ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡ ಮಹಾಮಾರಿ ಕರೋನಾ ವೈರಸ್, ದಿನಗಳು ಕಳೆದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ವ್ಯಾಪಿಸಿಕೊಂಡಿತು. ಅದರಲ್ಲೂ ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಹೆಚ್ಚು ಪರಿಣಾಮವನ್ನುಂಟು ಮಾಡಿದೆ.

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಕರೋನಾ ವೈರಸ್ ಬಾರದಂತೆ ತಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇವುಗಳಲ್ಲಿ ಕರೋನಾ ವೈರಸ್ ಲಸಿಕೆ ಅಭಿಯಾನವು ಸೇರಿದೆ. ಈಗಾಗಲೇ ಹಲವು ರಾಜ್ಯ ಸರ್ಕಾರಗಳು ಲಸಿಕೆ ಅಭಿಯಾನವನ್ನು ಆರಂಭಿಸಿವೆ. ಈಗ ಮುಂಬೈನ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮುಂಬೈನಲ್ಲಿ ಮೊದಲ ಡ್ರೈವ್ ಇನ್ ಲಸಿಕೆ ಅಭಿಯಾನವನ್ನು ಆರಂಭಿಸಿದೆ.

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಈ ಅಭಿಯಾನದಲ್ಲಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ತಮ್ಮದೇ ವಾಹನಗಳಲ್ಲಿ ತೆರಳಿ ಕರೋನಾ ವೈರಸ್ ಲಸಿಕೆಯನ್ನು ಪಡೆದು ಕೊಳ್ಳಬಹುದು. ಈ ವಿಶಿಷ್ಟ ಅಭಿಯಾನದ ಮೂಲಕ ಬಿಎಂಸಿ ದೇಶದ ಗಮನ ಸೆಳೆದಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಮಾಹಿತಿಗಳ ಪ್ರಕಾರ ದಾದರ್ ಪಶ್ಚಿಮದ ಶಿವಾಜಿ ಪಾರ್ಕ್ ಬಳಿಯ ಜೆ.ಕೆ.ಸಾವಂತ್ ಮಾರ್ಗದಲ್ಲಿರುವ ಬಹುಮಹಡಿ ಕೊಹಿನೂರ್ ಪಬ್ಲಿಕ್ ಪಾರ್ಕಿಂಗ್ ಸ್ಥಳದಲ್ಲಿ ಡ್ರೈವ್-ಇನ್ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದೆ.

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಈ ಅಭಿಯಾನವನ್ನು ಉದ್ಘಾಟಿಸಿದ ನಂತರ ಬೆಳಿಗ್ಗೆ 10ರ ಸುಮಾರಿಗೆ ಫಲಾನುಭವಿಯ ಕಾರಿನಲ್ಲಿಯೇ ಮೊದಲ ಲಸಿಕೆ ನೀಡಲಾಯಿತು. ಬಿಎಂಡಬ್ಲ್ಯು ವಾರ್ಡ್-ಜಿಎನ್‌ನ ಸಹಾಯಕ ಆಯುಕ್ತರಾದ ಕಿರಣ್ ದಿಘಾವ್ಕರ್ ಈ ಅಭಿಯಾನದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಬಿಎಂಸಿ ಡ್ರೈವ್ ಇನ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಲ್ಲಿ 45 ವರ್ಷ ಮೇಲ್ಪಟ್ಟ ಅದರಲ್ಲೂ ವಿಶೇಷವಾಗಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಮ್ಮ ಪೋಸ್ಟ್'ನಲ್ಲಿ ತಿಳಿಸಿದ್ದಾರೆ.

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಈ ಅಭಿಯಾನಕ್ಕಾಗಿ ಏಳು ಬೂತ್‌ಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ಎರಡು ಡ್ರೈವ್ ಇನ್ ಬೂತ್‌ಗಳಾಗಿ ಬಳಸಲ್ಪಡುತ್ತಿವೆ. ಈ ಏಳು ಬೂತ್‌ಗಳು ದಿನಕ್ಕೆ 5,000 ಫಲಾನುಭವಿಗಳಿಗೆ ಲಸಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಿಘಾವ್ಕರ್ ಮಾಹಿತಿ ನೀಡಿದ್ದಾರೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಈ ಪಾರ್ಕಿಂಗ್ ಡ್ರೈವ್‌ನಲ್ಲಿ 70 ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜನರು ಎರಡು ಡ್ರೈವ್-ಇನ್ ಬೂತ್‌ಗಳಲ್ಲಿ ಸಾಲಿನಲ್ಲಿರುತ್ತಾರೆ. ಇದರ ಜೊತೆಗೆ ಬಿಎಂಸಿ ಡ್ರೈವ್-ಇನ್ ಬೂತ್‌ಗಳಲ್ಲಿ ರಿಜಿಸ್ಟ್ರೇಷನ್ ಸ್ಟಾಲ್'ಗಳನ್ನು ಸ್ಥಾಪಿಸಿ, ಫಲಾನುಭವಿಗಳಿಗೆ ನೋಂದಣಿ ಮಾಡಿಸಿಕೊಳ್ಳಲು ನೆರವಾಗುತ್ತಿದೆ.

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಈ ಅಭಿಯಾನದಲ್ಲಿ ಭಾಗಿಯಾಗುವವರು ಸರತಿ ಸಾಲಿನಲಿ ಕಾದು ಲಸಿಕೆ ಪಡೆಯುತ್ತಿದ್ದಾರೆ. ಈ ಅಭಿಯಾನದ ಬಗ್ಗೆ ಬಿಎಂಸಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

45 ವರ್ಷ ಮೇಲ್ಪಟ್ಟ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗಾಗಿ ಕೊಹಿನೂರ್ ಪಬ್ಲಿಕ್ ಪಾರ್ಕಿಂಗ್ ಲಾಟ್ ಜೆ.ಕೆ ಸಾವಂತ್ ಮಾರ್ಗ್, ದಾದರ್ ವೆಸ್ಟ್'ನಲ್ಲಿ ವಿಶೇಷ ಡ್ರೈವ್ ಇನ್ ಲಸಿಕೆ ಅಭಿಯಾನ ಆರಂಭಿಸಲಾಗಿದೆ. # ವ್ಯಾಕ್ಸಿನೇಷನ್ ಫಾರ್ ಆಲ್ ಎಂದು ಬಿಎಂಸಿ ಈ ಪೋಸ್ಟ್'ನಲ್ಲಿ ಹೇಳಿದೆ.

ವಿಶಿಷ್ಟ ಬಗೆಯ ಲಸಿಕಾ ಅಭಿಯಾನ ಆರಂಭಿಸಿದ ಬಿಎಂಸಿ

ಜನವರಿ 16ರಂದು ಭಾರತದಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಿದಾಗಿನಿಂದ ಬಿಎಂಸಿ ಮುಂಬೈನಾದ್ಯಂತ 135ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿದೆ.ಬಿಎಂಸಿಯ ಈ ಕ್ರಮವನ್ನು ಶಿವಸೇನೆ ಸಂಸದರಾದ ಪ್ರಿಯಾಂಕಾ ಚತುರ್ವೇದಿ ಸ್ವಾಗತಿಸಿದ್ದಾರೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
BMC starts first drive in vaccination campaign in Mumbai. Read in Kannada.
Story first published: Wednesday, May 5, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X