ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಗಳಿಗಾಗಿ 300 ಟಾಟಾ ನೆಕ್ಸಾನ್ ಇವಿ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ದೇಶಾದ್ಯಂತ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಕ್ರಿಯೆಯು ಹೆಚ್ಚುತ್ತಿದ್ದು, ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನವನ್ನು ಸಹ ಇಂಧನ ಚಾಲಿತ ಮಾದರಿಗಳಿಂದ ಎಲೆಕ್ಟ್ರಿಕ್ ಆವೃತ್ತಿಗಳ ಬಳಕೆಯತ್ತ ಆದ್ಯತೆ ನೀಡಲಾಗುತ್ತಿದೆ.

ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಗಳನ್ನಾಗಿ 300 ಟಾಟಾ ನೆಕ್ಸಾನ್ ಕಾರು ಖರೀದಿಸಲಿದೆ ಸಿಇಎಸ್ಎಲ್

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಬಳಕೆಯನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಗಮನಹರಿಸುತ್ತಿರುವುದು ಮಹತ್ವದ ಬೆಳವಣಿಗೆ ಕಾರಣವಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪೂರಕವಾಗಿ ಹಲವಾರು ಹೊಸ ನೀತಿಗಳನ್ನು ಜಾರಿಗೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗುತ್ತಿರುವ ಸಬ್ಸಡಿ ಯೋಜನೆಗಳು ಮತ್ತು ಜಿಎಸ್‌ಟಿವಿ ವಿನಾಯ್ತಿಯು ಇವಿ ವಾಹನ ಅಳವಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ವ್ಯಯಕ್ತಿಕ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಂತಲೂ ಸರ್ಕಾರಿ ಅಧಿಕಾರಿಗಳು ಬಳಕೆ ಮಾಡುತ್ತಿರುವ ಲಕ್ಷಾಂತರ ವಾಹನಗಳನ್ನು ಎಲೆಕ್ಟ್ರಿಕ್ ಮಾದರಿಗಳತ್ತ ಬದಲಿಸುತ್ತಿರುವುದ ಮಾಲಿನ್ಯ ತಡೆಗೆ ಪೂರಕವಾಗಿದ್ದು, (ಇಇಎಸ್ಎಲ್) ಸಂಸ್ಥೆಯು ಸಹ ಸರ್ಕಾರಿ ಅಧಿಕಾರಿಗಳ ವಾಹನಗಳನ್ನು ಇವಿಯತ್ತ ಬದಲಾಯಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಸರ್ಕಾರಿ ಸ್ವಾಮ್ಯದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು ತನ್ನ ಅಂಗಸಂಸ್ಥೆಯಾದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಮೂಲಕ ವಿವಿಧ ಸರ್ಕಾರಿ ಇಲಾಖೆಗಳ ಅಧಿಕೃತ ವಾಹನಗಳನ್ನು ಡೀಸೆಲ್‌ನಿಂದ ಎಲೆಕ್ಟ್ರಿಕ್‌ನತ್ತ ಬದಲಾವಣೆಗೊಳಿಸುತ್ತಿದ್ದು, ಶೀಘ್ರದಲ್ಲೇ ಮತ್ತೊಂದು ಯೋಜನೆಯಡಿ 300 ಯುನಿಟ್ ನೆಕ್ಸಾನ್ ಇವಿ ಖರೀದಿಸಲು ಮುಂದಾಗಿದೆ.

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಹೆಚ್ಚಿನ ಮಟ್ಟದ ಇವಿ ವಾಹನಗಳ ಖರೀದಿ ಮೇಲೆ ಕಾರು ತಯಾರಕ ಕಂಪನಿಗಳು ಹಲವಾರು ಕೊಡುಗೆಗಳನ್ನು ಪ್ರಕಟಿಸಲಿದ್ದು, ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಕಂಪನಿಯು ಇದೀಗ ಹೊಸ ಯೋಜನೆ ಅಡಿ ವಿವಿಧ ಸರ್ಕಾರಿಗಳಿಗಾಗಿ ಬರೋಬ್ಬರಿ 300 ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುತ್ತಿದೆ. 300 ಯುನಿಟ್ ಕಾರು ಖರೀದಿಗಾಗಿ ರೂ.44 ಕೋಟಿ ವೆಚ್ಚದ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ಕಂಪನಿಯು ಪಡೆದುಕೊಂಡಿದ್ದು, ಹೊಸ ಕಾರುಗಳನ್ನು ಶೀಘ್ರದಲ್ಲೇ ಹಂತ-ಹಂತವಾಗಿ ವಿತರಣೆ ಮಾಡಲಿದೆ.

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಸರ್ಕಾರಿ ವಾಹನಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯು ಪರಿಣಾಮಕಾರಿ ಇವಿ ವಾಹನಗಳ ಅಳವಡಿಕೆ ಮಾಡಿಕೊಳ್ಳುತ್ತಿದ್ದು, ಡೀಸೆಲ್ ವಾಹನ ನಿರ್ವಹಣೆಗಿಂತಲೂ ಇವಿ ವಾಹನಗಳ ನಿರ್ವಹಣೆಯು ಸುಮಾರು ಶೇ.60 ಕ್ಕಿಂತ ಕಡಿಮೆಯಾಗಿರುವುದಲ್ಲದೆ ಮಾಲಿನ್ಯ ಪ್ರಮಾಣಕ್ಕೂ ಕಡಿವಾಣ ಹಾಕಬಹುದಾಗಿದೆ.

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಇವಿ ವಾಹನಗಳ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ತಂತ್ರಜ್ಞಾನ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿದ್ದು, ಇವಿ ವಾಹನಗಳ ಮೇಲೆ ಗರಿಷ್ಠ ಎಂಟು ವರ್ಷಗಳ ವಾರಂಟಿ ನೀಡುತ್ತಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ ಎನ್ನಬಹುದು.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಎ‍ಆರ್‌ಎಐ ಪ್ರಮಾಣ ಪತ್ರದಂತೆ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿಗೆ ಪೂರ್ತಿಯಾಗಿ ಚಾರ್ಜ್ ಆದಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರೆಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ಸಾಮಾನ್ಯ ಮಾದರಿಯ ನೆಕ್ಸಾನ್ ಫೇಸ್‍‍ಲಿಫ್ಟ್ ಸ್ಟ್ಯಾಂಡರ್ಡ್ ಕಾರಿನ ಆಧಾರದ ಮೇಲೆ ತಯಾರಿಸಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರಿನಲ್ಲಿ 95 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

300 ಟಾಟಾ ನೆಕ್ಸಾನ್ ಕಾರು ಖರೀದಿಗೆ ಮುಂದಾದ ಸಿಇಎಸ್ಎಲ್

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 16.56 ಲಕ್ಷ ಬೆಲೆ ಹೊಂದಿದ್ದು, ಇದುವರೆಗೆ ಭಾರತದಲ್ಲಿ ಸುಮಾರು 4 ಸಾವಿರ ಯುನಿಟ್‌ಗಳು ಮಾರಾಟಗೊಂಡಿವೆ.

Most Read Articles

Kannada
English summary
CESL Planning To Buy 300 Electric Vehicles From Tata Motors. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X