2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಇನ್ನು ಕೆಲವು ಗಂಟೆಗಳಲ್ಲಿ ಸಂಸತ್'ನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಎಲ್ಲಾ ಕ್ಷೇತ್ರಗಳ ರೀತಿಯಲ್ಲಿಯೇ ಆಟೋ ಮೊಬೈಲ್ ಉದ್ಯಮವೂ ಸಹ ಈ ಬಾರಿಯ ಬಜೆಟ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣಕ್ಕೆ ಹಾಗೂ ಬಿಎಸ್ 6 ಮಾಲಿನ್ಯ ನಿಯಮಗಳ ಕಾರಣಕ್ಕೆ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಈ ಹಿನ್ನೆಲೆಯಲ್ಲಿ ಆಟೋಮೊಬೈಲ್ ಉದ್ಯಮವು ಬಜೆಟ್‌ನಲ್ಲಿ ವಾಹನ ತಯಾರಿಕೆ ವೆಚ್ಚವನ್ನು ಕಡಿಮೆ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಭಾರತದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ವಾಹನಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಉತ್ತೇಜನವನ್ನು ನೀಡಲಾಗುತ್ತಿದೆ.

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಎಲೆಕ್ಟ್ರಿಕ್ ವಾಹನಗಳು ಇನ್ನೂ ಸಹ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪರಿಸರ ಸ್ನೇಹಿಯಾದ ಎಲೆಕ್ಟ್ರಿಕ್ ವಾಹನಗಳು ಮುಂಬರುವ ದಿನಗಳಲ್ಲಿ ಜನಪ್ರಿಯವಾಗುವ ಸಾಧ್ಯತೆಗಳಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿತಗೊಳಿಸಬೇಕಾಗುತ್ತದೆ. 2021ರ ಬಜೆಟ್‌ನಿಂದ ಮಾರುತಿ ಸುಜುಕಿ, ಟೊಯೊಟಾದಂತಹ ದೊಡ್ಡ ದೊಡ್ಡ ಕಂಪನಿಗಳು ಹಾಗೂ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿವೆ.

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಈ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ವಾಹನ ಸ್ಕ್ರ್ಯಾಪ್ ನೀತಿಯನ್ನು ಜಾರಿಗೆ ತರಬೇಕು ಎಂದು ಟೊಯೊಟಾ ಕಂಪನಿ ಹೇಳಿದೆ. ಸ್ಕ್ರ್ಯಾಪ್ ನೀತಿಯಲ್ಲಿ ಹಳೆಯ ವಾಹನಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಿ, ಹೊಸ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವತ್ತ ಗಮನಹರಿಸಬೇಕು ಎಂದು ಟೊಯೊಟಾ ಕಂಪನಿ ಹೇಳಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಕೇಂದ್ರ ಸರ್ಕಾರವು ಹೂಡಿಕೆ ನೀತಿಯನ್ನು ಬೆಂಬಲಿಸುವುದರಿಂದ ಹೊಸ ಕಂಪನಿಗಳಿಗೆ ದೇಶದಲ್ಲಿ ಬೆಳೆಯಲು ಹಾಗೂ ವಿಸ್ತರಿಸಲು ಅನುಕೂಲವಾಗಲಿದೆ ಎಂದು ಟೊಯೊಟಾ ಕಂಪನಿ ಹೇಳಿದೆ. ಇದರ ಜೊತೆಗೆ ಆಮದು ಮಾಡಿಕೊಳ್ಳುವ ವಾಹನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆಯೂ ಟೊಯೊಟಾ ಕಂಪನಿ ತಿಳಿಸಿದೆ.

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಕೇಂದ್ರ ಸರ್ಕಾರವು ಈ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸುವ ಬಿಡಿಭಾಗ ಹಾಗೂ ಕಚ್ಚಾ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆಗೊಳಿಸಬೇಕು ಎಂದು ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಎಥೆರ್ ತಿಳಿಸಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಸುವವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಕಂಪನಿ ಹೇಳಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಇದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯ ಗ್ರಾಹಕರು ಖರೀದಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಮತ್ತೊಂದು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಗ್ರೀವ್ಸ್ ಮೋಟಾರ್ಸ್, ಎಲೆಕ್ಟ್ರಿಕ್ ವಾಹನಗಳ ಜಾಗೃತಿಗಾಗಿ ವ್ಯಾಪಕವಾಗಿ ಪ್ರಚಾರ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದೆ.

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಎಲೆಕ್ಟ್ರಿಕ್ ವಾಹನಗಳಿಂದಾಗುವ ಪ್ರಯೋಜನಗಳು ಹಾಗೂ ಭವಿಷ್ಯದಲ್ಲಿ ಅವುಗಳ ಅಗತ್ಯವನ್ನು ಸರ್ಕಾರವು ಸಾರ್ವಜನಿಕರೊಂದಿಗೆ ಚರ್ಚಿಸಬೇಕು ಎಂದು ಗ್ರೀವ್ಸ್ ಮೋಟಾರ್ಸ್ ತಿಳಿಸಿದೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆ ಇದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಬಹುತೇಕ ಜನರು ಎಲೆಕ್ಟ್ರಿಕ್ ವಾಹನಗಳನ್ನು ಕಡಿಮೆ ವಿಶ್ವಾಸಾರ್ಹವೆಂದು ಪರಿಗಣಿಸುತ್ತಾರೆ. ಇದರ ಜೊತೆಗೆ ದೇಶದಲ್ಲಿ ಚಾರ್ಜಿಂಗ್ ಸೌಲಭ್ಯಗಳ ಕೊರತೆಯಿರುವುದರಿಂದ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರವು ಇದರತ್ತ ಗಮನಹರಿಸಬೇಕೆಂದು ಕಂಪನಿಗಳು ಹೇಳಿವೆ.

2021ರ ಕೇಂದ್ರ ಸರ್ಕಾರದ ಬಜೆಟ್ ಕೈಹಿಡಿಯಬಹುದೆಂಬ ನಿರೀಕ್ಷೆಯಲ್ಲಿ ಆಟೋ ಮೊಬೈಲ್ ಉದ್ಯಮ

ಇದರ ಜೊತೆಗೆ ಚಿಪ್, ಎಲೆಕ್ಟ್ರಾನಿಕ್ ಸರ್ಕ್ಯೂಟ್, ಎಲೆಕ್ಟ್ರಿಕ್ ಮೋಟರ್, ಕಾಯಿಲ್ ಸೇರಿದಂತೆ ಹಲವು ಬಿಡಿಭಾಗಗಳಿಗೆ ಚೀನಾವನ್ನು ಅವಲಂಬಿಸಿದ್ದು ಇವುಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಆದ್ಯತೆ ನೀಡಬೇಕೆಂದು ಹಲವು ಕಂಪನಿಗಳು ಒತ್ತಾಯಿಸಿವೆ.

Most Read Articles

Kannada
English summary
Automobile sector expectations from Union budget 2021. Read in Kannada.
Story first published: Friday, January 29, 2021, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X