ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಯೊಕೊಹಾಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದೆ. ಬ್ಲೂ ಅರ್ಥ್ ಜಿಟಿ ಎಂಬ ಹೆಸರಿನ ಈ ಟಯರ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ವರದಿಯಾಗಿದೆ.

ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಗ್ರ್ಯಾಂಡ್ ಟೂರಿಂಗ್ ಪರಿಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು ಈ ಟಯರ್ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕೆ ಈ ಟಯರ್‌ನಲ್ಲಿ ಪರ್ಫಾಮೆನ್ಸ್ ಹಾಗೂ ಆರಾಮದಾಯಕತೆಗೆ ಆದ್ಯತೆ ನೀಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹರಿಯಾಣದ ಬಹದ್ದೂರ್‌ಗಢ ಯೊಕೊಹಾಮಾ ಉತ್ಪಾದನಾ ಘಟಕದಲ್ಲಿ ಈ ಬ್ಲೂ ಅರ್ಥ್ ಟಯರ್‌ಗಳನ್ನು ಉತ್ಪಾದಿಸಲಾಗುತ್ತದೆ.

ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಇತ್ತೀಚಿನ ದಿನಗಳಲ್ಲಿ ರಸ್ತೆ ಮೂಲಸೌಕರ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುತ್ತಿದೆ. ಗುಣಮಟ್ಟದ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಹೆಚ್ಚಿನ ಗಾತ್ರದ ರಿಮ್ ಗಳು ಬೇಕಾಗುತ್ತವೆ. ಈ ಎಲ್ಲಾ ಅವಶ್ಯಕತೆಗಳಿಗೆ ತಕ್ಕಂತೆ ಬ್ಲೂ ಅರ್ಥ್ ಜಿಟಿ ಟಯರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಯೊಕೊಹಾಮಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಬ್ಲೂ ಅರ್ಥ್ ಜಿಟಿ ಅಸಿಮೆಟ್ರಿಕಲ್ ವಿನ್ಯಾಸವನ್ನು ಹೊಂದಿದ್ದು, ಲೈಟ್ನಿಂಗ್ ಗ್ರೋವ್, ಬ್ಲೇಡ್ ಕಟ್ ಸೈಪ್ರೆಸ್ ನಂತಹ ಫೀಚರ್ ಗಳನ್ನು ಒಳಗೊಂಡಿದೆ.ಜೊತೆಗೆ ಪರ್ಫಾಮೆನ್ಸ್ ಹೆಚ್ಚಿಸಲು ಮೌಂಟ್ ಪ್ರೊಫೈಲ್, ಡಿಂಪಲ್ ಶೋಲ್ದರ್ಸ್ ಹಾಗೂ ಹೆಚ್ಚಿನ ಪಿಚ್ ನಂಬರ್ ಗಳನ್ನು ಹೊಂದಿದೆ.

ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಈ ವರ್ಷದ ಅಂತ್ಯದ ವೇಳೆಗೆ 14 ಇಂಚಿನಿಂದ 26 ಇಂಚಿನ ಟಯರ್‌ಗಳು ಲಭ್ಯವಾಗಲಿವೆ ಎಂದು ಕಂಪನಿ ತಿಳಿಸಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಹಾಗೂ ಹೈ ಎಂಡ್ ಕಾರುಗಳಿಗೆ ಬ್ಲೂ ಅರ್ಥ್ ಜಿಟಿ ಟಯರ್‌ಗಳು ಸೂಕ್ತವಾಗಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಟ್ರಿಪಲ್ ಸೆಂಟರ್ ರಿಬ್, ಸಿಲಿಕಾ ಆಧಾರಿತ ಕಾಂಪೋಸಿಟ್ ಹಾಗೂ ಹೊಸ ಸೈಡ್ ಪ್ರೊಫೈಲ್ ಗಳು ಟಯರ್ ಅನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ. ಈ ಟಯರ್ ಲಾಂಗ್ ಡ್ರೈವ್‌ಗಳಿಗೆ ಸೂಕ್ತವಾಗಿದೆ ಎಂದು ಯೊಕೊಹಾಮಾ ಕಂಪನಿ ಹೇಳಿದೆ.

ಬ್ಲೂ ಅರ್ಥ್ ಸರಣಿಯ ಟಯರ್‌ಗಳನ್ನು ಬಿಡುಗಡೆಗೊಳಿಸಿದ ಯೊಕೊಹಾಮಾ

ಟಯರ್ ವ್ಯವಹಾರದ ಜೊತೆಗೆ ಯೊಕೊಹಾಮಾ ಕಂಪನಿಯು ಆಡಿ, ಹೋಂಡಾ, ಮರ್ಸಿಡಿಸ್ ಬೆಂಝ್, ಮಿಟ್ಸುಬಿಷಿ, ನಿಸ್ಸಾನ್, ಪೋರ್ಷೆ, ಸುಜುಕಿ ಹಾಗೂ ಟೊಯೊಟಾ ಸೇರಿದಂತೆ ಹಲವು ವಾಹನ ತಯಾರಕ ಕಂಪನಿಗಳಿಗೆ ಜಾಗತಿಕವಾಗಿ ಬಿಡಿಭಾಗಗಳನ್ನು ಪೂರೈಸುತ್ತದೆ.

Most Read Articles

Kannada
English summary
Yokohama India launches Blue Earth GT Tyres. Read in Kannada.
Story first published: Tuesday, October 6, 2020, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X