ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಹೊಸ ಕಾರು ಖರೀದಿಸುವವರು ಕಾರಿನ ಯಾವ ಮಾದರಿಯನ್ನು ಖರೀದಿಸಬೇಕು ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಗ್ರಾಹಕರು ಮಾಡಿಕೊಳ್ಳುವ ಕಾರು ಅವರ ಹಣವನ್ನು ಉಳಿಸುತ್ತದೆ. ಕೆಲವು ಮಾದರಿಗಳಲ್ಲಿ ಹಲವು ಫೀಚರ್ ಗಳಿದ್ದರೆ, ಕೆಲವು ಮಾದರಿಗಳಲ್ಲಿ ಸೀಮಿತ ಸಂಖ್ಯೆಯ ಫೀಚರ್ ಗಳನ್ನು ಮಾತ್ರ ನೀಡಲಾಗಿರುತ್ತದೆ. ಹೀಗಾಗಿ ಹೊಸದಾಗಿ ಕಾರು ಖರೀದಿಸುವವರಿಗೆ ಯಾವ ಕಾರು ಖರೀದಿಸಬೇಕು ಎಂಬ ಗೊಂದಲ ಎರ್ಪಾಡುವುದು ಸಹಜ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಬಹುತೇಕ ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿ ಆಯ್ಕೆಗಳಲ್ಲಿ ಮಾರಾಟ ಮಾಡುತ್ತವೆ. ಕಾರಿನ ಮೂಲ ಮಾದರಿಯನ್ನು ಖರೀದಿಸಬೇಕೆ ಅಥವಾ ಟಾಪ್ ಮಾದರಿಯನ್ನು ಖರೀದಿಸಬೇಕೆ, ಅದರಿಂದಾಗುವ ಅನುಕೂಲಗಳೇನು ಹಾಗೂ ಅನಾನುಕೂಲಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

1. ದೊಡ್ಡ ಬೆಲೆ ವ್ಯತ್ಯಾಸ

ಯಾವುದೇ ಕಾರಿನ ಮೂಲ ಮಾದರಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಬಹುತೇಕ ಜನರು ಸಲಹೆ ನೀಡುತ್ತಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಮೂಲ ಮಾದರಿಯ ಬೆಲೆ. ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ಬೆಲೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸವಿರುತ್ತದೆ. ಕೆಲವೊಮ್ಮೆ ಮೂಲ ಮಾದರಿಗಿಂತ ಟಾಪ್ ಎಂಡ್ ಮಾದರಿಗಳ ನಡುವಿನ ಬೆಲೆ ವ್ಯತ್ಯಾಸ ಲಕ್ಷಾಂತರ ರೂಪಾಯಿಗಳಷ್ಟಿರುತ್ತದೆ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಇದಕ್ಕೆ ಉದಾಹರಣೆ ನೀಡುವುದಾದರೆ, ಹ್ಯುಂಡೈ ವೆನ್ಯೂ ಮೂಲ ಮಾದರಿಯ ಬೆಲೆ ರೂ. 6,55,000 ಗಳಿಂದ ಆರಂಭವಾಗುತ್ತದೆ. ಇನ್ನು ಈ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ರೂ. 11,15,000 ಗಳಾಗುತ್ತದೆ. ಇದರಿಂದ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸಬೇಕು ಎಂದು ಇಚ್ಚಿಸುವವರಿಗೆ ನಿರಾಶೆಯಾಗಬಹುದು. ಈ ಕಾರಣಕ್ಕೆ ಜನರು ಟಾಪ್ ಎಂಡ್ ಮಾದರಿಯ ಬದಲು ಮೂಲ ಮಾದರಿ ಖರೀದಿಸಲು ಮುಂದಾಗುತ್ತಾರೆ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

2. ಎಂಜಿನ್ ಹಾಗೂ ಗೇರ್ ಬಾಕ್ಸ್ ಆಯ್ಕೆಗಳು

ಕಾರು ತಯಾರಕ ಕಂಪನಿಗಳು ಈಗ ಬಿಡುಗಡೆಯಾಗುತ್ತಿರುವ ಕಾರುಗಳನ್ನು ಕನಿಷ್ಠ 2 ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತವೆ. ಕೆಲವು ಕಂಪನಿಗಳು ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ಆಯ್ಕೆಯನ್ನು ನೀಡುತ್ತವೆ. ಮೂಲ ಮಾದರಿಯ ಕಾರುಗಳಲ್ಲಿ ಶಕ್ತಿಶಾಲಿ ಎಂಜಿನ್ ನೀಡದೇ ಇರುವ ಸಾಧ್ಯತೆಗಳಿರುತ್ತವೆ. ಶಕ್ತಿಯುತ ಎಂಜಿನ್ ಬೇಡ ಎನ್ನುವವರು ಮೂಲ ಮಾದರಿಯನ್ನು ಖರೀದಿಸಬಹುದು.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಕೆಲವು ಕಾರುಗಳಲ್ಲಿ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಜಿ‌ಟಿ ಆಯ್ಕೆ ನೀಡಲಾಗುತ್ತದೆ. ಈ ಕಾರಣಕ್ಕೆ ಕಾರಿನಲ್ಲಿ ಹೆಚ್ಚು ಪವರ್ ಬಯಸವವರು ಟಾಪ್ ಎಂಡ್ ಮಾದರಿಗಳನ್ನು ಖರೀದಿಸಬಹುದು. ಮೂಲ ಮಾದರಿಯ ಕಾರುಗಳಲ್ಲಿ ಮ್ಯಾನುಯಲ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಮಾತ್ರ ನೀಡಲಾಗುತ್ತದೆ. ಆದರೆ ಟಾಪ್ ಎಂಡ್ ಮಾದರಿಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗುತ್ತದೆ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

3.ಸುರಕ್ಶತಾ ಫೀಚರ್ ಗಳು

BNVSAP ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಕಾರುಗಳಲ್ಲಿ ಫ್ರಂಟ್ ಏರ್‌ಬ್ಯಾಗ್‌, ಎಬಿಎಸ್ ನಂತಹ ಕೆಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಕಡ್ಡಾಯಗೊಳಿಸಿದೆ. ಆದರೆ ಮೂಲ ಮಾದರಿಯ ಕಾರುಗಳಲ್ಲಿ ಎಲ್ಲಾ ಸುರಕ್ಷತಾ ಫೀಚರ್ ಗಳನ್ನು ನೀಡುವುದಿಲ್ಲ. ಕಾರುಗಳಲ್ಲಿ ನೀಡಲಾಗುವ ಏರ್ ಬ್ಯಾಗ್ ಗಳಂತಹ ಸುರಕ್ಷತಾ ಫೀಚರ್ ಗಳು ಅಪಘಾತವಾದಾಗ ಕಾರಿನಲ್ಲಿರುವವರನ್ನು ರಕ್ಷಿಸುತ್ತವೆ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಸೈಡ್ ಕರ್ಟೈನ್ ಏರ್‌ಬ್ಯಾಗ್‌ಗಳು, ಇಬಿಡಿ, ಇಎಸ್‌ಪಿ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ ಗಳನ್ನು ಕಾರಿನ ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ನೀಡಲಾಗುತ್ತದೆ. ಈ ಎಲ್ಲಾ ಸುರಕ್ಷತಾ ಫೀಚರ್ ಗಳನ್ನು ಹೊಂದಿರುವ ಕಾರಣದಿಂದಲೇ ಟಾಪ್ ಎಂಡ್ ಮಾದರಿಗಳ ಬೆಲೆ ಮೂಲ ಮಾದರಿಗಳ ಬೆಲೆಗಿಂತ ಹೆಚ್ಚಾಗಿರುತ್ತದೆ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

4. ಸೌಕರ್ಯಗಳು

ಸುರಕ್ಷತಾ ಫೀಚರ್ ಗಳಂತೆ, ಮೂಲ ಮಾದರಿಗಳು ಟಾಪ್ ಎಂಡ್ ಮಾದರಿಗಳಲ್ಲಿ ಲಭ್ಯವಿರುವಂತಹ ಹಲವು ಫೀಚರ್ ಗಳನ್ನು ಪಡೆಯುವುದಿಲ್ಲ. ಮೂಲ ಮಾದರಿ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, ಇನ್ಫೋಟೇನ್‌ಮೆಂಟ್ ಸಿಸ್ಟಂ, ರಿಮೋಟ್ ಟ್ರಂಕ್ ನಂತಹ ಹಲವು ಫೀಚರ್ ಗಳನ್ನು ನೀಡುವುದಿಲ್ಲ. ಕಾರುಗಳ ಟಾಪ್ ಎಂಡ್ ಮಾದರಿಗಳು ಕಂಪನಿಯು ಕಾರಿನೊಂದಿಗೆ ನೀಡಬಹುದಾದ ಎಲ್ಲಾ ಐಷಾರಾಮಿ ಹಾಗೂ ಪ್ರೀಮಿಯಂ ಫೀಚರ್ ಗಳನ್ನು ಹೊಂದಿರುತ್ತವೆ. ಈ ಫೀಚರ್ ಗಳು ಮೂಲ ಮಾದರಿಗಳಲ್ಲಿ ಕಂಡು ಬರುವುದಿಲ್ಲ. ಇದರಿಂದ ಮೂಲ ಮಾದರಿಗಳು ನಿಷ್ಪ್ರಯೋಜಕವೆಂದು ಅರ್ಥವಲ್ಲ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

5. ಕಾರಿನ ಮರು ಮಾರಾಟ ಮೌಲ್ಯ

ಇದು ಪ್ರತಿಯೊಬ್ಬ ಕಾರು ಖರೀದಿದಾರರ ಚಿಂತೆಯಾಗಿದೆ. ಪ್ರತಿ 3 - 4 ವರ್ಷಗಳಿಗೊಮ್ಮೆ ಕಾರ್ ಅನ್ನು ಬದಲಿಸುವವರಿಗೆ ಇದು ಅನ್ವಯಿಸುತ್ತದೆ. ಕಾರುಗಳ ಮಾದರಿಗಳನ್ನು ಮರು ಮಾರಾಟ ಮಾಡುವಾಗ ಕಾರುಗಳ ಬೆಲೆ ದೊಡ್ಡ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಇದರಿಂದ ಕಾರ್ ಅನ್ನು ಖರೀದಿಸುವಾಗ ಖರ್ಚು ಮಾಡಿದ ಹೆಚ್ಚುವರಿ ಮೊತ್ತವನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಶೀಘ್ರದಲ್ಲಿಯೇ ಕಾರುಗಳಲ್ಲಿ ಫ್ಲೆಕ್ಸ್ ಎಂಜಿನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಿದ್ದಾರೆ. ಟೊಯೊಟಾ ಮೋಟಾರ್ ಕಾರ್ಪೊರೇಷನ್, ಸುಜುಕಿ ಮತ್ತು ಹ್ಯುಂಡೈನ ಉನ್ನತ ಅಧಿಕಾರಿಗಳು ಶೀಘ್ರದಲ್ಲೇ ಫ್ಲೆಕ್ಸ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಫ್ಲೆಕ್ಸ್ ಇಂಧನವು ಗ್ಯಾಸೋಲಿನ್, ಮೆಥನಾಲ್ ಅಥವಾ ಎಥೆನಾಲ್ ಸಂಯೋಜನೆಯಿಂದ ಮಾಡಿದ ಪರ್ಯಾಯ ಇಂಧನವಾಗಿದೆ. ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಭಾರತವು ಪ್ರತಿ ವರ್ಷ ರೂ. 8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶವು ಪೆಟ್ರೋಲ್, ಡೀಸೆಲ್ ಇಂಧನಗಳ ಮೇಲೆ ಅವಲಂಬಿತವಾಗಿದ್ದರೆ, ಮುಂದಿನ ಐದು ವರ್ಷಗಳಲ್ಲಿ ಅದರ ಆಮದು ವೆಚ್ಚವು ರೂ. 25 ಲಕ್ಷ ಕೋಟಿಗಳಿಗೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ಪೆಟ್ರೋಲ್, ಡೀಸೆಲ್ ಇಂಧನಗಳ ಆಮದನ್ನು ಕಡಿಮೆ ಮಾಡಲು, ನಾನು ಮುಂದಿನ 2 - 3 ದಿನಗಳಲ್ಲಿ ಆದೇಶವನ್ನು ಹೊರಡಿಸಲಿದ್ದೇನೆ. ಕಾರು ತಯಾರಕ ಕಂಪನಿಗಳು ಫ್ಲೆಕ್ಸ್ ಇಂಧನ ಎಂಜಿನ್ ವಾಹನಗಳನ್ನು (ಒಂದಕ್ಕಿಂತ ಹೆಚ್ಚು ಇಂಧನದಿಂದ ಚಲಾಯಿಸಬಹುದು) ಹೊಂದುವಂತೆ ಕೇಳಿ ಕೊಳ್ಳುತ್ತೇನೆ. ವಾಹನ ತಯಾರಕ ಕಂಪನಿಗಳು ಸರ್ಕಾರದ ನಿರ್ಧಾರವನ್ನು ಬೆಂಬಲಿಸಿ, ಗ್ರಾಹಕರಿಗೆ ಫ್ಲೆಕ್ಸ್ ಎಂಜಿನ್ ಆಯ್ಕೆಯನ್ನು ನೀಡುತ್ತಾರೆ ಎಂದು ಅವರು ಭಾವಿಸುತ್ತೇನೆ ಎಂದು ಗಡ್ಕರಿ ಹೇಳಿದರು.

ಕಾರುಗಳ ಮೂಲ ಮಾದರಿ ಹಾಗೂ ಟಾಪ್ ಎಂಡ್ ಮಾದರಿಗಳ ನಡುವಿರುವ ವ್ಯತ್ಯಾಸಗಳಿವು

ವಾಹನ ತಯಾರಕ ಕಂಪನಿಗಳು 100% ಪೆಟ್ರೋಲ್ ಅಥವಾ ಜೈವಿಕ ಎಥೆನಾಲ್‌ನಿಂದ ಚಲಿಸುವಂತಹ ವಾಹನಗಳ ಆಯ್ಕೆಯನ್ನು ನೀಡಬೇಕು ಎಂದು ಗಡ್ಕರಿ ಹೇಳಿದರು. ಅಂತಹ ವಾಹನಗಳಿಗೆ ಅನುಮತಿ ನೀಡಲು ಸರ್ಕಾರವು ಸಂಪೂರ್ಣ ಸಿದ್ಧವಾಗಿದೆ. ಫ್ಲೆಕ್ಸ್ ಫ್ಯುಯಲ್ ಇಂಜಿನ್ ತಂತ್ರಜ್ಞಾನವು ಸುಲಭವಾಗಿ ಲಭ್ಯವಿದ್ದು, ಆಟೋ ಕಂಪನಿಗಳು ಬಯಸಿದರೆ, ಭಾರತೀಯ ಆಟೋ ಉದ್ಯಮವು ಶುದ್ಧ ಇಂಧನದತ್ತ ದೊಡ್ಡ ಹೆಜ್ಜೆ ಇಡಬಹುದು ಎಂದು ಅವರು ಹೇಳಿದರು.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Comparison between base variant and top end variants of cars details
Story first published: Monday, December 13, 2021, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X