ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರುಗಳ ಮೇಲೆ ಯುಗಾದಿ ಸಂಭ್ರಮಕ್ಕಾಗಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಹೋಂಡಾ ತನ್ನ ಕಾರುಗಳ ಮೇಲೆ ವಿವಿಧ ರೂಪಾಂತರಗಳನ್ನು ಆಧರಿಸಿ ರೂ.38,851 ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೋಂಡಾ ಕಂಪನಿಯು ಈ ತಿಂಗಳು ಜಾಝ್, ಅಮೇಜ್, ಡಬ್ಲ್ಯುಆರ್-ವಿ ಮತ್ತು ಐದನೇ ತಲೆಮಾರಿನ ಹೋಂಡಾ ಸಿಟಿ ಕಾರುಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಈ ಕಾರುಗಳ ರೂಪಾಂತರವನ್ನು ಆಧರಿಸಿ ರೂ.38,851 ಗಳವರೆಗೆ ಆಫರ್ ಅನ್ನು ನೀಡಲಾಗುತ್ತದೆ. ಇದರಲ್ಲಿ ನಗದು ರಿಯಾಯಿತಿ, ಅಕ್ಸೆಸರಿಸ್ ಮತ್ತು ಎಕ್ಸ್‌ಚೆಂಜ್ ಬೋನಸ್ ಅನ್ನು ಒಳಗೊಡಿದೆ. ಈ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೋಂಡಾ ಜಾಝ್

ಹೊಂಡಾ ಕಂಪನಿಯು ತನ್ನ ಜಾಝ್ ಕಾರಿನ ಮೇಲೆ ಈ ತಿಂಗಳು ಒಟ್ಟು ರೂ.32,248 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.15,000 ನಗದು ರಿಯಾಯಿತಿ ಅಥವಾ ರೂ.17,248 ಮೌಲ್ಯದ ಅಕ್ಸೆಸರೀಸ್ ಅನ್ನು ಒಳಗೊಂಡಿದೆ. ಇದರೊಂದಿಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ಹೊಂದಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೋಂಡಾ ಅಮೇಜ್

ಭಾರತದಲ್ಲಿ ಹೋಂಡಾದ ಎಂಟ್ರಿ ಲೆವೆಲ್ ಮಾದರಿಯಾದ ಅಮೇಜ್ ಕಾಂಪ್ಯಾಕ್ಟ್ ಸೆಡಾನ್ ರೂಪಾಂತರಕ್ಕೆ ಅನುಗುಣವಾಗಿ ರೂ.38,851 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ಎಸ್‌ಎಂಟಿ ಪೆಟ್ರೋಲ್ ಹೊರತುಪಡಿಸಿ ಎಲ್ಲಾ ಟ್ರಿಮ್‌ಗಳಿಗೆ ರೂ.17,000 ಗಳ ನಗದು ರಿಯಾಯಿತಿ ಅಥವಾ ರೂ.17,105 ಗಳ ಮೌಲ್ಯದ ಅಕ್ಸೆಸರೀಸ್ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ಪಡೆಯಬಹುದು.

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಇನ್ನು ಅಮೇಜ್ ಎಸ್‌ಎಂಟಿ ಪೆಟ್ರೋಲ್ ಮಾದರಿಗೆ ಭರ್ಜರಿ ಆಫರ್ ಅನ್ನು ನೀಡಲಾಗುತ್ತದೆ. ಇದರಲ್ಲಿ ರೂ.20,000 ಗಳ ನಗದು ರಿಯಾಯಿತಿ ಅಥವಾ ರೂ.23,851 ಗಳ ಮೌಲ್ಯದ ಅಕ್ಸೆಸರೀಸ್ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ಹೊಂದಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೊಂಡಾ ಡಬ್ಲ್ಯುಆರ್-ವಿ

ಹೋಂಡಾ ಕಂಪನಿಯು ತನ್ನ ಡಬ್ಲ್ಯುಆರ್-ವಿ ಎಸ್‍ಯುವಿಗೆ ರೂ.32,527 ಗಳವರೆಗೆ ನೀಡಲಾಗುತ್ತಿದೆ. ಇದರಲ್ಲಿ ರೂ.15,000 ನಗದು ರಿಯಾಯಿತಿ ಮತ್ತು ರೂ.15,000 ಗಳ ಎಕ್ಸ್‌ಚೆಂಜ್ ಬೋನಸ್ ಅನ್ನು ಹೊಂದಿದೆ. ಡಬ್ಲ್ಯುಆರ್-ವಿ ಗ್ರಾಹಕರು ನಗದು ಬೋನಸ್ ಬದಲಿಗೆ ರೂ.17,527 ಗಳ ಅಕ್ಸೆಸರೀಸ್ ಗಳನ್ನು ಆಯ್ಕೆ ಮಾಡಬಹುದು.

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೋಂಡಾ ಸಿಟಿ

ಹೋಂಡಾ ಕಂಪನಿಯು ತನ್ನ ಸಿಟಿ ಸೆಡಾನ್ ಮೇಲೆ ರೂ.10,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಲಾಗುತ್ತದೆ. ಗ್ರಾಹಕರು ತಮ್ಮ ಹಳೆಯ ಕಾರನ್ನು ಶೋ ರೂಂಗೆ ಮಾರಾಟ ಮಾಡಿದಾಗ ಮಾತ್ರ ಎಕ್ಸ್‌ಚೆಂಜ್ ಬೋನಸ್ ಅನ್ನು ಪಡೆಯಬಹುದು.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಹೋಂಡಾ ಕಾರ್ಸ್ 2021ರ ಮಾರ್ಚ್ ತಿಂಗಳಿನ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಹೋಂಡಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 7,103 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಹೋಂಡಾ ಕಂಪನಿಯು 3697 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.92 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಕಳೆದ ವರ್ಷ ದೇಶದಲ್ಲಿ ಲಾಕ್ಡೌನ್ ಇದ್ದ ಕಾರಣ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡಿತ್ತು. ಇನ್ನು 2021ರ ಫೆಬ್ರವರಿಯಲ್ಲಿ ಹೋಂಡಾ 324 ಯುನಿಟ್‌ಗಳನ್ನು ಮಾರಾಟ ಮಾಡಿತು. ಆದ್ದರಿಂದ ಇದು ತಿಂಗಳಿಗೊಮ್ಮೆ ಮಾರಾಟದಲ್ಲಿ ಶೇ.23 ರಷ್ಟು ಕುಸಿತವನ್ನು ಕಂಡಿದೆ.

ಜನಪ್ರಿಯ ಹೋಂಡಾ ಕಾರುಗಳ ಖರೀದಿ ಮೇಲೆ ಆಕರ್ಷಕ ಡಿಸ್ಕೌಂಟ್

ಫೆಬ್ರವರಿ ತಿಂಗಳ ಮಾರಟಕ್ಕೆ ಹೋಲಿಸಿದರೆ ಹೋಂಡಾ ಕಾರುಗಳು ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಹೊಂಡಾ ಕಂಪನಿಗೆ ಮಾರಾಟದಲ್ಲಿ ಸಿಟಿ ಕಾರು ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ಆದರೆ ಇದರ ಮಾದರಿಗಳು ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುವಲ್ಲಿ ವಿಫಲವಾಗಿದೆ. ಆದರೆ ಹೋಂಡಾ ತನ್ನ ಕಾರುಗಳಿಗೆ ಆಫರ್ ಅನ್ನು ನೀಡೀರುವುದು ಮಾರಾಟವನ್ನು ಹೆಚ್ಚಿಸಲು ಸಹಾಯವಾಗಬಹುದು.

Most Read Articles

Kannada
English summary
Honda Cars Offer & Discounts For April. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X