Just In
Don't Miss!
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- News
ಶಶಿಕಲಾಗೆ ಶ್ವಾಸಕೋಶ ಸೋಂಕು, ಕೊರೊನಾ ವರದಿ ನೆಗೆಟಿವ್
- Finance
ಬಜೆಟ್ 2021: ಆದಾಯ ತೆರಿಗೆ ಇಳಿಕೆ ಅನುಮಾನ; ವಿನಾಯಿತಿಗಳ ಕಡೆಗೆ ಗಮನ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪೊಲೀಸ್ ಪಡೆಗೆ ಸೇರ್ಪಡೆಗೊಂಡ 36 ಫೋರ್ಸ್ ಟ್ರ್ಯಾಕ್ ಎಸ್‌ಯುವಿಗಳು
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ 36 ಫೋರ್ಸ್ ಟ್ರ್ಯಾಕ್ ಎಸ್‌ಯುವಿಗಳನ್ನು ಆಂಧ್ರ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಈ ವಾಹನಗಳಿಗೆ ಚಾಲನೆ ನೀಡಿ ಆಂಧ್ರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಯಿತು.

ಈ ಫೋರ್ಸ್ ಟ್ರ್ಯಾಕ್‌ಗಳು ಆಂಧ್ರಪ್ರದೇಶ ಪೊಲೀಸ್ ಪಡೆಯನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು. ಆಂಧ್ರ ಪೊಲೀಸ್ ಪಡೆಯಲ್ಲಿದ್ದ ಹಳೆಯ ವಾಹನಗಳ ಬದಲಿಗೆ ಈ 36 ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ. ದೇಶದ ಹಲವು ಪೊಲೀಸ್ ಪಡೆಗಳು ಫೋರ್ಸ್ ಟ್ರ್ಯಾಕ್ ಎಸ್‌ಯುವಿಗಳನ್ನು ಗಸ್ತು ತಿರುಗಲು ಬಳಸುತ್ತವೆ.

ಫೋರ್ಸ್ ಕಂಪನಿಯು ಭಾರತದಲ್ಲಿ ಕಮರ್ಷಿಯಲ್ ವಾಹನಗಳನ್ನು ಹಾಗೂ ಪಿಕ್-ಅಪ್ ಟ್ರಕ್‌ಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಇತ್ತೀಚಿಗಷ್ಟೇ ಟ್ರ್ಯಾಕ್ಸ್ ಕ್ರೂಸರ್ ಹಾಗೂ ಸ್ಟಾರ್ಮ್ ವಾಹನಗಳ ಬಿಎಸ್ 6 ಮಾದರಿಗಳನ್ನು ಬಿಡುಗಡೆಗೊಳಿಸಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫೋರ್ಸ್ ಟ್ರ್ಯಾಕ್ಸ್ ಕ್ರೂಸರ್ ಬಿಎಸ್ 6 ಮಾದರಿಯ ಬೆಲೆ ರೂ.11 ಲಕ್ಷಗಳಾದರೆ, ಸ್ಟಾರ್ಮ್ ಬಿಎಸ್ 6 ಮಾದರಿಯ ಬೆಲೆ ರೂ.11.06 ಲಕ್ಷಗಳಾಗಿದೆ. ಟ್ರ್ಯಾಕ್ಸ್ ಕ್ರೂಸರ್ ವಾಹನವನ್ನು 9 ಸೀಟರ್ ಪ್ಲಸ್ ಡ್ರೈವರ್ ಹಾಗೂ 12 ಸೀಟರ್ ಪ್ಲಸ್ ಡ್ರೈವರ್ ಎಸಿ ಹಾಗೂ ನಾನ್ ಎಸಿ ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮಾದರಿಗಳ ಗರಿಷ್ಠ ಬೆಲೆ ರೂ.12.88 ಲಕ್ಷಗಳಾಗಿದೆ.

ಇನ್ನು ಸ್ಟಾರ್ಮ್ ಬಿಎಸ್ 6 ಅನ್ನು 11 ಸೀಟರ್ ಪ್ಲಸ್ ಡ್ರೈವರ್ ಸೀಟುಗಳೊಂದಿಗೆ ಎಸಿ ಹಾಗೂ ನಾನ್ ಎಸಿ ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಮಾದರಿಗಳ ಬೆಲೆ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.11.06 ಲಕ್ಷ ಹಾಗೂ ರೂ.12.83 ಲಕ್ಷಗಳಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಎರಡೂ ವಾಹನಗಳನ್ನು ಡೀಸೆಲ್ ಎಂಜಿನ್ ಹಾಗೂ ಎಬಿಎಸ್'ನೊಂದಿಗೆ ಮಾರಾಟ ಮಾಡಲಾಗುತ್ತದೆ. ಫೋರ್ಸ್ ಟ್ರ್ಯಾಕ್ಸ್ ಕ್ರೂಸರ್ ಬಿಎಸ್ 6 ಮಾದರಿಯನ್ನು ಆಧುನಿಕ ಸುರಕ್ಷತಾ ನಿಯಮಗಳಡಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ವಾಹನದ ಮುಂಭಾಗದಲ್ಲಿ ಹೊಸ ಗ್ರಿಲ್, ಬಂಪರ್ ಹಾಗೂ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಹಿಂಭಾಗದಲ್ಲಿ ಹೊಸ ವರ್ಟಿಕಲ್ ಮೌಂಟ್ ಟೇಲ್‌ಲ್ಯಾಂಪ್ ನೀಡಲಾಗಿದೆ. ಇದರ ಬಾಕ್ಸ್ ಪ್ರೊಫೈಲ್ ಅನ್ನು ಹಳೆಯ ಮಾದರಿಯಿಂದ ಪಡೆಯಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫೋರ್ಸ್ ಟ್ರ್ಯಾಕ್ಸ್ ಕ್ರೂಸರ್ ಬಿಎಸ್ 6 ಮಾದರಿಯಲ್ಲಿರುವ ಹೊಸ ಡ್ಯಾಶ್‌ಬೋರ್ಡ್ ಹೆಚ್ಚಿನ ಪ್ರೀಮಿಯಂ ಅನುಭವವನ್ನು ನೀಡುತ್ತದೆ. ಇದರ ಜೊತೆಗೆ ಡ್ಯುಯಲ್ ಟೋನ್ ಕಲರ್ ಥೀಮ್, ಬ್ಲೂ ಲೈಟ್ ಎಂಐಡಿ ಹೊಂದಿರುವ ಹೊಸ ಇನ್ಸ್'ಟ್ರೂಮೆಂಟ್ ಕನ್ಸೋಲ್ ನೀಡಲಾಗಿದೆ.

ಫೋರ್ಸ್ ಟ್ರ್ಯಾಕ್ಸ್ ಕ್ರೂಸರ್ ಹಾಗೂ ಸ್ಟಾರ್ಮ್ ಮಾದರಿಗಳಲ್ಲಿ 2596 ಸಿಸಿಯ ಬಿಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 90 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಜೋಡಿಸಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇದರ ಜೊತೆಗೆ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್'ಗಳನ್ನು ನೀಡಲಾಗಿದೆ. ಫೋರ್ಸ್ ಮೋಟಾರ್ಸ್ ಕಂಪನಿಯು ಈ ಎರಡೂ ವಾಹನಗಳ ಮೇಲೆ 3 ವರ್ಷ ಅಥವಾ 3 ಲಕ್ಷ ಕಿ.ಮೀ ವಾರಂಟಿ ಹಾಗೂ 6 ವರ್ಷಗಳ ಫ್ರೀ ಸರ್ವೀಸ್ ನೀಡುತ್ತದೆ.