ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಸಾಮಾನ್ಯವಾಗಿ ಕಾರು ವಿತರಕರು ಕಾರುಗಳನ್ನು ಸರ್ವೀಸ್ ಸೆಂಟರ್'ನಲ್ಲಿ ಸರ್ವೀಸ್ ಮಾಡಿಸುವಂತೆ ಸಲಹೆ ನೀಡುತ್ತಾರೆ. ಇತ್ತೀಚಿಗೆ ಹೊಸ ಸಫಾರಿ ಎಸ್‌ಯುವಿಯನ್ನು ಸರ್ವೀಸ್ ಸೆಂಟರ್'ಗೆ ಕೊಂಡೊಯ್ದ ಕಾರು ಮಾಲೀಕರಿಗೆ ವಿಭಿನ್ನ ಅನುಭವವಾಗಿದೆ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಈ ಅನುಭವವನ್ನು ಅವರು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ ಟಾಟಾ ಮೋಟಾರ್ಸ್ ಸರ್ವೀಸ್ ಸೆಂಟರ್ ಅವರಿಗೆ ಯಾವ ರೀತಿ ಸರ್ವೀಸ್ ನೀಡಿತು, ಆ ಕಾರು ಮಾಲೀಕರು ಯಾವ ರೀತಿಯ ಅನುಭವವನ್ನು ಅನುಭವಿಸಿದರು ಎಂಬುದನ್ನು ನೋಡೋಣ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಸಫಾರಿ ಎಸ್‌ಯು‌ವಿಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಿತು. ಈ ಎಸ್‌ಯು‌ವಿಯು ಅಲ್ಪ ಅವಧಿಯಲ್ಲಿಯೇ ಜನಪ್ರಿಯತೆಯನ್ನು ಪಡೆದಿದೆ. ಟಾಟಾ ಮೋಟಾರ್ಸ್ ಈ ಎಸ್‌ಯು‌ವಿಯ ಬಗ್ಗೆ ವಿವಿಧ ರೀತಿಯಲ್ಲಿ ಪ್ರಚಾರ ಮಾಡುತ್ತಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಇತ್ತೀಚೆಗೆ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಟಾಟಾ ಸಫಾರಿಗೆ ಸಂಬಂಧಿಸಿದ ಬೃಹತ್ ಜಾಹೀರಾತು ಬ್ಯಾನರ್ ಅನ್ನು ಸ್ಥಾಪಿಸಿದೆ. ಈ ಬ್ಯಾನರ್ ಭಾರತದ ಅತಿದೊಡ್ಡ ಜಾಹೀರಾತು ಬ್ಯಾನರ್ ಆಗಿದೆ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಇದರ ಜೊತೆಗೆ ಐಪಿಎಲ್ ಪಂದ್ಯಗಳ ವೇಳೆ ಕ್ರಿಕೆಟ್ ಮೈದಾನದಲ್ಲಿ ಸಫಾರಿ ಎಸ್‌ಯು‌ವಿಯನ್ನು ಪ್ರದರ್ಶಿಸಲು ಟಾಟಾ ಮೋಟಾರ್ಸ್ ನಿರ್ಧರಿಸಿದೆ. ಈ ರೀತಿಯ ಜಾಹೀರಾತುಗಳಲ್ಲದೆ ಕೆಲವು ಸಫಾರಿ ಕಾರು ಮಾಲೀಕರು ಸಹ ಸಫಾರಿ ಕಾರಿನ ಪರವಾಗಿ ಜಾಹೀರಾತು ನೀಡುತ್ತಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಈ ಜಾಹೀರಾತುಗಳು ಗ್ರಾಹಕರಿಗೆ ಅಮೂಲ್ಯವಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಈ ಲೇಖನದಲ್ಲಿರುವ ಘಟನೆ ಗ್ರಾಹಕರ ಅಮೂಲ್ಯ ಜಾಹೀರಾತಿನ ಬಗ್ಗೆಯೂ ಇದೆ. ಜೊತೆಗೆ ಟಾಟಾ ಮೋಟಾರ್ಸ್ ಸರ್ವೀಸ್ ಸೆಂಟರ್'ನ ಅವಸ್ಥೆಯ ಬಗ್ಗೆಯೂ ಹೇಳಿದ್ದಾರೆ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಈ ಸಂಬಂಧ ಅವರು ಎರಡು ವೀಡಿಯೊಗಳನ್ನು ಬಿಡುಗಡೆಗೊಳಿಸಿದ್ದಾರೆ. ಒಂದು ವೀಡಿಯೊದಲ್ಲಿ ಟಾಟಾ ಮೋಟಾರ್ಸ್ ಸರ್ವೀಸ್ ಸೆಂಟರ್'ನ ಅಸಮರ್ಪಕ ಕಾರ್ಯದ ಬಗ್ಗೆ ದೂರಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಎರಡನೇ ವೀಡಿಯೊದಲ್ಲಿ ಟಾಟಾ ಮೋಟಾರ್ಸ್ ತನ್ನ ದೂರಿಗೆ ಹೇಗೆ ಸ್ಪಂದಿಸಿತು ಎಂಬುದನ್ನು ಹೇಳಿದ್ದಾರೆ. ಈ ಸಫಾರಿ ಕಾರಿನ ಮಾಲೀಕರು ತಮ್ಮ ಕಾರಿಗೆ ಮೊದಲ ಸರ್ವೀಸ್ ಮಾಡಿಸಲು ಕಾರ್ ಅನ್ನು ಟಾಟಾ ಮೋಟಾರ್ಸ್ ಕಂಪನಿಯ ಅಧಿಕೃತ ಸರ್ವೀಸ್ ಸೆಂಟರ್'ನಲ್ಲಿ ಬಿಟ್ಟಿದ್ದಾರೆ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಸರ್ವೀಸ್ ನಂತರ ಕಾರ್ ಅನ್ನು ಮನೆಗೆ ಕೊಂಡೊಯ್ಯುವಾಗ ಇನ್ಸ್'ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಡೀಸೆಲ್ ಎಕಾಸ್ಟ್ ಫ್ಲ್ಯುಯಿಡ್ ಪ್ರಮಾಣ ಕಡಿಮೆಯಾಗಿದೆ ಎಂಬ ಎಚ್ಚರಿಕೆ ಸಂದೇಶ ಬಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಡೀಸೆಲ್ ಎಕಾಸ್ಟ್ ಫ್ಲ್ಯುಯಿಡ್ ಯೂರಿಯಾವನ್ನು ಒಳಗೊಂಡಿರುವ ಪ್ರಮುಖ ದ್ರವವಾಗಿದೆ. ಇದು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಫ್ಲ್ಯುಯಿಡ್ ಇಲ್ಲದಿದ್ದರೆ ಕಾರಿನ ಚಲನೆಗೆ ಅಡ್ಡಿಯಾಗುತ್ತದೆ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಈ ಪ್ರಮುಖ ದ್ರವದ ಬಗ್ಗೆ ಸರ್ವೀಸ್ ಸೆಂಟರ್ ಸಿಬ್ಬಂದಿ ಗಮನ ಹರಿಸದೇ ಇರುವ ಬಗ್ಗೆ ಆತಂಕಗೊಂಡ ಸಫಾರಿ ಕಾರಿನ ಮಾಲೀಕರು ಅದನ್ನು ತುಂಬಿಸಲು ಮತ್ತೆ ಅದೇ ಸರ್ವೀಸ್ ಸೆಂಟರ್'ಗೆ ತೆರಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಅಲ್ಲಿದ್ದ ಸರ್ವೀಸ್ ಸೆಂಟರ್ ಸಿಬ್ಬಂದಿ ಆ ದ್ರವ ತುಂಬಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದು ಸಫಾರಿ ಕಾರು ಮಾಲೀಕರಿಗೆ ಮತ್ತಷ್ಟು ಕಿರಿಕಿರಿಯನ್ನುಂಟು ಮಾಡಿದೆ. ಸಾಮಾನ್ಯವಾಗಿ ಡೀಸೆಲ್ ಎಕಾಸ್ಟ್ ಫ್ಲ್ಯುಯಿಡ್ ಪೂರ್ತಿಯಾಗಿ ತುಂಬಲು ಕೇವಲ ಎರಡು ನಿಮಿಷಗಳು ಸಾಕು.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಆದರೆ ಒಂದು ಗಂಟೆ ಕಾದು ಅಸಮಾಧಾನಗೊಂಡ ಸಫಾರಿ ಕಾರು ಮಾಲೀಕರು ಟಾಟಾ ಮೋಟಾರ್ಸ್‌ ಕಂಪನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ಇ-ಮೇಲ್ ಕಳುಹಿಸಿದ್ದಾರೆ. ಅವರು ದೂರು ನೀಡಿದ ಕೂಡಲೇ ಟಾಟಾ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಅವರನ್ನು ಸಂಪರ್ಕಿಸಿ ವಿವರಣೆ ಪಡೆದಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಟಾಟಾ ಸಫಾರಿ ಹೊಸ ವಾಹನವಾಗಿರುವುದರಿಂದ ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಈ ಕಾರಿನ ಬಗ್ಗೆ ಹೆಚ್ಚು ತಿಳಿದಿಲ್ಲ. ಈ ಕಾರಣಕ್ಕೆ ವಿಳಂಬವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ತಕ್ಷಣವೇ ಟಾಟಾ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಸಫಾರಿ ಕಾರು ಮಾಲೀಕರ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಜೊತೆಗೆ ಸರ್ವೀಸ್ ಸೆಂಟರ್'ನಲ್ಲಿ ಉಂಟಾದ ಅನಾನುಕೂಲತೆಗಾಗಿ ಅವರ ಬಳಿ ಕ್ಷಮೆಯಾಚಿಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗ್ರಾಹಕರು ಕಾರು ತಯಾರಕ ಕಂಪನಿಗಳಿಂದ ಈ ರೀತಿಯ ಪ್ರತಿಕ್ರಿಯೆಯನ್ನೇ ನಿರೀಕ್ಷಿಸುತ್ತಾರೆ. ಟಾಟಾ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿದ ರೀತಿಗೆ ಸಫಾರಿ ಕಾರಿನ ಮಾಲೀಕರು ಖುಷಿಯಾಗಿದ್ದಾರೆ.

ಹೊಸ ಸಫಾರಿ ಕಾರು ಮಾಲೀಕ ಕಳುಹಿಸಿದ ಇ-ಮೇಲ್'ಗೆ ತಕ್ಷಣವೇ ಸ್ಪಂದಿಸಿದ ಟಾಟಾ ಮೋಟಾರ್ಸ್

ಇದರ ಬಗ್ಗೆ ಅವರು ಎರಡನೇ ವೀಡಿಯೊದಲ್ಲಿ ಮಾಹಿತಿ ನೀಡಿದ್ದಾರೆ. ಗ್ರಾಹಕರ ಕುಂದುಕೊರತೆಗಳನ್ನು ತಕ್ಷಣವೇ ಪರಿಹರಿಸಲು ಟಾಟಾ ಮೋಟಾರ್ಸ್ ಕಂಪನಿಯುಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಈ ರೀತಿಯ ಅನೇಕ ಘಟನೆಗಳು ನಡೆದಿವೆ ಎಂಬುದು ಗಮನಾರ್ಹ.

Most Read Articles

Kannada
English summary
Experience of a Tata Safari customer who went for first service. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X