Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೋಲ್ ಶುಲ್ಕಗಳಲ್ಲಿ ರಿಯಾಯಿತಿ ಪಡೆಯಲು ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ
ಎಲ್ಲಾ ರೀತಿಯ ಟೋಲ್ ಶುಲ್ಕಗಳಿಂದ ರಿಯಾಯಿತಿ ಪಡೆಯಲು ವಾಹನ ಮಾಲೀಕರು ವಾಹನಗಳಲ್ಲಿ ಫಾಸ್ಟ್ಯಾಗ್ ಹೊಂದಿರುವುದನ್ನು ಸಾರಿಗೆ ಇಲಾಖೆಯು ಕಡ್ಡಾಯಗೊಳಿಸಿದೆ. 24 ಗಂಟೆಗಳ ಒಳಗೆ ಹಿಂದಿರುಗುವ ವಾಹನಗಳಿಗೂ ಸಹ ಇದು ಅನ್ವಯವಾಗಲಿದೆ.

ಜಿಎಸ್ಆರ್ 523 (ಇ) ಪ್ರಕಾರ 2008ರ ರಾಷ್ಟ್ರೀಯ ಹೆದ್ದಾರಿ ಸುಂಕ ನಿಯಮಗಳನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಸೋಮವಾರ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿಗಳನ್ನು ಮತ್ತಷ್ಟು ಉತ್ತೇಜಿಸಲು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ. ವಾಹನವು ಮಾನ್ಯವಾದ ಫಾಸ್ಟ್ಯಾಗ್ ಹೊಂದಿದ್ದರೆ ಮಾತ್ರ 24 ಗಂಟೆಗಳ ಒಳಗೆ ರಿಟರ್ನ್ ಆಗುವ ವಾಹನಗಳಿಗೆ ರಿಯಾಯಿತಿ ನೀಡಲಾಗುವುದು.

ರಿಯಾಯಿತಿಗಾಗಿ ಪಾವತಿಸಬೇಕಾದ ಶುಲ್ಕವನ್ನು ಪ್ರೀ-ಪೇಯ್ಡ್ ಉಪಕರಣ, ಸ್ಮಾರ್ಟ್ ಕಾರ್ಡ್ ಅಥವಾ ಫಾಸ್ಟ್ಯಾಗ್‌ಗಳ ಮೂಲಕ ಅಥವಾ ಬೋರ್ಡ್ ಯುನಿಟ್ (ಟ್ರಾನ್ಸ್‌ಪಾಂಡರ್) ಅಥವಾ ಇನ್ಯಾವುದೇ ಸಂಬಂಧಪಟ್ಟ ಉಪಕರಣದ ಮೂಲಕ ಪಾವತಿಸಲಾಗುತ್ತದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ ರಿಯಾಯಿತಿ ಲಭ್ಯವಿದ್ದಲ್ಲಿ, ಪ್ರೀ ರೆಸಿಪ್ಟ್ ಅಥವಾ ನೋಟಿಸ್ ಗಳ ಅಗತ್ಯವಿಲ್ಲ. 24 ಗಂಟೆಗಳ ಒಳಗೆ ಹಿಂತಿರುಗಿದರೆ ಆಟೋಮ್ಯಾಟಿಕ್ ಆಗಿ ರಿಯಾಯಿತಿ ನೀಡಲಾಗುತ್ತದೆ. ಈ ರಿಯಾಯಿತಿ ಮೊತ್ತವನ್ನು ಆಟೋಮ್ಯಾಟಿಕ್ ಆಗಿ ಚಾಲಕರ ಖಾತೆಗೆ ಜಮಾ ಮಾಡಲಾಗುತ್ತದೆ.

ಆರ್‌ಎಫ್‌ಐಡಿ ಆಧಾರಿತ ಫಾಸ್ಟ್ಯಾಗ್ ಗಳನ್ನು 2014ರಲ್ಲಿ ಪರಿಚಯಿಸಲಾಯಿತು. ಈ ಟ್ಯಾಗ್ ಅನ್ನು ವಾಹನಗಳ ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸಲಾಗುತ್ತದೆ. ಟೋಲ್ ಪ್ಲಾಜಾ ಮೂಲಕ ಹಾದುಹೋದ ನಂತರ, ಟೋಲ್‌ನಲ್ಲಿರುವ ಸೆನ್ಸಾರ್ ಗಳು ಫಾಸ್ಟ್ಯಾಗ್ ಗಳನ್ನು ಸ್ಕ್ಯಾನ್ ಮಾಡಿ ಲಿಂಕ್ ಮಾಡಲಾಗಿರುವ ಖಾತೆಯಿಂದ ಟೋಲ್ ಮೊತ್ತವನ್ನು ಆಟೋಮ್ಯಾಟಿಕ್ ಆಗಿ ಕಡಿತಗೊಳಿಸುತ್ತವೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸಾರಿಗೆ ಇಲಾಖೆಯ ಆದೇಶದಂತೆ, ಪ್ರತಿ ಟೋಲ್ ಪ್ಲಾಜಾದಲ್ಲಿ 25%ನಷ್ಟು ಟೋಲ್ ಲೇನ್‌ಗಳನ್ನು ನಗದು ವಹಿವಾಟುಗಳಿಗೆ ಕಾಯ್ದಿರಿಸಲಾಗಿದೆ. ಉಳಿದ ಲೇನ್‌ಗಳನ್ನು ಫಾಸ್ಟ್ಯಾಗ್ ವಹಿವಾಟುಗಳಿಗೆ ಮೀಸಲಿಡಲಾಗಿದೆ.

ಫಾಸ್ಟ್ಯಾಗ್ ಲೇನ್‌ನಲ್ಲಿ ಫಾಸ್ಟ್ಯಾಗ್ ಹೊಂದದೆ ಸಂಚರಿಸುವ ವಾಹನಗಳಿಗೆ ಎರಡು ಪಟ್ಟು ದಂಡ ವಿಧಿಸುವ ಅವಕಾಶವಿದೆ. ಫಾಸ್ಟ್ಯಾಗ್ ಗಳಿಂದ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವುದು ತಪ್ಪುತ್ತದೆ.