ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಅಮೆರಿಕಾ ಮೂಲದ ವಾಹನ ಉತ್ಪಾದನಾ ಕಂಪನಿಯಾದ ಜೀಪ್ ಹೊಸ ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಜೀಪ್ ರ‍್ಯಾಂಗ್ಲರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಜೀಪ್ ಕಂಪನಿಯು ಹೊಸ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗಪಡಿಸಿಲ್ಲ. ಆದರೆ ಟೀಸರ್ ಚಿತ್ರಗಳ ಆಧಾರದ ಮೇಲೆ, ಇದು ಬಾಡಿ-ಆನ್-ಫ್ರೇಮ್ ಎಸ್‍ಯುವಿಯಾಗಿ ಮುಂದುವರಿಯುತ್ತದೆ ಎಂದು ಹೇಳಬಹುದು. ವಿದೇಶಗಳಲ್ಲಿ ಜೀಪ್ ಕಂಪನಿಯು ಆಫ್-ರೋಡ್ ಸ್ಥಳಲ್ಲಿಯು ಜಾರ್ಜಿಂಗ್ ಸೆಂಟರ್ ಅನ್ನು ಅಳವಡಿಸಲಾಗುತ್ತದೆ ಎಂದು ಕಂಪನಿ ಹೇಳಿದೆ. ಇದರಿಂದ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಮಾದರಿಯಲ್ಲಿ ಚಾರ್ಜ್ ಮುಗಿಯುತ್ತದೆ ಎಂಬ ಭಯವಿಲ್ಲದೇ ಆಫ್-ರೋಡ್ ನಲ್ಲಿ ಧೈರ್ಯವಾಗಿ ಚಲಿಸಬಹುದು.

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ವಿನ್ಯಾಸದ ದೃಷ್ಟಿಯಿಂದ, ಆಲ್-ಎಲೆಕ್ಟ್ರಿಕ್ ರ‍್ಯಾಂಗ್ಲರ್ ಬ್ಲೂ ಬಣ್ಣದಿಂದ ಕೂಡಿರುತ್ತದೆ. ಕಾನ್ಸೆಪ್ಟ್ ಮಾದರಿಯನ್ನು ವಿವಿಧ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಅದರ ಐಸಿಇ ಪ್ರತಿರೂಪಕ್ಕಿಂತ ಭಿನ್ನವಾಗಿ ಮುಚ್ಚಿದ ಗ್ರಿಲ್‌ನೊಂದಿಗೆ ಕಾಣಬಹುದು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಇನ್ನು ಇಂಟಿರಿಯರ್ ರ‍್ಯಾಂಗ್ಲರ್ ಹೈಬ್ರಿಡ್ ಮಾದರಿಯಂತೆ ಇರಬಹುದು. ಜೀಪ್ ರಾಂಗ್ಲರ್ ಎಲೆಕ್ಟ್ರಿಕ್ ವಿಶ್ವದ ಮೊದಲ ಆಫ್-ರೋಡ್ ಆಧಾರಿತ ಎಲೆಕ್ಟ್ರಿಕ್ ಎಸ್‍ಯುವಿಗಳಲ್ಲಿ ಒಂದಾಗಲಿದೆ. ಈ ಕಾನ್ಸೆಪ್ಟ್ ಮಾದರಿಯನ್ನು ಏಪ್ರಿಲ್‌ನಲ್ಲಿ ಅನಾವರಣಗೊಳಿಸಲಾಗುತ್ತದೆ.

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಇನ್ನು ಹೊಸ ಜೀಪ್ ರ‍್ಯಾಂಗ್ಲರ್ 4xe ಹೈಬ್ರಿಡ್ ಮಾದರಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ 2.0-ಲೀಟರ್-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 5,250 ಆರ್‌ಪಿಎಂನಲ್ಲಿ 270 ಬಿಹೆಚ್‍ಪಿ ಪವರ್ ಮತ್ತು 3,000 ಆರ್‌ಪಿಎಂನಲ್ಲಿ 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಇನ್ನು ಈ ಪೆಟ್ರೋಲ್ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಇದು 44 ಬಿಹೆಚ್‍ಪಿ ಪವರ್ ಮತ್ತು 53 ಎನ್‌ಎಂ ಟಾರ್ಕ್ ಉತ್ಪಾದಿಸಲಾಗುತ್ತದೆ. ಇನ್ನು 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಜೀಪ್ ರ‍್ಯಾಂಗ್ಲರ್4xe ಮಾದರಿಯಲ್ಲಿ 400ವಿ, 17ಕಿ.ವ್ಯಾಟ್ ಲಿಥಿಯಂ-ಅಯಾನ್ ಬ್ಯಾಟರ್ ಪ್ಯಾಕ್ ಯುನಿಟ್ ಅನ್ನು ಹೊಂದಿದೆ. ಇದನ್ನು ಎರಡನೇ ಸಾಲಿನ ಆಸನಗಳ ಅಡಿಯಲ್ಲಿ ಇರಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್ಸ್ ವಾಟರ್ ಫ್ರೋಫ್ ಆಗಿದೆ ಎಂದು ಕಂಪನಿ ಖಚಿತಪಡಿಸಿದೆ. ಈ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯು 76 ಸೆಂ.ಮೀ ಅಥವಾ 30 ಇಂಚುಗಳಷ್ಟು ಹರಿಯುವ ನೀರಿನಲ್ಲಿ ಸಲಿಸಾಗಿ ಚಲಿಸುತ್ತದೆ. ಇದೇ ಮಾದರಿಯಲ್ಲಿ ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಎಸ್‍ಯುವಿಯು ಇರಬಹುದು ಎಂದು ನಿರೀಕ್ಷಿಸುತ್ತೇವೆ.

ಜೀಪ್ ರ‍್ಯಾಂಗ್ಲರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಟೀಸರ್ ಬಿಡುಗಡೆ

ಇನ್ನು ಜೀಪ್ ರಾಂಗ್ಲರ್ ಎಲೆಕ್ಟ್ರಿಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ, ಈ ಜೀಪ್ ರಾಂಗ್ಲರ್ ಎಲೆಕ್ಟ್ರಿಕ್ ಮಾದರಿಯು ಮುಂದಿನ ವರ್ಷದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಬಿಡುಗಡೆಯಾಗಲಿದೆ.

Most Read Articles

Kannada
Read more on ಜೀಪ್ jeep
English summary
Jeep Wrangler Electric Set To Make Your Adventures. Read In Kannada.
Story first published: Wednesday, February 10, 2021, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X