ಭಾರತದಲ್ಲಿ 2021ರ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಫೀಚರ್ಸ್‌ಗಳು ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಈ ಹೊಸ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗಿದೆ.

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಇನ್ನು ಈ ಹೊಸ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರಿನ ಬೆಲೆಯ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.67.90 ಲಕ್ಷದಿಂದ ರೂ.77.90 ಲಕ್ಷಗಳಾಗಿದೆ. ಈ ಹೊಸ ಬಿಎಂಡಬ್ಲ್ಯು ಕಾರು ಎಂ ಸ್ಪೋರ್ಟ್ ಮತ್ತು ಲಕ್ಷುರಿ ಲೈನ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಅಲ್ಲದೇ ಈ ಹೊಸ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ನವೀಕರಿಸಿದ ಸ್ಟೈಲಿಂಗ್ ಮತ್ತು ನೂತನ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಈ ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ದೊಡ್ಡ ಕಿಡ್ನಿ ಗ್ರಿಲ್ ಜೊತೆಗೆ ಸ್ಲೀಕರ್ ಲೇಸರ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್-ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪರಿಷ್ಕೃತ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಪಡೆಯುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಇನ್ನು ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ಮರುವಿನ್ಯಾಸಗೊಳಿಸಲಾಗಿದ್ದು, ನೋಚ್‌ಬ್ಯಾಕ್ ಹಿಂಭಾಗವನ್ನು ಮುಂದಕ್ಕೆ ಸಾಗಿಸಲಾಗಿದೆ. 6-ಸೀರಿಸ್ ಮಾದರಿಯು 5-ಸೀರಿಸ್ ಗಿಂತ ಹೆಚ್ಚು ಸ್ಪೋರ್ಟಿಯಾಗಿದೆ.

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಗಮನಾರ್ಹವಾದ ವಿನ್ಯಾಸದ ನವೀಕರಣಗಳ ಹೊರತಾಗಿಯೂ, ಜರ್ಮನ್ ಐಷಾರಾಮಿ ಕಾರು ತಯಾರಕರು ಕ್ಯಾಬಿನ್ ಅನ್ನು ಕೂಡ ನವೀಕರಿಸಿದೆ. ಈ ಹೊಸ ಕಾರಿನಲ್ಲಿ 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹಿಂಬದಿಯ ಸೀಟಿನಲ್ಲಿ ಎರಡು 10.25-ಇಂಚಿನ ಎಂಟರ್ ಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಇದು ಇದು ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ಲಸ್/ಪ್ರೊಫೆಷನಲ್ ಮತ್ತು ಬಿಎಂಡಬ್ಲ್ಯು ವರ್ಚುವಲ್ ಅಸಿಸ್ಟೆನ್ಸ್, ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಒಟಿಆರ್ ನವೀಕರಣಗಳ ಕನೆಕ್ಟಿವಿಟಿಯನ್ನು ಹೊಂದಿದೆ.

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಹೊಸ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳ ನೀಡಲಾಗಿದೆ. ಇದರಲ್ಲಿ ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಗಳಾಗಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಇದರಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಆರ್‌ಪಿಎಂನಲ್ಲಿ ಗರಿಷ್ಠ 257 ಬಿಹೆಚ್‌ಪಿ ಪವರ್ ಹಾಗೂ 1550 ಆರ್‌ಪಿಎಂ ಮತ್ತು 4400 ಆರ್‌ಪಿಎಂ ನಡುವೆ 400 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

620ಡಿ 2.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 188 ಬಿಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 630ಡಿ ಎಂ ಸ್ಪೋರ್ಟ್ ವೆರಿಯೆಂಟ್ 3.0-ಲೀಟರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ 188 ಬಿಹೆಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ 2021ರ ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಬಿಡುಗಡೆ

ಎಂಜಿನ್ ಗಳೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಬಿಎಂಡಬ್ಲ್ಯು 6-ಸೀರಿಸ್ ಜಿಟಿ ಫೇಸ್‌ಲಿಫ್ಟ್ ಕಾರು ಕೇವಲ 6.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Most Read Articles

Kannada
English summary
BMW 6-Series GT Facelift (2021) Launched. Read In kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X