ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಆಡಿ ತನ್ನ ಬಹುನೀರಿಕ್ಷಿತ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದ್ದು, ಹೊಸ ಕಾರು ವಿತರಣೆಗೂ ಮುನ್ನ ಪ್ರಮುಖ ಡೀಲರ್ಸ್ ಯಾರ್ಡ್‌ಗಳಲ್ಲಿ ಪ್ರದರ್ಶನಗೊಳಿಸಲಾಗುತ್ತಿದೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 79.06 ಲಕ್ಷ ಬೆಲೆ ಹೊಂದಿದ್ದು, ಲೈಫ್ ಸ್ಟೈಲ್ ಸ್ಪೋರ್ಟ್ ಸೆಡಾನ್ ಕಾರು ಮಾದರಿಗಳಲ್ಲೇ ಹೊಸ ವೈಶಿಷ್ಟ್ಯತೆಗಳೊಂದಿಗೆ ಪರ್ಫಾಮೆನ್ಸ್ ಮಾದರಿಯಾಗಿ ಗುರುತಿಸಿಕೊಳ್ಳಲಿದೆ. ಹೊಸ ಕಾರನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಿದರೂ ಬೆಲೆಗೆ ತಕ್ಕಂತೆ ಹೊಸ ಕಾರಿನಲ್ಲಿ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಪರ್ಫಾಮೆನ್ಸ್ ಕಾರು ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಹೊಸ ಕಾರನ್ನು ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ತುಸು ದುಬಾರಿ ಎನ್ನಿಸಲಿದ್ದು, ಬೆಲೆಗೆ ತಕ್ಕಂತೆ ಹೊಸ ಕಾರಿನಲ್ಲಿ ಹಲವಾರು ಐಷಾರಾಮಿ ಸೌಲಭ್ಯಗಳನ್ನು ನೀಡಲಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಹಿಂಬದಿಯಲ್ಲೂ ಹೊಸ ಕಾರಿಗೆ ಮತ್ತಷ್ಟು ಸ್ಪೋರ್ಟ್ ಲುಕ್ ನೀಡಲು ಬೂಟ್ ಲೀಡ್ ಮೇಲೆ ಇಂಟ್ರಾಗ್ರೆಟೆಡ್ ಸ್ಪಾಯ್ಲರ್ ಸೇರಿದಂತೆ ಹಲವಾರು ಸೋರ್ಟಿ ವಿನ್ಯಾಸಗಳನ್ನು ಹೊಂದಿದ್ದು, ಹೊಸ ಕಾರಿನ ಒಳಭಾಗವು ಕೂಡಾ ಅತ್ಯುತ್ತಮ ವಿನ್ಯಾ,ಸದೊಂದಿಗೆ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ವಿನ್ಯಾಸದ ಕ್ಯಾಬಿನ್‌ನೊಂದಿಗೆ ಫ್ಲ್ಯಾಟ್ ಬಾಟಮ್ ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್, ಸಾಫ್ಟ್ ಟಚ್ ಮಟಿರಿಯಲ್ ಹೊಂದಿರುವ ಡ್ಯಾಶ್‌ಬೋರ್ಡ್, ಆರಾಮದಾಯಕವಾಗಿರುವ ಲೆದರ್ ಆಸನಗಳು, ಮೂವತ್ತು ವಿವಿಧ ಬಣ್ಣಗಳನ್ನು ಹೊಂದಿರುವ ಆ್ಯಂಬಿಯೆಂಟ್ ಲೈಟ್ಸ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ಸ್ಟೈನ್‌ಲೆಸ್ ಸ್ಟೀಲ್ ಪೆಡಲ್, ದೊಡ್ಡದಾದ ಪನೊರಮಿಕ್ ಸನ್‌ರೂಫ್ ಹೊಂದಿರಲಿವೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಜೊತೆಗೆ ವರ್ಚುವಲ್ ಕಾಕ್‌ಪಿಟ್ ವೈಶಿಷ್ಟ್ಯತೆಯೊಂದಿಗೆ 12.2-ಇಂಚಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕಾರ್ ಕನೆಕ್ಟೆಡ್ ಟೆಕ್ನಾಲಜಿ, 3ಡಿ ಸೌಂಡ್‌ನೊಂದಿಗೆ ಸ್ಟ್ಯಾಂಡರ್ಡ್ ಆಡಿಯೋ ಸಿಸ್ಟಂ ಜೊತೆಗೆ ಅತ್ಯುತ್ತಮ ಸ್ಪಿಕರ್ಸ್‌ಗಳನ್ನು ನೀಡಲಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಫೋರ್ ಡೋರ್ ವೈಶಿಷ್ಟ್ಯತೆಯ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್ ಮಾದರಿಯಲ್ಲಿ ಆಡಿ ಕಂಪನಿಯು 3.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, 8-ಸ್ಪೀಡ್ ಟ್ರಿಪ್‌ಟ್ರಾನಿಕ್ ಆಟೋ ಟ್ರಾನ್ಸ್‌ಮಿಷನ್‌ನೊಂದಿಗೆ 349-ಬಿಎಚ್‌ಪಿ ಮತ್ತು 500-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಹೊಸ ಕಾರಿನಲ್ಲಿ ಆಡಿ ಕಂಪನಿಯು ಕ್ವಾಂಟ್ರೊ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕಾರು ಕೇವಲ 4.7-ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳಬಲ್ಲ ಶಕ್ತಿ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡೀಲರ್ಸ್ ಯಾರ್ಡ್ ತಲುಪಿದ ಆಡಿ ಎಸ್5 ಸ್ಪೋರ್ಟ್‌ಬ್ಯಾಕ್ ಸೆಡಾನ್

ಈ ಮೂಲಕ ಹೊಸ ಎಸ್5 ಸ್ಪೋರ್ಟ್‌ಬ್ಯಾಕ್ ಕಾರು ಮಾದರಿಯು ಮರ್ಸಿಡಿಸ್ ಎಎಂಜಿ ಜಿ 43 ಮತ್ತು ಬಿಎಂಡಬ್ಲ್ಯು ಎಂ340ಐ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಕಾರನ್ನು ಟರ್ಬೊ ಬ್ಲ್ಯೂ, ಡೆಟೊನಾ ಗ್ರೇ ಮತ್ತು ಟ್ಯಾಂಗೊ ರೆಡ್ ಬಣ್ಣದಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on ಆಡಿ audi
English summary
Central government has extended the validity of motor vehicle documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X