2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಬ್ರಿಟಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಜಾಗ್ವಾರ್ ತನ್ನ ಫ್ಲ್ಯಾಗ್‌ಶಿಪ್ ಎಸ್‌ಯುವಿ ಮಾದರಿಯಾದ ಎಫ್-ಪೇಸ್ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.69.99 ಲಕ್ಷ ಬೆಲೆ ಹೊಂದಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಭಾರತದಲ್ಲಿ ಜಾಗ್ವಾರ್ ಕಂಪನಿಯ ಮೊದಲ ಎಸ್‌ಯುವಿ ಮಾದರಿಯಾದ ಎಫ್-ಪೇಸ್ ಕಾರು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 2021ರ ಆವೃತ್ತಿಯಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಮನಸೆಳೆಯುವ ನೀರಿಕ್ಷೆಯಲ್ಲಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

2021ರ ಎಫ್‌-ಪೇಸ್ ಮಾದರಿಯಲ್ಲಿ ಕಂಪನಿಯು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಆರ್ ಡೈನಾಮಿಕ್ ಆವೃತ್ತಿಯನ್ನು ಪರಿಚಯಿಸಿದ್ದು, ಹೊಸ ಆವೃತ್ತಿಯೊಂದಿಗೆ ಪರ್ಫಾಮೆನ್ಸ್ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಹೊಸ ಕಾರಿನಲ್ಲಿ ಜಾಗ್ವಾರ್ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಕಾರಿನ ಮುಂಭಾಗದಲ್ಲಿ ಆಕರ್ಷಕ ವಿನ್ಯಾಸದ ಲೊಗೊ ಜೊತೆ ಗ್ರಿಲ್, ಡ್ಯುಯಲ್ ಜೆ ಆಕಾರದಲ್ಲಿರುವ ಆಲ್ ಎಲ್ಇಡಿ ಕ್ವಾಡ್ ಹೆಡ್‌ಲೈಟ್, ಡೇಟೈಮ್ ರನ್ನಿಂಗ್ ಲೈಟ್ ನೀಡಲಾಗಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

2021ರಲ್ಲಿ ಮಾದರಿಗಾಗಿ ಕಂಪನಿಯು ಹೊಸ ಕಾರಿನ ಹೆಡ್‌ಲ್ಯಾಂಪ್, ಬಂಪರ್, ಎಕ್ಸಾಸ್ಟ್, ರೂಫ್ ರೈಲ್ಸ್ ವಿನ್ಯಾಸವನ್ನು ಬದಲಿಸಿದ್ದು, ಹೊಸ ಕಾರಿನಲ್ಲಿ ಹೊರ ವಿನ್ಯಾಸಗಳು ಮಾತ್ರವಲ್ಲ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಬದಲಾವಣೆಯಾಗಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಎಫ್‌-ಪೇಸ್ ಎಸ್‌ಯುವಿ ಕಾರಿನ ಒಳಭಾಗದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಕಾರ್ ಕನೆಕ್ಟಿವಿಟಿಗಳನ್ನು ಹೆಚ್ಚಿಸಲಾಗಿದ್ದು, ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಹೊಸ ಕಾರು ಮತ್ತಷ್ಟು ಐಷಾರಾಮಿ ಮತ್ತು ಸ್ಪೋರ್ಟಿ ಲುಕ್ ಪಡೆದುಕೊಂಡಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಹೊಸ ಕಾರಿಗೆ ಮಾರ್ಸ್ ರೆಡ್ ಮತ್ತು ಸೀನಾ ಟ್ಯಾಗ್ ಲೆದರ್ ಆಸನಗಳು ಉತ್ತಮವಾಗಿದ್ದು, ಸೆಂಟರ್ ಕನ್ಸೊಲ್‌ನಲ್ಲಿ ಬ್ರಾಂಡ್ ನ್ಯೂ ಪಿವಿ ಪ್ರೊ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್, 11.4 ಇಂಚಿನ ಕವರ್ ಸ್ಕ್ರೀನ್ ಮತ್ತು ಪ್ರತ್ಯೇಕ ಡ್ರೈವ್ ಮೋಡ್ ವಿಭಾಗವನ್ನು ಜೋಡಣೆ ಮಾಡಿದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಇನ್ನು ಸುರಕ್ಷತೆಗಾಗಿ ಹೊಸ ಕಾರಿನಲ್ಲಿ 3ಡಿ ಸರೌಂಡ್ ಕ್ಯಾಮೆರಾ, ಪಿಎಂ 2.5 ಏರ್ ಫಿಲ್ಟರ್, ಮಲ್ಟಿ ಏರ್‌ಬ್ಯಾಗ್ ಜೊತೆಗೆ ಫಿಕ್ಸ್ ಪನೊರಮಿಕ್ ರೂಫ್, ಮಲ್ಟಿ ಫಂಕ್ಷನಲ್ ಸ್ಟೀರಿಂಗ್ ವೀಲ್ಹ್‌ನೊಂದಿಗೆ ಮೌಂಟೆಡ್ ಕಂಟ್ರೋಲ್ಸ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸೌಲಭ್ಯಗಳಿವೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಎಂಜಿನ್ ಮತ್ತು ಪರ್ಫಾಮೆನ್ಸ್

2021ರ ಎಫ್‌-ಪೇಸ್ ಕಾರು 2.0-ಲೀಟರ್ ಪೆಟ್ರೋಲ್ ಟರ್ಬೊ ಮತ್ತು 2.0-ಲೀಟರ್ ಟರ್ಬೊಚಾಜ್ಡ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಪೆಟ್ರೋಲ್ ಕಾರು 201 ಬಿಎಚ್‌ಪಿ, 430 ಎನ್ಎಂ ಟಾರ್ಕ್ ಮತ್ತು ಡೀಸೆಲ್ ಕಾರು 246 ಬಿಎಚ್‌ಪಿ, 365 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

2021ರ ಎಫ್-ಪೇಸ್ ಎಸ್‌ಯುವಿ ಬಿಡುಗಡೆಗೊಳಿಸಿದ ಜಾಗ್ವಾರ್

ಹೊಸ ಕಾರು ಪವರ್‌ಫುಲ್ ಎಂಜಿನ್ ಆಯ್ಕೆಯೊಂದಿಗೆ ಕೇವಲ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ(ಪ್ರತಿ ಗಂಟೆಗೆ) ವೇಗ ಪಡೆದುಕೊಳ್ಳುವ ಗುಣಹೊಂದಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಬಿಎಂಡಬ್ಲ್ಯು ಎಕ್ಸ್3, ಆಡಿ ಕ್ಯೂ5, ರೇಂಜ್ ರೋವರ್ ಇವೋಕ್, ವೊಲ್ವೊ ಎಕ್ಸ್‌ಸಿ60 ಮಾದರಿಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2021 Jaguar F-Pace Launched In India Starting At Rs 69.99 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X