ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 2021ರ ಸೆಪ್ಟೆಂಬರ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು 37% ನಷ್ಟು ಹೆಚ್ಚಾಗಿದೆ. ಈ ವಾಹನಗಳ ಮಾರಾಟದಲ್ಲಿ ಮಧ್ಯಮ ಗಾತ್ರದ ಎಕ್ಸಿಕ್ಯೂಟಿವ್ ಸೆಡಾನ್ ಕಾರುಗಳ ಪಾತ್ರವು ನಿರ್ಣಾಯಕವಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯು‌ವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಕೆಲವು ವರ್ಷಗಳ ಹಿಂದೆ ಭಾರತವೂ ಸೇರಿದಂತೆ ಬಹುತೇಕ ದೇಶಗಳ ರಸ್ತೆಗಳಲ್ಲಿ ಸೆಡಾನ್ ಕಾರುಗಳು ಹೆಚ್ಚು ಕಾಣಿಸಿಕೊಳ್ಳುತ್ತಿದ್ದವು. ಆದರೆ ಕಳೆದ ಕೆಲವು ತಿಂಗಳುಗಳಿಂದ ಕಾಂಪ್ಯಾಕ್ಟ್ ಹಾಗೂ ಮಧ್ಯಮ ಗಾತ್ರದ ಸೆಡಾನ್‌ ಕಾರುಗಳ ಮಾರಾಟ ಪ್ರಮಾಣವು ಕಡಿಮೆಯಾಗಿದೆ. ಕಳೆದ ತಿಂಗಳು ಮಿಡ್ ಸೈಜ್ ಸೆಡಾನ್ ಕಾರು ಸೆಗ್ ಮೆಂಟಿನಲ್ಲಿ ಒಟ್ಟು 8,370 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಈ ಅಂಕಿ ಅಂಶವು 2020ರ ಸೆಪ್ಟೆಂಬರ್ ತಿಂಗಳಿಗಿಂತ 67% ನಷ್ಟು ಕಡಿಮೆಯಾಗಿದೆ. ಆ ತಿಂಗಳು 25,231 ಯುನಿಟ್ ಮಧ್ಯಮ ಗಾತ್ರದ ಸೆಡಾನ್‌ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಎಕ್ಸಿಕ್ಯುಟಿವ್ ಸೆಡಾನ್‌ ಕಾರು ಸೆಗ್ ಮೆಂಟಿನಲ್ಲಿ Honda City, Maruti Suzuki Ciaz, Hyundai Verna, Skoda Rapid ಹಾಗೂ Volkswagen Vento ಸೇರಿದಂತೆ ಹಲವು ಕಾರುಗಳನ್ನು ಮಾರಾಟ ಮಾಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಕಳೆದ ತಿಂಗಳು ಒಟ್ಟು 5,842 ಎಕ್ಸಿಕ್ಯುಟಿವ್ ಸೆಡಾನ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ 7,963 ಯುನಿಟ್ ಎಕ್ಸಿಕ್ಯುಟಿವ್ ಸೆಡಾನ್ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ದೇಶಿಯ ಮಾರುಕಟ್ಟೆಯಲ್ಲಿ ಎಕ್ಸಿಕ್ಯುಟಿವ್ ಸೆಡಾನ್‌ ಕಾರುಗಳ ಮಾರಾಟ ಪ್ರಮಾಣವು 27% ನಷ್ಟು ಕಡಿಮೆಯಾಗಿದೆ. Honda City ಎಂದಿನಂತೆ ಹೆಚ್ಚು ಮಾರಾಟವಾದ ಎಕ್ಸಿಕ್ಯುಟಿವ್ ಸೆಡಾನ್ ಕಾರ್ ಆಗಿ ಮುಂದುವರಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಹೋಂಡಾ ಸಿಟಿ ಸೆಡಾನ್ ಕಾರಿನ ಮಾರಾಟವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ತಿಂಗಳು ಹೋಂಡಾ ಸಿಟಿ ಕಾರಿನ 3,348 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಇನ್ನು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರಿನ 2,709 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಜಾಗತಿಕ ಆಟೋ ಮೊಬೈಲ್ ಮಾರುಕಟ್ಟೆಯಂತೆಯೇ ಭಾರತದ ಆಟೋ ಮೊಬೈಲ್ ಉದ್ಯಮವು ಸಹ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಕಳೆದಸೆಪ್ಟೆಂಬರ್‌ನಲ್ಲಿ ವಾಹನಗಳ ಮಾರಾಟ ಪ್ರಮಾಣ ಕಡಿಮೆಯಾಗಲು ಇದು ಪ್ರಮುಖ ಕಾರಣವಾಗಿದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಫಾಡಾ) 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ಎಲ್ಲಾ ರೀತಿಯ ವಾಹನಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಈ ಅಂಕಿ ಅಂಶಗಳ ಪ್ರಕಾರ ಭಾರತೀಯ ಆಟೋ ಮೊಬೈಲ್ ಉದ್ಯಮವು ಕಳೆದ ತಿಂಗಳು ರಿಟೇಲ್ ಮಾರಾಟದಲ್ಲಿ 5% ನಷ್ಟು ಕುಸಿತವನ್ನು ದಾಖಲಿಸಿದೆ. ದ್ವಿ ಚಕ್ರ ವಾಹನ ಹಾಗೂ ಟ್ರಾಕ್ಟರ್ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. ಫಾಡಾ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳು ರಿಟೇಲ್ ಮಾರಾಟದಲ್ಲಿ ಒಟ್ಟು 12,96,257 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗಿಂತ 5.27% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ರಿಟೇಲ್ ಮಾರಾಟದಲ್ಲಿ ಒಟ್ಟು 13,68,307 ಯುನಿಟ್‌ ವಾಹನಗಳು ಮಾರಾಟವಾಗಿದ್ದವು. ಕಳೆದ ತಿಂಗಳು ದ್ವಿ ಚಕ್ರ ವಾಹನ ಹಾಗೂ ಟ್ರ್ಯಾಕ್ಟರ್ ಮಾರಾಟ ಪ್ರಮಾಣವು ಕಡಿಮೆಯಾಗಿದ್ದರೆ, ಇತರ ವಿಭಾಗಗಳಾದ ಪ್ರಯಾಣಿಕ ವಾಹನ, ಕಮರ್ಷಿಯಲ್ ವಾಹನ ಹಾಗೂ ತ್ರಿ ಚಕ್ರ ವಾಹನಗಳ ರಿಟೇಲ್ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಫಾಡಾ ದೇಶದ 1,562 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿ‌ಒ) ಪೈಕಿ 1,357 ಕಚೇರಿಗಳಿಂದ ವಾಹನ ನೋಂದಣಿ ಅಂಕಿ ಅಂಶಗಳನ್ನು ಸಂಗ್ರಹಿಸಿದೆ, ಅದರ ಪ್ರಕಾರ ಕಳೆದ ತಿಂಗಳು ದ್ವಿ ಚಕ್ರ ವಾಹನಗಳ ಮಾರಾಟ ಪ್ರಮಾಣವು 9,14,621 ಯೂನಿಟ್‌ಗಳಾಗಿದೆ. ಈ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 11.54% ನಷ್ಟು ಕಡಿಮೆಯಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 10,33,895 ಯುನಿಟ್‌ ದ್ವಿ ಚಕ್ರ ವಾಹನಗಳು ಮಾರಾಟವಾಗಿದ್ದವು.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ರಿಟೇಲ್ ಟ್ರಾಕ್ಟರ್ ಮಾರಾಟ ಪ್ರಮಾಣವು ಕಳೆದ ತಿಂಗಳು 52,896 ಯುನಿಟ್‌ಗಳಿಗೆ ಇಳಿದಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 69,462 ಯುನಿಟ್‌ಗಳಾಗಿತ್ತು. ಈ ಮೂಲಕ ರಿಟೇಲ್ ಮಾರಾಟ ಪ್ರಮಾಣವು ಕಳೆದ ತಿಂಗಳು 23.85% ನಷ್ಟು ಕುಸಿದಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 2,00,576 ಯುನಿಟ್‌ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ ಕುಸಿತ ಕಂಡ ಎಕ್ಸಿಕ್ಯುಟಿವ್ ಸೆಡಾನ್ ಕಾರು ಮಾರಾಟ

ಕಳೆದ ತಿಂಗಳು 2,33,308 ಯುನಿಟ್‌ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಮೂಲಕ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ 16.32% ನಷ್ಟು ಹೆಚ್ಚಳವಾಗಿದೆ. ಕಮರ್ಷಿಯಲ್ ವಾಹನಗಳ ರಿಟೇಲ್ ಮಾರಾಟವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 46.64% ನಷ್ಟು ಏರಿಕೆಯಾಗಿದೆ.

Most Read Articles

Kannada
English summary
Executive sedan car sales declines in september 2021 details
Story first published: Wednesday, October 20, 2021, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X