Just In
- 18 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೋಂಡಾ ಕಾರುಗಳ ಮೇಲೆ ರೂ.2.5 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ಹೊಸ ವರ್ಷದಲ್ಲಿ ತನ್ನ ಆಯ್ದಾ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ. ಹೋಂಡಾ ತನ್ನ ಆಯ್ದಾ ಮಾದರಿಗಳ ಮೇಲೆ ರೂಪಾಂತರಗಳನ್ನು ಆಧರಿಸಿ ರೂ.2.5 ಲಕ್ಷಗಳವರೆಗೆ ಡಿಸ್ಕೌಂಟ್ ನೀಡಿದೆ.

ಹೋಂಡಾ ತನ್ನ ಆಯ್ದಾ ಮಾದರಿಗಳಾದ ಐದನೇ ತಲೆಮಾರಿನ ಸಿಟಿ, ಅಮೇಜ್, ಡಬ್ಲ್ಯುಆರ್-ವಿ ಮತ್ತು ಇತ್ತೀಚೆಗೆ ಸ್ಥಗಿತಗೊಳಿಸಿದ ಹೋಂಡಾ ಸಿವಿಕ್ ಸೆಡಾನ್ ಮೇಲೆಯು ಭರ್ಜರಿ ಡಿಸ್ಕೌಂಟ್ ನೀಡಲಾಗಿದೆ. ಈ ಕಾರುಗಳ ಮೇಲೆ ನಗದು ರಿಯಾಯಿತಿ, ಎಕ್ಸ್‌ಚೆಂಜ್ ಬೋನಸ್ ಮತ್ತು ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಈ ಡಿಸ್ಕೌಂಟ್ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಹೋಂಡಾ ಜಾಝ್
ಈ ಹೋಂಡಾ ಜಾಝ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಇರಿಸಲಾಗಿದೆ. ಹೊಸ ಹೋಂಡಾ ಜಾಝ್ ಕಾರಿನ ಮೇಲೆ ಒಟ್ಟು ರೂ.40,00 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂ.15,000 ನಗದು ಬೋನಸ್ ಮತ್ತು ರೂ.15,000 ಎಕ್ಸ್‌ಚೆಂಜ್ ಬೋನಸ್ ಅನ್ನು ಒಳಗೊಂಡಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಕಳೆದ ವರ್ಷದ ಮಾದರಿಯನ್ನು ಆಯ್ಕೆ ಮಾಡುವ ಗ್ರಾಹಕರಿಗೆ ರೂ.25 ಸಾವಿರಗಳ ನಗದು ಬೋನಸ್ ಮತ್ತು ರೂ.15 ಸಾವಿರಗಳ ವಿನಿಮಯ ಬೋನಸ್ ಅನ್ನು ನೀಡಲಾಗುತ್ತದೆ. ಹೋಂಡಾ ಜಾಝ್ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.7.55 ಲಕ್ಷಗಳಾಗಿದೆ.

ಹೊಂಡಾ ಅಮೇಜ್
ಹೋಂಡಾ ಅಮೇಜ್ ಮಾದರಿ ಪ್ರಸ್ತುತ ಸ್ಟ್ಯಾಂಡರ್ಡ್‌ನಲ್ಲಿ ಲಭ್ಯವಿದೆ ಮತ್ತು ಒಂದೆರಡು ಸ್ಪೆಷಲ್ ಎಡಿಷನ್ ಮಾದರಿ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೋಂಡಾ ಅಮೇಜ್ ಸ್ಪೆಷಲ್ ಎಡಿಷನ್ ಮತ್ತು ಎಕ್ಸ್‌ಕ್ಲೂಸಿವ್ ಎಂದು ಕರೆಯಲ್ಪಡುವ ಮಾದರಿಗಳು ಸೀಮಿತ ಅವಧಿಗೆ ಕೂಡ ಲಭ್ಯವಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕಂಪನಿಯು ಸ್ಟ್ಯಾಂಡರ್ಡ್ ಮತ್ತು ಸೀಮಿತ ಆವೃತ್ತಿಯ ಎರಡೂ ಮಾದರಿಗಳಲ್ಲಿ ರಿಯಾಯಿತಿಯನ್ನು ನೀಡುತ್ತಿದೆ. ಈ ಕಾಂಪ್ಯಾಕ್ಟ್-ಸೆಡಾನ್'ನ 2020ರ ಮಾದರಿಯನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಒಂದೆರಡು ಹೆಚ್ಚಿನ ಪ್ರಯೋಜನಗಳನ್ನು ನೀಡಲಾಗುತ್ತದೆ. ಸ್ಟ್ಯಾಂಡರ್ಡ್ ಮಾದರಿಯ ಮೇಲೆ ರೂ.37,000 ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಇದರ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳಿಗೆ ರೂ.15,000ಗಳ ನಗದು ರಿಯಾಯಿತಿ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ಒಳಗೊಂಡಿದೆ.

ಅಮೇಜ್ ಸ್ಪೆಶಲ್ ಎಡಿಷನ್ ಮಾದರಿ ಮೇಲೆ ರೂ.15 ಸಾವಿರಗಳ ರಿಯಾಯಿತಿಯನ್ನು ಘೋಷಿಸಲಾಗಿದೆ. ಇನ್ನು ಅಮೇಜ್ ಎಕ್ಸ್‌ಕ್ಲೂಸಿವ್ ಎಡಿಷನ್, ಸೀಮಿತ ಆವೃತ್ತಿಯ ಮೇಲೆ ರೂ.12,000ಗಳ ನಗದು ರಿಯಾತಿ ಮತ್ತು ರೂ.15,000ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಹೋಂಡಾ ಡಬ್ಲ್ಯುಡಬ್ಲ್ಯುಆರ್-ವಿ
2021ರ ಹೋಂಡಾ ಬ್ಲ್ಯುಡಬ್ಲ್ಯುಆರ್-ವಿ ಮಾದರಿಯ ಮೇಲೆ ಒಟ್ಟು ರೂ.30,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ರೂ.15,000 ಗಳ ನಗದು ರಿಯಾಯಿತಿ ಮತ್ತು ರೂ.15,000ಗಳ ವಿನಿಮಯ ಬೋನಸ್ ಅನ್ನು ಸೇರಿದೆ.

ಹೋಂಡಾ ಸಿಟಿ
ಹೊಸ ಹೋಂಡಾ ಸಿಟಿ ಕಾಎರಿನ ಮೇಲೆ ಒಟ್ಟು ರೂ.30,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ 10,000 ಗಳ ನಗದು ರಿಯಾಯಿತಿ ಮತ್ತು ರೂ.20,000 ಗಳ ವಿನಿಮಯ ಬೋನಸ್ ಅನ್ನು ಸೇರಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿದ್ದರೂ, ಹೋಂಡಾ ಸಿವಿಕ್ ಅನ್ನು ಈ ತಿಂಗಳು 2.5 ಲಕ್ಷ ಗಳವರೆಗೆ ನೀಡಲಾಗುತ್ತಿದೆ. ಇದರರ್ಥ ದೇಶದಲ್ಲಿ ಮಾರಾಟವಾಗದೆ ಉಳಿದಿರುವ ಕೆಲವು ಸೆಡಾನ್ ಮಾದರಿಗಳು ಇರಬಹುದು.

ಹೋಂಡಾ ಸಿವಿಕ್
ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಂಡಿದ್ದರೂ, ಹೋಂಡಾ ಸಿವಿಕ್ ಕಾರಿನ ಮೇಲೆ ಒಟ್ಟು ರೂ.2.5 ಲಕ್ಷ ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹೋಂಡಾ ಡೀಲರುಗಳ ಬಳಿ ಉಳಿದಿರುವ ಯುನಿಟ್ ಗಳನ್ನು ಮಾರಾಟಗೊಳಿಸಲು ಸಿವಿಕ್ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸರಬಹುದು.