ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಹಿಂದೂಜಾ ಗ್ರೂಪ್ ಒಡೆತನದ ಅಶೋಕ್ ಲೇಲ್ಯಾಂಡ್ ಕಂಪನಿಯು ಪೂರೈಕೆ ಹಾಗೂ ಬೇಡಿಕೆ ಕೊರತೆಯಿಂದಾಗಿ ತನ್ನ ಎಲ್ಲಾ ಉತ್ಪಾದನಾ ಘಟಕಗಳಲ್ಲಿ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಕರೋನಾ ವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಜೊತೆಗೆ ಬಿಡಿ ಭಾಗಗಳ ಪೂರೈಕೆ ಸರಪಳಿಗೂ ಅಡ್ಡಿಯಾಗಿದೆ ಎಂದು ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ.

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಈ ಕಾರಣದಿಂದಾಗಿ ಕಂಪನಿಯು ಕೆಲವು ದಿನಗಳವರೆಗೆ ವಾಣಿಜ್ಯ ವಾಹನಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದೆ. ಆದರೆ ಮಿಲಿಟರಿಗೆ ಮೀಸಲಾದ ವಾಹನಗಳ ಉತ್ಪಾದನೆಯು ಮುಂದುವರೆಯಲಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಮೇ ತಿಂಗಳಿನಲ್ಲಿ ಕೇವಲ 7-15 ದಿನಗಳಷ್ಟು ಕಾಲ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರುವುದಾಗಿ ಕಂಪನಿ ತಿಳಿಸಿದೆ. ಕರೋನಾ ಸಾಂಕ್ರಾಮಿಕದ ಪರಿಸ್ಥಿತಿ ಸುಧಾರಿಸಿದ ನಂತರ ಉತ್ಪಾದನೆಯನ್ನು ಮತ್ತೆ ಪೂರ್ಣ ಸಾಮರ್ಥ್ಯದಲ್ಲಿ ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಉತ್ಪಾದನೆ ಸ್ಥಗಿತದ ಸಂದರ್ಭದಲ್ಲಿ ಕಂಪನಿಯು ಅಗತ್ಯ ವಾಹನ ಉಪಕರಣ ಹಾಗೂ ಬಿಡಿ ಭಾಗಗಳನ್ನು ಪೂರೈಸಲಿದೆ. ಇತ್ತೀಚೆಗೆ ಕಂಪನಿಯು ಲಘು ಗುಂಡು ನಿರೋಧಕ ವಾಹನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತ್ತು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಹಿಂದೂಜಾ ಗ್ರೂಪ್‌ನ ಪ್ರಮುಖ ಕಂಪನಿಯಾಗಿದ್ದು, ಭಾರತದಲ್ಲಿ ಲಘು ಹಾಗೂ ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳ ಜೊತೆಗೆ ರಕ್ಷಣಾ ಸಾಧನಗಳನ್ನು ಉತ್ಪಾದಿಸುತ್ತದೆ.

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಕರೋನಾ ವೈರಸ್ ಎರಡನೇ ಅಲೆಯನ್ನು ಎದುರಿಸಲು ವಾಹನ ತಯಾರಕ ಕಂಪನಿಗಳು ಮುಂದೆ ಬರುತ್ತಿವೆ. ಮಾರುತಿ ಸುಜುಕಿ, ಎಂಜಿ ಮೋಟಾರ್ಸ್ ಹಾಗೂ ಮಹೀಂದ್ರಾ ಅಂಡ್ ಮಹೀಂದ್ರಾ ಸೇರಿದಂತೆ ಹಲವು ಕಂಪನಿಗಳು ಕರೋನಾ ವೈರಸ್ ವಿರುದ್ಧ ಹೋರಾಡಲು ಆಕ್ಸಿಜನ್ ಉತ್ಪಾದನೆಗೆ ಮುಂದಾಗಿವೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಹಲವು ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳಲ್ಲಿ ಹೆಚ್ಚು ಹೆಚ್ಚು ಮೆಡಿಕಲ್ ಆಕ್ಸಿಜನ್ ಉತ್ಪಾದಿಸುತ್ತಿವೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯುಮಹಾರಾಷ್ಟ್ರದಾದ್ಯಂತ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸುತ್ತಿದೆ.

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಮುಂಬೈ, ಥಾಣೆ, ಪುಣೆ ಹಾಗೂ ನಾಸಿಕ್‌ಗಳಲ್ಲಿ ಕಂಪನಿಯು ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂಜಿ ಮೋಟಾರ್ಸ್ ಕಂಪನಿಯು ಸಹ ತನ್ನ ಉತ್ಪಾದನಾ ಘಟಕಗಳಲ್ಲಿ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಆಕ್ಸಿಜನ್ ಉತ್ಪಾದಿಸುತ್ತಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಅಶೋಕ್ ಲೇಲ್ಯಾಂಡ್

ಎಂಜಿ ಮೋಟಾರ್ಸ್ ಕಂಪನಿಯು ಗಂಟೆಗೆ 15%ನಷ್ಟು ಆಕ್ಸಿಜನ್ ಉತ್ಪಾದಿಸುತ್ತಿದೆ. ಕಂಪನಿಯು ಈ ಪ್ರಮಾಣವನ್ನು ಮುಂಬರುವ ದಿನಗಳಲ್ಲಿ 50%ಗೆ ಹೆಚ್ಚಿಸುವಗುರಿಯನ್ನು ಹೊಂದಿದೆ.

Most Read Articles

Kannada
English summary
Ashok Leyland stops production of vehicles temporarily. Read in Kannada.
Story first published: Wednesday, May 5, 2021, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X