ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ರಸ್ತೆ ನಿರ್ಮಾಣ ಕಾರ್ಯಗಳನ್ನು ಸುಗಮಗೊಳಿಸಲು ಹಾಗೂ ಕೈಗೆಟುಕುವಂತೆ ಮಾಡಲು ನಿರ್ಮಾಣ ವಾಹನಗಳಿಗೆ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯದಂತೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ಗಣಿಗಾರಿಕೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಲ್ಲಿ ಬಳಸಲಾಗುವ ಭಾರೀ ವಾಹನಗಳಿಗೆ ಸಾಮಾನ್ಯ ವಾಹನದ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲವೆಂದು ಇಲಾಖೆ ಹೇಳಿದೆ. ಈ ಕಾರಣಕ್ಕೆ ಅವುಗಳನ್ನು ಮೋಟಾರು ವಾಹನ ಕಾಯ್ದೆ 1989ರಡಿಯಲ್ಲಿ ರಿಜಿಸ್ಟ್ರೇಷನ್ ಮಾಡಲು ಸಾಧ್ಯವಿಲ್ಲವೆಂದು ಸಾರಿಗೆ ಇಲಾಖೆಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇಲಾಖೆಯು ಈ ಮಾಹಿತಿಯನ್ನು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ.

ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ಈ ವಾಹನಗಳಿಗೆ ರಿಜಿಸ್ಟ್ರೇಷನ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಒತ್ತಾಯಿಸದಂತೆ ಕೇಂದ್ರ ಸಾರಿಗೆ ಇಲಾಖೆಯು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದೆ. ಈ ಕುರಿತು ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ರಸ್ತೆ ನಿರ್ಮಾಣ ವಾಹನಗಳ ಮಾಲೀಕರಿಂದ ಮನವಿ ಸ್ವೀಕರಿಸಿದ ನಂತರ ಸಾರಿಗೆ ಇಲಾಖೆಯು ಈ ಕ್ರಮ ಕೈಗೊಂಡಿದೆ. ರಸ್ತೆ ನಿರ್ಮಾಣದಲ್ಲಿ ಮಿಲ್ಲಿಂಗ್ ಯಂತ್ರಗಳನ್ನು ಬಳಸಲಾಗುತ್ತದೆ. ಈ ಯಂತ್ರಗಳು ರಸ್ತೆಗಳನ್ನು ನಿರ್ಮಿಸಲು ಬಿಟುಮೆನ್ ನಂತಹ ಮರುಬಳಕೆ ವಸ್ತುಗಳನ್ನು ಬಳಸುತ್ತವೆ.

ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ಈ ವಾಹನಗಳನ್ನು ಟ್ರೇಲರ್‌ಗಳ ಸಹಾಯದಿಂದ ನಿರ್ಮಾಣ ಸ್ಥಳಕ್ಕೆ ಸಾಗಿಸಲಾಗುತ್ತದೆ. ಅವು ಕೇವಲ 5-10 ಕಿ.ಮೀ ಚಲಿಸುತ್ತವೆ. ಡಂಪರ್, ಪೇಲೋಡರ್, ಡ್ರಿಲ್ ಮಾಸ್ಟರ್, ಬುಲ್ಡೋಜರ್ ಗಳನ್ನು ಆಫ್ ರೋಡ್ ವಾಹನಗಳೆಂದು ವರ್ಗೀಕರಿಸಲಾಗಿದೆ. ಇವುಗಳನ್ನು ಗಣಿಗಾರಿಕೆಗಳ ಬಳಿ ಹೆಚ್ಚು ಬಳಸಲಾಗುತ್ತದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಸಾರಿಗೆ ಇಲಾಖೆಯು, ರಸ್ತೆ ನಿರ್ಮಾಣ ಮತ್ತು ಪುನರ್ವಸತಿ ಸಾಧನಗಳಿಗೆ ಸಂಬಂಧಿಸಿದಂತೆ ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. ಈ ಮನವಿಗಳಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳಡಿಯಲ್ಲಿ ರಸ್ತೆ ನಿರ್ಮಾಣ ವಾಹನಗಳಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.

ಬುಲ್ದೋಜರ್, ರೋಡ್ ರೋಲರ್ ಗಳ ರಿಜಿಸ್ಟ್ರೇಷನ್ ಗೆ ಬಿತ್ತು ಬ್ರೇಕ್

ಈ ವಾಹನಗಳಿಗಾಗಿ ವೈಯಕ್ತಿಕ ಅಥವಾ ಕಮರ್ಷಿಯಲ್ ಬಳಕೆಯ ಪ್ರತ್ಯೇಕ ಲೈಸೆನ್ಸ್ ನಿಗದಿಪಡಿಸಲಾಗಿದೆ ಎಂದು ಹೇಳಿದೆ. ಈ ವಿಷಯದ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯು ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯವನ್ನು ಕೋರಿದೆ.

Most Read Articles

Kannada
English summary
Transport Ministry says not to register construction vehicles under motor vehicles act. Read in Kannada.
Story first published: Tuesday, July 14, 2020, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X