ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ರಕ್ಷಣಾ ಇಲಾಖೆಯು ಕಲ್ಯಾಣಿ ಎಂ 4 ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ರೂ.177.95 ಕೋಟಿಗಳ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಿಂದಾಗಿ ಸ್ವಾವಲಂಬಿ ಭಾರತ ಅಭಿಯಾನವು ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಲಾಗಿದೆ.

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಭಾರತ್ ಫೋರ್ಜ್ ಪುಣೆ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು ರಕ್ಷಣೆ, ಪೆಟ್ರೋಲಿಯಂ, ಗಣಿಗಾರಿಕೆ, ರೈಲು, ಏರೋಸ್ಪೇಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಾಹನಗಳನ್ನು ಉತ್ಪಾದಿಸುತ್ತದೆ. ಕಲ್ಯಾಣಿ ಎಂ 4, ಭಾರತೀಯ ಸೇನೆಗಾಗಿ ಭಾರತ್ ಫೋರ್ಜ್ ಕಂಪನಿಯು ತಯಾರಿಸಿದ ವಿಶೇಷ ಶಸ್ತ್ರಸಜ್ಜಿತ ವಾಹನವಾಗಿದೆ. ಈ ವಾಹನವನ್ನು ಯುದ್ಧ ಹಾಗೂ ರಕ್ಷಣಾ ಕಾರ್ಯಗಳಿಗಾಗಿ ಬಳಸಬಹುದು.

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಈ ವಾಹನವನ್ನು ಭಾರತೀಯ ಸೇನೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಕಲ್ಯಾಣಿ ಎಂ 4 ವಾಹನಕ್ಕೆ ಲ್ಯಾಂಡ್‌ಮೈನ್‌, ಗ್ರೆನೇಡ್‌ಗಳು ಅಥವಾ ಸ್ನೈಪರ್ ಗುಂಡುಗಳಿಂದ ಯಾವುದೇ ತೊಂದರೆಯುಂಟಾಗುವುದಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಈ ವಾಹನದಲ್ಲಿ 8 ಸೇನಾ ಸಿಬ್ಬಂದಿ ಪ್ರಯಾಣಿಸಬಹುದು. ಈ ವಾಹನವು ಸುರಕ್ಷಿತ ಜೊತೆಗೆ ಸಾಕಷ್ಟು ಶಕ್ತಿಯುತವಾಗಿದೆ. ಕಲ್ಯಾಣಿ ಎಂ 4 ವಾಹನದಲ್ಲಿ ಅಳವಡಿಸಿರುವ ಎಂಜಿನ್ 465 ಬಿಹೆಚ್‌ಪಿ ಪವರ್ ಹಾಗೂ 1627 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಭಾರತೀಯ ಸೇನೆಯು ಬಳಸುವ ಇತರ ವಾಹನಗಳಿಗಿಂತ ಕಲ್ಯಾಣಿ ಎಂ 4 ವಾಹನವು ಹೆಚ್ಚು ಶಕ್ತಿಶಾಲಿಯಾಗಿದೆ. ಕಲ್ಯಾಣಿ ಎಂ 4 ವಾಹನವು ಒಟ್ಟು 16 ಟನ್ ತೂಕವನ್ನು ಹೊಂದಿದೆ. ಈ ವಾಹನವು 2.6 ಟನ್ ಭಾರವನ್ನು ಸಾಗಿಸಬಲ್ಲದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಇಷ್ಟು ಭಾರವನ್ನು ಹೊತ್ತರೂ ಈ ವಾಹನವು ಪ್ರತಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಸಾಗಬಲ್ಲದು. ಕಲ್ಯಾಣಿ ಎಂ 4 ವಾಹನವು ಹಲವಾರು ಫೀಚರ್'ಗಳನ್ನು ಹೊಂದಿದ್ದು ಸಾಮಾನ್ಯ ಶಸ್ತ್ರಸಜ್ಜಿತ ವಾಹನಕ್ಕಿಂತ ಭಿನ್ನವಾಗಿದೆ.

ಈ ವಾಹನದಲ್ಲಿ ಅಳವಡಿಸಿರುವ ಸಸ್ಪೆಂಷನ್ ಹದಗೆಟ್ಟ ರಸ್ತೆಗಳಲ್ಲಿಯೂ ಕಲ್ಯಾಣಿ ಎಂ 4 ವಾಹನವನ್ನು ಆರಾಮವಾಗಿ ಚಲಿಸುವಂತೆ ಮಾಡುತ್ತದೆ. ಕಲ್ಯಾಣಿ ಎಂ 4ರ ಡ್ರೈವರ್ ಕ್ಯಾಬಿನ್ ಸಾಕಷ್ಟು ಆಧುನಿಕ ಉಪಕರಣಗಳನ್ನು ಹೊಂದಿದೆ.

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಈ ಕ್ಯಾಬಿನ್'ನೊಳಗೆ ದೊಡ್ಡ ಸ್ಕ್ರೀನ್ ಅಳವಡಿಸಲಾಗಿದೆ. ಈ ಸ್ಕ್ರೀನ್ ಕ್ಯಾಮೆರಾ ಮೂಲಕ ವಾಹನದ ಹೊರಗೆ ನಡೆಯುವ ಚಟುವಟಿಕೆಗಳನ್ನು ಚಾಲಕನ ಗಮನಕ್ಕೆ ತರುತ್ತದೆ. ಕಲ್ಯಾಣಿ ಎಂ 4 ವಾಹನವು ಜಿಪಿಎಸ್ ಟ್ರ್ಯಾಕಿಂಗ್ ಸಾಧನವನ್ನು ಹೊಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಶಸ್ತ್ರಸಜ್ಜಿತ ವಾಹನ ಖರೀದಿಗಾಗಿ ಭಾರತ್ ಫೋರ್ಜ್ ಜೊತೆ ಒಪ್ಪಂದ ಮಾಡಿಕೊಂಡ ರಕ್ಷಣಾ ಇಲಾಖೆ

ಈ ವಾಹನದಲ್ಲಿ ಬ್ರೇಕಿಂಗ್'ಗಾಗಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಅಳವಡಿಸಲಾಗಿದೆ. ಬ್ರೇಕ್‌ಗಳನ್ನು ಡಿಸ್ಕ್ ಬ್ರೇಕ್‌ಗಳೊಂದಿಗೆ ಅಳವಡಿಸಲಾಗಿದೆ. ಕಲ್ಯಾಣಿ ಎಂ 4 ವಾಹನದಲ್ಲಿರುವ ಫ್ಯೂಯಲ್ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸಿದರೆ 800 ಕಿ.ಮೀಗಳವರೆಗೆ ಸಂಚರಿಸಬಹುದು.

ಮೂಲ: ಪುಣೆಕಾರ್ ನ್ಯೂಸ್

Most Read Articles

Kannada
English summary
Indian Army deal with Bharat Forge to purchase Kalyani M4 vehicle. Read in Kannada.
Story first published: Monday, March 22, 2021, 12:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X