ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಅಮೆರಿಕಾ ಮೂಲದ ಜೀಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಮುಂದಾಗಿದ್ದಾರೆ. ಭಾರತೀಯ ಮಾರುಕಟ್ಟೆಯ ಎಸ್‍ಯುವಿ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಜೀಪ್ ಸಜ್ಜಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಆನ್‌ಲೈನ್ ಮಾಧ್ಯಮವೊಂದ ಜೊತೆ ಜೀಪ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ದತ್ತಾ ಅವರು ಮಾತನಾಡಿ, ಮುಂದಿನ 18 ತಿಂಗಳಲ್ಲಿ ಜೀಪ್ ಕಂಪನಿಯು ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದೆ. ಜೀಪ್ ಕಂಪನಿಯು ಹೊಸ ಗ್ರ್ಯಾಂಡ್ ಚೆರೋಕೀ, ಸಬ್ ಕಾಂಪ್ಯಾಕ್ಟ್ ಎಸ್‍ಯುವಿ ಮತ್ತು ರೆನೆಗೇಡ್ ಅನ್ನು ನೀಡುತ್ತದೆ. ಜೀಪ್‌ನ ಹೊಸ ಮೂರು-ಸಾಲಿನ ಎಸ್‍ಯುವಿಯು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಮುಂದಿನ ವರ್ಷದಲ್ಲಿ ಹೊಸ ಗ್ರ್ಯಾಂಡ್ ಚೆರೋಕೀ ಎಸ್‍ಯುವಿ ಬಿಡುಗಡೆಯಾಗಲಿದೆ, ನಂತರ ಹೊಸ ಸಬ್-4 ಮೀಟರ್ ಎಸ್‌ಯುವಿ ಬಿಡುಗಡೆಯಾಗುತ್ತದೆ. ಜೀಪ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನವೀಕರಿಸಿದ ಕಂಪಾಸ್ ಎಸ್‍ಯುವಿಯನ್ನು ಪರಿಚಯಿಸಿತು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಭಾರತೀಯ ಮಾರುಕಟ್ಟೆಗಾಗಿ ಗೋ-ಲೋಕಲ್ ಕಾರ್ಯತಂತ್ರದಲ್ಲಿ ಎರಡನೇ ಹೆಜ್ಜೆ ಇಟ್ಟು ಸ್ಟೆಲ್ಲಾಂಟಿಸ್ ಇಂಡಿಯಾ ಮಹಾರಾಷ್ಟ್ರದ ರಂಜಂಗಾಂವ್ ಉತ್ಪಾದನಾ ಕೇಂದ್ರದಲ್ಲಿ 2021 ಜೀಪ್ ರಾಂಗ್ಲರ್ ಆಫ್-ರೋಡರ್ನ ಸ್ಥಳೀಯವಾಗಿ ಜೋಡಣೆ ಮಾಡುವುದಕ್ಕೆ ಪ್ರಾರಂಭಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಹೊಸ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಿರುವುದರಿಂದ ಇದರ ಬೆಲೆ ಇಳಿಮುಖವಾಗುವ ಸಾಧ್ಯತೆಗಳಿದೆ. ಅದೇ ರೀತಿ ಜೀಪ್ ಗ್ರ್ಯಾಂಡ್ ಚೆರೋಕಿ ಮಾದರಿಗಳನ್ನು ಸ್ಥಳಿಯವಾಗಿ ಭಾರತದಲ್ಲಿ ಉತ್ಪಾದಿಸಬಹುದು.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಎರಡೂ ಮಾದರಿಗಳ ಸಿಕೆಡಿ ಘಟಕಗಳನ್ನು ಕಾರು ತಯಾರಕರ ರಂಜಂಗಾಂವ್ ಸ್ಥಾವರದಲ್ಲಿ ಜೋಡಿಸಲಾಗುವುದು. ಕಂಪನಿಯು ತನ್ನ ಸ್ಥಳೀಯ ಸೌಲಭ್ಯದಲ್ಲಿ ಎಂಜಿನ್ ಮತ್ತು ಆಕ್ಸಲ್ಗಳನ್ನು ಸಂಪೂರ್ಣವಾಗಿ ಜೋಡಿಸುವ ಗುರಿ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಸ್ಥಳೀಯವಾಗಿ ಅಭಿವೃದ್ದಿಪಡಿಸುವಾಗ ಕಾರು ತಯಾರಕರಿಗೆ ತನ್ನ ವಾಹನಗಳಿಗೆ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಲು ಸಹಾಯ ಮಾಡುತ್ತದೆ. ಪೋರ್ಟ್ಫೋಲಿಯೋ ವಿಸ್ತರಣೆಯೊಂದಿಗೆ, ಜೀಪ್ 2022ರ ಅಂತ್ಯದ ವೇಳೆಗೆ ತನ್ನ 2018ರಲ್ಲಿದ್ದ ಮಾರುಕಟ್ಟೆ ಪಾಲನ್ನು ಮರಳಿ ಪಡೆಯುವ ನಿರೀಕ್ಷೆಯಿದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯು ತನ್ನ ಮಾರಾಟ ಮತ್ತು ಸರ್ವಿಸ್ ಸೆಂಟರ್ ಅನ್ನು ಎರಡು ಪಟ್ಟು ಹೆಚ್ಚಿಸಲಿದೆ.ಮುಂಬರುವ ಹೊಸ ಜೀಪ್ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ಕಾಮನ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ಸಿಟ್ರೋನ್‌ನ ಮುಂಬರುವ ಕಾಂಪ್ಯಾಕ್ಟ್ ಎಸ್‌ಯುವಿ ಸಹ ಅದೇ ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಜನಪ್ರಿಯ ಜೀಪ್ ಎಸ್‍ಯುವಿಗಳು

ಈ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ 1.2ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಆದರೆ ಈ ಹೊಸ ಜೀಪ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ನೀಡಲಾಗುವುದಿಲ್ಲ.

Most Read Articles

Kannada
Read more on ಜೀಪ್ jeep
English summary
Jeep’s Sonet, Venue Rival SUV Coming After Grand Cherokee. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X