ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ವಿಶ್ವವಿಖ್ಯಾತ ಕ್ಯಾಬ್ ಸೇವಾ ಕಂಪನಿಯಾದ ಉಬರ್ ಭಾರತದ ಅತಿದೊಡ್ಡ ಟ್ಯಾಕ್ಸಿ ಕಂಪನಿಯಾಗಿ ಹೊರಹೊಮ್ಮುತ್ತಿದೆ. ಈ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಉಬರ್ ಕಂಪನಿಯು ಭಾರತದಲ್ಲಿ ಹಲವಾರು ವಿಶೇಷ ಸೇವೆಗಳನ್ನು ಪರಿಚಯಿಸುತ್ತಿದೆ.

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಅದರಂತೆ ಶೀಘ್ರದಲ್ಲೇ ಭಾರತದಲ್ಲಿ ವಿಶೇಷ ಸೇವೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಸದ್ಯಕ್ಕೆ ಈ ಸೇವೆಯು ಅಮೆರಿಕಾ ಹಾಗೂ ಕೆನಡಾದಲ್ಲಿ ಮಾತ್ರ ಲಭ್ಯವಿದೆ. ಉಬರ್ ಕಂಪನಿಯು ಈ ಸೇವೆಗಾಗಿ ಕೋಲ್ಕತಾ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದೆ. ಎಕ್ಸ್‌ಪ್ರೆಸ್‌ಮ್ಯಾಚ್ ಎಂಬ ಹೆಸರಿನ ಸೇವೆಯನ್ನು ಉಬರ್ ಕಂಪನಿಯು ಶೀಘ್ರದಲ್ಲೇ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಆರಂಭಿಸಲಿದೆ.

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಎಕ್ಸ್‌ಪ್ರೆಸ್‌ಮ್ಯಾಚ್ ಎನ್ನುವುದು ಗ್ರಾಹಕರ ವೇಟಿಂಗ್ ಅವಧಿಯನ್ನು ಶೂನ್ಯಕ್ಕೆ ಪರಿವರ್ತಿಸುವ ಸೇವೆಯಾಗಿದೆ. ಈ ಸೇವೆಯಲ್ಲಿ ರೈಲು ಹಾಗೂ ಬಸ್ ನಿಲ್ದಾಣಗಳ ಹೊರಗೆ ಕಂಡುಬರುವ ಸಾಮಾನ್ಯ ಆಟೋ ಹಾಗೂ ಟ್ಯಾಕ್ಸಿಗಳಂತೆ ಉಬರ್‌ ಕ್ಯಾಬ್ ಗಳನ್ನು ನಿಲ್ಲಿಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಯಾವುದೇ ಮಾತುಕತೆ ಮಾಡದೆ, ವಿಶೇಷವಾಗಿ ಹೆಚ್ಚಿನ ಶುಲ್ಕಗಳನ್ನು ನೀಡುವಂತೆ ಒತ್ತಾಯಿಸದೇ, ಮೋಸ ಮಾಡದೆ ಗ್ರಾಹಕರಿಗೆ ಸೇವೆ ನೀಡುವುದು ಇದರ ಹಿಂದಿರುವ ಗುರಿಯಾಗಿದೆ.

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಉಬರ್ ಪಾಲುದಾರರು, ಉಬರ್ ಕಂಪನಿಯು ನಿಗದಿಪಡಿಸಿರುವ ಶುಲ್ಕದ ಆಧಾರದ ಮೇಲೆ ಗ್ರಾಹಕರು ಸೇರಬೇಕಾದ ಸ್ಥಳವನ್ನು ತಲುಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರುಗಳನ್ನು ವಿಮಾನ ನಿಲ್ದಾಣದ ಹೊರಗೆ ಮುಂಚಿತವಾಗಿ ನಿಲ್ಲಿಸಲಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಕ್ಯಾಬ್ ಗಳು ಗ್ರಾಹಕರಿಗೆ ಕಾಯುವ ಸಲುವಾಗಿ ಪ್ರತ್ಯೇಕ ಸ್ಟಾಂಡ್ ಗಳನ್ನು ಸ್ಥಾಪಿಸಲಾಗುವುದು. ಈ ಸೇವೆಯನ್ನು ಪಡೆಯಲು ಬಯಸುವ ಗ್ರಾಹಕರು ನೇರವಾಗಿ ಚಾಲಕನನ್ನು ಸಂಪರ್ಕಿಸಬಹುದು. ವೇಟಿಂಗ್ ಅವಧಿಯಿಲ್ಲದೇ ಎಲ್ಲಿಗೆ ಹೋಗಬೇಕೆಂದು ಅವರಿಗೆ ತಿಳಿಸಬೇಕು.

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಇದಕ್ಕಾಗಿ ಉಬರ್ ಪ್ರೊಸೆಸರ್ ಮೂಲಕ ಬುಕ್ ಮಾಡುವ ಅಗತ್ಯವಿಲ್ಲ. ಈ ಸೇವೆಗಾಗಿ ಉಬರ್ ಕಂಪನಿಯು ನಿಯಮಿತ ಶುಲ್ಕವನ್ನು ವಿಧಿಸುತ್ತದೆ ಎಂದು ಹೇಳಲಾಗಿದೆ. ಕಡಿಮೆ ವೆಚ್ಚ ಹಾಗೂ ವೇಗದ ಸೇವೆಯ ಕಾರಣಕ್ಕೆ ಉಬರ್‌ನ ಕ್ಯಾಬ್ ಸೇವೆಗಳು ಜನಪ್ರಿಯವಾಗಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಈ ಸೇವೆಗಾಗಿ ಉಬರ್ ಕಂಪನಿಯು ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆಗಳಿಲ್ಲ. ಉಬರ್ ಕಂಪನಿಯು ಕೋಲ್ಕತ್ತಾದಲ್ಲಿ ಈ ಎಕ್ಸ್‌ಪ್ರೆಸ್‌ಮ್ಯಾಚ್ ಸೇವೆಯನ್ನು ನವೆಂಬರ್ 03ರಿಂದ ಆರಂಭಿಸಿದೆ.

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಅಮೆರಿಕಾ ಹಾಗೂ ಕೆನಡಾದ ವಿಮಾನ ನಿಲ್ದಾಣಗಳ ನಂತರ ಮೊದಲ ಬಾರಿಗೆ ಭಾರತದ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಈ ಸೇವೆಯನ್ನು ಆರಂಭಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಮೊದಲ ಹಂತವಾಗಿ ಉಬರ್ ಈ ಸೇವೆಯನ್ನು ಕೋಲ್ಕತ್ತಾದಲ್ಲಿ ಆರಂಭಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಈ ಸೇವೆಯು ಯಶಸ್ವಿಯಾದ ನಂತರ ದೇಶದ ಇತರ ವಿಮಾನ ನಿಲ್ದಾಣಗಳಿಗೂ ಈ ಸೇವೆಯನ್ನು ವಿಸ್ತರಿಸುವ ಸಾಧ್ಯತೆಗಳಿವೆ. ತುರ್ತು ಸೇವೆಯನ್ನು ಬಯಸುವ ಪ್ರಯಾಣಿಕರಿಗೆ ಈ ಸೇವೆ ನೆರವಾಗಲಿದೆ.

ವೇಟಿಂಗ್ ಅವಧಿಯನ್ನು ಇಲ್ಲವಾಗಿಸಲಿದೆ ಉಬರ್ ಕಂಪನಿಯ ಈ ಹೊಸ ಸೇವೆ

ಉಬರ್ ಕಂಪನಿಯು ಇತ್ತೀಚೆಗೆ ಆಟೋಗಳ ಬಾಡಿಗೆಗೆ ಸೇವೆಯನ್ನು ಆರಂಭಿಸಿದೆ ಎಂಬುದನ್ನು ಗಮನಿಸಬೇಕು. ಉಬರ್ ಕಂಪನಿಯು ಭಾರತದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು ವಿವಿಧ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.

Most Read Articles

Kannada
English summary
Uber launches Express match service in Kolkata airport. Read in Kannada.
Story first published: Thursday, November 5, 2020, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X