ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಪೆಟ್ರೋಲ್, ಡೀಸೆಲ್ ವಾಹನಗಳು ಪರಿಸರವನ್ನು ಕಲುಷಿತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಕಾರಣಕ್ಕಾಗಿಯೇ ಬಹುತೇಕ ದೇಶಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬದಲು ಪರ್ಯಾಯ ಎಂಜಿನ್ ಹೊಂದಿರುವ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿವೆ.

ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಅವುಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ವಾಹನಗಳ ಮಾಡಿಫಿಕೇಶನ್ ನಡೆಯುತ್ತಲೇ ಇರುತ್ತದೆ. ಈಗ ಲೈಫ್ ಓಡಿ ಎಂಬ ವಾಹನ ಮಾರ್ಪಾಡು ಯೂಟ್ಯೂಬ್ ಚಾನೆಲ್'ನ ಯುವಕರು ಸೈಕಲ್ ಬಳಸಿ ಹೋಂಡಾ ಸಿವಿಕ್ ಕಾರ್ ಅನ್ನು ಮಾಡಿಫೈ ಮಾಡಿದ್ದಾರೆ.

ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಸಿವಿಕ್ ಕಾರಿನಲ್ಲಿರುವ ಪೆಟ್ರೋಲ್ ಎಂಜಿನ್ ತೆಗೆದು, ಸೈಕಲ್ ಪೆಡಲ್ ಮಾಡಿದರೆ ಕಾರು ಚಲಿಸುವ ರೀತಿ ಬದಲಾವಣೆ ಮಾಡಿದ್ದಾರೆ. ಇದರಿಂದ ಹೋಂಡಾ ಸಿವಿಕ್ಕಾರು ಸೈಕಲ್'ನಿಂದ ಚಲಿಸುವ ಕಾರ್ ಆಗಿ ಮಾರ್ಪಟ್ಟಿದೆ.

ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಈ ರೀತಿ ಮಾಡಿಫೈ ಮಾಡಲು ಯುವಕರು ಎರಡು ಪೆಡಲ್‌ಗಳನ್ನು ಹೊಂದಿರುವ ಸೈಕಲ್ ಅನ್ನು ಬಳಸಿದ್ದಾರೆ. ಇಬ್ಬರು ಒಟ್ಟಿಗೆ ಪೆಡಲ್ ಮಾಡಿ ಕಾರನ್ನು ಓಡಿಸಿದರೆ ಈ ಕಾರು ಗಂಟೆಗೆ 3.22 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಸೈಕಲ್'ನ ಹಿಂಬದಿಯಲ್ಲಿರುವ ಚಕ್ರವನ್ನು ತೆಗೆದು ಹಾಕಿ, ಕಾರ್ ಅನ್ನು ಚಾಲನೆ ಮಾಡಲು ಅನುಕೂಲವಾಗುವಂತೆ ಸೈಕಲ್ ಚೈನ್ ಅನ್ನು ಜೋಡಿಸಲಾಗಿದೆ. ಮಾಡಿಫೈಗೊಂಡ ನಂತರ ಈ ಸಿವಿಕ್ ಕಾರು ಸಾಮಾನ್ಯ ಸೈಕಲ್ ರೀತಿಯಲ್ಲಿ ನಿಧಾನವಾಗಿ ಚಲಿಸುತ್ತದೆ.

ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಕಾರನ್ನು ಸೈಕಲ್ ಮೂಲಕ ಓಡಿಸಿದರೂ, ಕಾರಿನಲ್ಲಿ ಕುಳಿತವವರು ಕಾರ್ ಅನ್ನು ನಿಯಂತ್ರಿಸಬಹುದು. ಕಾರಿನ ಎಲ್ಲಾ ನಿಯಂತ್ರಣಗಳನ್ನು ಕಾರಿನೊಳಗೆ ನೀಡಲಾಗಿದೆ. ಇಬ್ಬರು ಅಥವಾ ಮೂರು ಜನರಿದ್ದರೆ ಮಾತ್ರ ಈ ಕಾರ್ ಅನ್ನು ಚಾಲನೆ ಮಾಡಬಹುದು.

ಇದು ಈ ಕಾರಿನ ದೊಡ್ಡ ಸಮಸ್ಯೆಯಾಗಿದೆ. ಈ ವಿಲಕ್ಷಣ ಮಾಡಿಫಿಕೇಶನ್ ರಸ್ತೆಯಲ್ಲಿ ಸಾಗುವವರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಜನರ ಗಮನವನ್ನು ಮಾತ್ರವಲ್ಲದೇ ಪೊಲೀಸರ ಗಮನವನ್ನು ಸೆಳೆದಿದೆ.

ಸೈಕಲ್ ಪೆಡಲ್ ಮೂಲಕ ಮುಂದಕ್ಕೆ ಚಲಿಸುತ್ತದೆ ಈ ಹೋಂಡಾ ಸಿವಿಕ್ ಕಾರು

ಚಿತ್ರಕೃಪೆ: ಲೈಫ್ ಒಡಿ

ಇದೇ ಕಾರಣಕ್ಕೆ ವಿಲಕ್ಷಣವಾಗಿ ಮಾಡಿಫೈಗೊಂಡಿದ್ದ ಕಾರ್ ಅನ್ನು ಪೊಲೀಸರು ತಡೆದಿದ್ದರು. ಆದರೆ ಸರಿಯಾದ ಕಾರಣಗಳನ್ನು ನೀಡಿದ ನಂತರ ಕಾರಿನಲ್ಲಿದ್ದ ಯುವಕರು ದಂಡ ವಿಧಿಸುವುದರಿಂದ ಪಾರಾಗಿದ್ದಾರೆ.

Most Read Articles

Kannada
English summary
Honda Civic car moves with the help of bicycle pedal. Read in Kannada.
Story first published: Tuesday, July 6, 2021, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X