈ ಕಾರಣಕ್ಕೆ ವಾಹನ ಮಾರಾಟಗಾರರು ಹೊಸದಾಗಿ ಮಾರಾಟ ಮಾಡಲಾಗುತ್ತಿರುವ ಹೊಸ ವಾಹನಗಳಲ್ಲಿ ಈ ಸಾಧನವನ್ನು ಅಳವಡಿಸುತ್ತಿದ್ದಾರೆ.

ಕಮರ್ಷಿಯಲ್ ವಾಹನಗಳಿಗೆ ಲೋಕೇಶನ್ ಟ್ರಾಕರ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಹೊಸ ಎಲೆಕ್ಟ್ರಿಕ್ ವಾಹನಗಳಲ್ಲಿ ಈ ಸಾಧನವನ್ನು ಅಳವಡಿಸುವುದು ಕಡ್ಡಾಯವಾಗಿದೆ. ಈ ಸಾಧನವನ್ನು ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಸಾಧನಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಗಮನಿಸಿ: ಈ ಫೋಟೋಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Transport department mandates location tracker for commercial vehicles in Maharashtra. Read in Kannada.
Story first published: Wednesday, December 16, 2020, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X