ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ ತನ್ನ ಆಯ್ದ ಕಾರುಗಳ ಎಂಜಿನ್‌ನಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡುತ್ತಿವೆ. ವರದಿಗಳ ಪ್ರಕಾರ ಸರಿಸುಮಾರು 600 ಡೀಸೆಲ್ ಕಾರುಗಳನ್ನು ರಿಕಾಲ್ ಮಾಡಲಾಗುತ್ತದೆ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಈ ವಾಹನಗಳನ್ನು ಇದೇ ವರ್ಷದ ಜೂನ್ 21 ರಿಂದ ಜುಲೈ 2 ನಡುವೆ ತನ್ನ ನಾಸಿಕ್ ಸ್ಥಾವರದಲ್ಲಿ ತಯಾರಿಸಲಾಗಿದೆ ಎಂದು ಮಹೀಂದ್ರಾ ಕಂಪನಿ ಹೇಳಿದೆ. ಮುಂಬೈ ಮೂಲದ ಕಾರು ತಯಾರಕರು ಸೋಮವಾರ ಹೇಳಿಕೆ ನೀಡಿದ್ದು, ಈ ಕಾರುಗಳಿಂದ ದೋಷಪೂರಿತ ಡೀಸೆಲ್ ಎಂಜಿನ್‌ಗಳನ್ನು ಪರಿಶೀಲಿಸುತ್ತೇವೆ ಮತ್ತು ಬದಲಾಯಿಸುತ್ತೇವೆ. ಯಾವ ಮಾದರಿಗಳಲ್ಲಿ ದೋಷ ಕಂಡು ಬಂದ ಎಂಬುದನ್ನು ಮಹೀಂದ್ರಾ ಕಂಪನಿಯು ಬಹಿರಂಗಪಡಿಸಿಲ್ಲ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಮಹೀಂದ್ರಾ ಕಂಪನಿಯು ತನ್ನ ಗ್ರಾಹಕರಿಗೆ ಡೀಸೆಲ್ ಎಂಜಿನ್‌ಗಳಲ್ಲಿನ ತಪಾಸಣೆ ಮತ್ತು ಅಗತ್ಯ ಬದಲಾವಣೆಗಳನ್ನು ಉಚಿತವಾಗಿ ಕೈಗೊಳ್ಳಲಾಗುವುದು, ಅವರನ್ನು ಕಂಪನಿಯು ಪ್ರತ್ಯೇಕವಾಗಿ ಸಂಪರ್ಕಿಸುತ್ತದೆ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಮಹೀಂದ್ರಾ ಕಂಪನಿಯು ಭಾರತದ ಐದನೇ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿದೆ. ಕಂಪನಿಯು ಜನಪ್ರಿಯ ಎಸ್‍ಯುವಿ ಮಾದರಿಗಳಾದ ಮಹೀಂದ್ರಾ ಎಕ್ಸ್‌ಯುವಿ500, ಎಕ್ಸ್‌ಯುವಿ300, ಥಾರ್, ಸ್ಕಾರ್ಪಿಯೋ, ಬೊಲೆರೊ ಮತ್ತು ಬೊಲೆರೊ ನಿಯೋ ಮಾರಾಟ ಮಾಡುತ್ತಿದೆ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಮಹೀಂದ್ರಾ ಕಂಪನಿಯು ಹೊಸ ತಲೆಮಾರಿನ ಥಾರ್ ಮಾದರಿಯ ಮಾರಾಟದಲ್ಲಿ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದೆ. ಕಂಪನಿಯು ಥಾರ್ ಎಸ್‍ಯುವಿಯು ಎಂಟ್ರಿ ಲೆವೆಲ್ ಮಾದರಿಯನ್ನು ಹೊಸ ನವೀಕರಣಗಳೊಂದಿಗೆ ಇತ್ತೀಚೆಗೆ ಮರುಬಿಡುಗಡೆ ಮಾಡಿತು.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಥಾರ್ ಎಸ್‍ಯುವಿಯ ಬೆಸ್ ಮಾದರಿಯನ್ನು ಕೆಲವು ಹೊಸ ಬದಲಾವಣೆಗಳೊಂದಿಗೆ ಮರುಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಕೂಡ ಲಭ್ಯವಿದೆ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಇನ್ನು ಮಹೀಂದ್ರಾ ಕಂಪನಿಯು ತನ್ನ ಹೊಸ ಬೊಲೆರೊ ನಿಯೋ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಬೊಲೆರೊ ನಿಯೋ ಎಸ್‍ಯುವಿಯ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.8.48 ಲಕ್ಷಗಳಾಗಿದೆ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಬೊಲೆರೊ ನಿಯೋ ಮಾದರಿಯಲ್ಲಿ ಈ ಹಿಂದಿನ ಟಿಯುವಿ300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 100 ಬಿಎಚ್‌ಪಿ ಪವರ್ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರಿಕಾಲ್ ಆಗುತ್ತಿವೆ ದೋಷಪೂರಿತ 600 ಮಹೀಂದ್ರಾ ಡೀಸೆಲ್ ಕಾರುಗಳು

ಮಹೀಂದ್ರಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಮಾದರಿಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಮಹೀಂದ್ರಾ ಕಂಪನಿಯ ನ್ಯೂ ಜನರೇಷನ್ ಥಾರ್ ಮಾರಾಟದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
English summary
Mahindra Recalls 600 Diesel Cars. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X