ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಅಕ್ಯುರಾ ವಿಶ್ವದ ಮೊದಲ ಫ್ರಂಟ್ ಸೀಟ್ ಏರ್‌ಬ್ಯಾಗ್‌ ಅನ್ನು ಬಿಡುಗಡೆಗೊಳಿಸಿದೆ. ಈ ಏರ್‌ಬ್ಯಾಗ್ ಅಪಘಾತದ ಸಂದರ್ಭದಲ್ಲಿ ಕಾರು ಚಾಲಕನ ಮೆದುಳಿಗೆ ಗಂಭೀರ ಗಾಯವಾಗುವುದರಿಂದ ರಕ್ಷಿಸುತ್ತದೆ ಎಂದು ಅಕ್ಯುರಾ ಕಂಪನಿ ಹೇಳಿದೆ.

ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಈ ಏರ್‌ಬ್ಯಾಗ್ ಸೌಲಭ್ಯವನ್ನು ಮುಂಬರುವ ಹೊಸ ಟಿಎಲ್‌ಎಕ್ಸ್ ಸ್ಪೋರ್ಟ್ ಸೆಡಾನ್‌ನಲ್ಲಿ ಅಳವಡಿಸುವುದಾಗಿ ಅಕ್ಯುರಾ ತಿಳಿಸಿದೆ. ಅಕ್ಯುರಾ ಆಟೋಮೊಬೈಲ್, ಹೋಂಡಾ ಕಂಪನಿಯ ಐಷಾರಾಮಿ ಕಾರು ತಯಾರಕ ಘಟಕವಾಗಿದೆ. ಈ ಹೊಸ ತಲೆಮಾರಿನ ಏರ್‌ಬ್ಯಾಗ್ ತಂತ್ರಜ್ಞಾನವನ್ನು ಅಮೆರಿಕಾದ ಹೋಂಡಾ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಹಾಗೂ ಸುರಕ್ಷತಾ ವ್ಯವಸ್ಥೆಗಳ ಪೂರೈಕೆದಾರ ಕಂಪನಿಯಾದ ಆಟೊಲೈವ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಆಟೋಲೈವ್ ತನ್ನ ಮುಂದಿನ ಉತ್ಪನ್ನಗಳನ್ನು ಇತರ ವಾಹನಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಬಳಸುವ ನಿರೀಕ್ಷೆಗಳಿವೆ. ಈ ಬಗ್ಗೆ ಮಾತನಾಡಿರುವ ಹೋಂಡಾ ಆರ್ ಅಂಡ್ ಡಿ ಅಮೆರಿಕಾದ ಅಧ್ಯಕ್ಷ ಜಿಮ್ ಕೆಲ್ಲರ್‌ರವರು ಹೊಸ ಅಕ್ಯುರಾ ಟಿಎಲ್‌ಎಕ್ಸ್, ಓಹಿಯೋದಲ್ಲಿರುವ ನಮ್ಮ ಸುರಕ್ಷತಾ ಎಂಜಿನಿಯರಿಂಗ್ ತಂಡದ ಇತ್ತೀಚಿನ ಆವಿಷ್ಕಾರವಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಸುರಕ್ಷಿತವಾಗಿ, ಯಾವುದೇ ತೊಂದರೆಯಿಲ್ಲದೇ ಕಾರನ್ನು ಚಾಲನೆ ಮಾಡುವಂತಾಗಲು ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯಲಾಗಿದೆ ಎಂದು ಹೇಳಿದರು. ಟಿಎಲ್‌ಎಕ್ಸ್‌ನ ಹೊಸ ಮುಂಭಾಗದ ಏರ್‌ಬ್ಯಾಗ್ ತಂತ್ರಜ್ಞಾನವನ್ನು ಅಪಘಾತಗಳಿಂದ ಯಾವುದೇ ತೊಂದರೆಯಾಗದಂತೆ ತಡೆಯಲು ವಿನ್ಯಾಸಗೊಳಿಸಲಾಗಿದೆ.

ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಅಪಘಾತಗಳಿಂದ ತಲೆಗೆ ಡಿಕ್ಕಿ ಹೊಡೆಯುವಾಗ, ಚಾಲಕನ ತಲೆ ವೇಗವಾಗಿ ತಿರುಗುತ್ತದೆ. ಇದರಿಂದ ಕುತ್ತಿಗೆ ಹಾಗೂ ತಲೆಗೆ ಗಂಭೀರ ಗಾಯವಾಗುತ್ತದೆ. ಸಾಂಪ್ರದಾಯಿಕ ಏರ್‌ಬ್ಯಾಗ್ ಸಿಸ್ಟಂನಲ್ಲಿ ಸಿಂಗಲ್ ಚೇಂಬರ್ ಬಳಕೆಯಾದರೆ, ಹೊಸ ಏರ್‌ಬ್ಯಾಗ್ ವಿಕೆಟ್‌ಕೀಪರ್‌ನ ಹ್ಯಾಂಡ್ ಗ್ಲೌಸ್‌ನಂತೆ ಕಾರ್ಯನಿರ್ವಹಿಸುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಈ ಏರ್‌ಬ್ಯಾಗ್ ಚಾಲಕನ ತಲೆಯ ಸುತ್ತ ರಕ್ಷಣೆ ನೀಡುತ್ತದೆ. ಅಪಘಾತವಾದಾಗ ಏರ್‌ಬ್ಯಾಗ್ ತಲೆಗೆ ರಕ್ಷಣೆ ನೀಡುತ್ತದೆ. ಈ ಹೊಸ ಏರ್‌ಬ್ಯಾಗ್ ನಾಲ್ಕು ಪ್ರಮುಖ ಅಂಶಗಳನ್ನು ಬಳಸುತ್ತದೆ. ಇದರಲ್ಲಿ ಮೂರು-ಬದಿಯ ಏರ್‌ಬ್ಯಾಗ್ ಸೆಂಟರ್ ಚೇಂಬರ್ ಹಾಗೂ ಹಿಂಭಾಗದ ದೊಡ್ಡ ಏರ್‌ಬ್ಯಾಗ್ ಚೇಂಬರ್ ತಲೆಗೆ ಪೆಟ್ಟು ಬೀಳದಂತೆ ರಕ್ಷಣೆ ನೀಡಲಿದೆ.

ತಲೆಗೆ ಪೆಟ್ಟು ಬೀಳುವುದನ್ನು ತಡೆಯಲಿದೆ ಈ ಹೊಸ ಏರ್‌ಬ್ಯಾಗ್

ಹೊಸ ಟಿಎಲ್‌ಎಕ್ಸ್ ಕಾರು, ಮೊಣಕಾಲುಗಳನ್ನು ರಕ್ಷಿಸಲು ಮೊಣಕಾಲು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಅಪಘಾತವಾದಾಗ ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರ ಕಾಲುಗಳಿಗೆ ಪೆಟ್ಟು ಬೀಳದಂತೆ ರಕ್ಷಿಸುತ್ತದೆ.

Most Read Articles

Kannada
English summary
Worlds first wrap around head airbag introduced by Acura. Read in Kannada.
Story first published: Saturday, June 20, 2020, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X