Just In
Don't Miss!
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಸ್ಟಮೈಸ್ ಮಾಡಿದ ಕ್ಯಾಡಿಲಾಕ್ ಎಸ್ಕಲೇಡ್ ಪ್ಲಾಟಿನಂ ಎಸ್‌ಯುವಿ ಖರೀದಿಸಿದ ನಟಿ
ನಟ ನಟಿಯರಿಗೆ ಸಿನಿಮಾಗಳ ಹೊರತಾಗಿ ಕಾರುಗಳ ಬಗ್ಗೆಯೂ ಸಹ ವಿಪರೀತ ಕ್ರೇಜ್ ಇರುತ್ತದೆ. ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ನಟ ನಟಿಯರು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿ.

ಹಾಲಿವುಡ್'ನ ಜನಪ್ರಿಯ ನಟಿ ಕಿಮ್ ಕಾರ್ಡಶಿಯಾನ್ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಈ ನಟಿ ಈಗ ಪಾಟ್ ಮೋಟಾರ್ ಸ್ಪೋರ್ಟಿನಿಂದ ಹೊಸ ಕಾರನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಕಿಮ್ ಕಾರ್ಡಶಿಯಾನ್ ಕ್ಯಾಡಿಲಾಕ್ ಎಸ್ಕಲೇಡ್ ಪ್ಲಾಟಿನಂ ಎಸ್‌ಯುವಿ ಕಸ್ಟಮೈಸ್ ಕಾರ್ ಅನ್ನು ಖರೀದಿಸಿದ್ದಾರೆ. ಈ ಕಾರು ಹೆಚ್ಚಿನ ಸುರಕ್ಷತೆ ಹೊಂದಿರುವ ಐಷಾರಾಮಿ ಕಾರು. ಅವರು ಈ ಕಾರ್ ಅನ್ನು ಹೆಚ್ಚು ಆಕರ್ಷಕವಾಗಿಸಿದ್ದಾರೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಅವರು ಈ ಬಗ್ಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ಯಾಡಿಲಾಕ್ ಎಸ್ಕಲೇಡ್ ಪ್ಲಾಟಿನಂ ಎಸ್‌ಯುವಿ ಕಾರನ್ನು ಅಲಂಕರಿಸಿರುವ ಕಂಪನಿಯು ಈ ಕಾರಿಗೆ ಹೊಸ ಕೆಕೆ ಸಿಲ್ವರ್ ಬಣ್ಣವನ್ನು ನೀಡಿದೆ.

ಕಿಮ್‌ರವರ ಕೋರಿಕೆಯ ಮೇರೆಗೆ ಕಂಪನಿಯು ಈ ಬಣ್ಣವನ್ನು ಕಾರಿನಾದ್ಯಂತ ನೀಡಿದೆ. ಇದರ ಜೊತೆಗೆ 26 ಇಂಚಿನ ಅಲಾಯ್ ವ್ಹೀಲ್, ಕಾರಿನ ಗ್ಲಾಮರ್ ಅನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚುವರಿಯಾಗಿ ಆಕರ್ಷಕವಾದ ಬಾಡಿ ಪ್ಯಾನೆಲ್‌ಗಳನ್ನು ನೀಡಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಕಾರಿನಲ್ಲಿ ಮೆಶ್ ಶೇಪಿನ ಗ್ರಿಲ್, ಟೀಂಟೆಡ್ ಗ್ಲಾಸ್, ಆರಾಮದಾಯಕವಾದ ಸೀಟ್ ಸೇರಿದಂತೆ ಹಲವಾರು ಐಷಾರಾಮಿ ಫೀಚರ್'ಗಳನ್ನು ನೀಡಲಾಗಿದೆ. ಈ ಕಾರು ದೂರದ ಪ್ರಯಾಣವನ್ನು ಆರಾಮದಾಯಕವಾಗಿಸುತ್ತದೆ.

ತಮ್ಮ ಕಾರಿನ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಲು ಕಿಮ್ ಈ ಕಾರಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಕಾರಣಕ್ಕೆ ಕಿಮ್ ಮದುವೆ ಸಮಾರಂಭಗಳ ಫೋಟೋ ಆಲ್ಬಮ್ ರೀತಿಯಲ್ಲಿ ಫೋಟೋ ಶೂಟ್ ಮಾಡಿದ್ದಾರೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಿಮ್'ರವರು ಶೇರ್ ಮಾಡಿರುವ ಈ ಫೋಟೋಗಳು ಇಂಟರ್'ನೆಟ್'ನಲ್ಲಿ ವೈರಲ್ ಆಗುತ್ತಿವೆ. ಕಿಮ್ ಕಾರ್ಡಶಿಯಾನ್ ಈಗಾಗಲೇ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಈಗ ಅವರ ಕಾರು ಗ್ಯಾರೇಜ್‌ಗೆ ಹೆಚ್ಚುವರಿಯಾಗಿ ಐಷಾರಾಮಿ ಎಸ್ಕಲೇಡ್ ಪ್ಲಾಟಿನಂ ಎಸ್‌ಯುವಿ ಸೇರ್ಪಡೆಯಾಗಿದೆ. ಈ ಕಾರಿನ ಬೆಲೆ 76,195 ಅಮೆರಿಕನ್ ಡಾಲರ್'ಗಳಾಗಿದೆ. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.55,85,664ಗಳಾಗುತ್ತದೆ. ಈ ಕಾರು ಎಂಟ್ರಿ ಲೆವೆಲ್ ಕಾರ್ ಆಗಿದೆ.
ಮೂಲ: ಪ್ಲಾಟಿನಂ ಗ್ರೂಪ್