ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಭಾರತದ ಪ್ರಮುಖ ಮಲ್ಟಿ ಬ್ರಾಂಡ್ ಪೂರ್ವ ಸ್ವಾಮ್ಯದ ಕಾರು ರಿಟೇಲ್ ಕಂಪನಿಯಾದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್ ಲಿಮಿಟೆಡ್ (MFCWL), ಬೆಂಗಳೂರು ನಗರದಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದಿದೆ. ಕಂಪನಿಯು ತುಮಕೂರು ರಸ್ತೆಯಲ್ಲಿರುವ ಎಂಎಸ್‌ಆರ್ ಲೇಔಟ್ ಹಾಗೂ ಸರ್ಜಾಪುರ ರಸ್ತೆಯಲ್ಲಿ ಕ್ರಮವಾಗಿ ಜಿಪ್ಪಿ ಆಟೋಮಾರ್ಟ್ ಹಾಗೂ ರಿನ್ಯೂ 4 ಯು ಆಟೋಮೊಬೈಲ್ಸ್ ಎಂಬ ಎರಡು ಹೊಸ ಮಳಿಗೆಗಳನ್ನು ತೆರೆದಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಈ ಮಳಿಗೆಗಳನ್ನು ತೆರೆಯುವುದರೊಂದಿಗೆ, Mahindra First Choice Wheels Ltd ಈಗ ಬೆಂಗಳೂರಿನಲ್ಲಿ ಉಪಯೋಗಿಸಿದ ಕಾರುಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಹೆಚ್ಚು ಸಂಪರ್ಕಗಳನ್ನು ಒದಗಿಸುತ್ತದೆ. MFCWL ರಾಜ್ಯದಲ್ಲಿ ಒಟ್ಟು 67 ಮಳಿಗೆಗಳನ್ನು ಹೊಂದಿದೆ. ಮಹೀಂದ್ರಾ ಫಸ್ಟ್ ಚಾಯ್ಸ್ ಬಳಸಿದ ಕಾರು ಮಾರುಕಟ್ಟೆ ನಾಯಕನಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಿದ್ಧವಾಗುತ್ತಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಹೊಸ ಮಳಿಗೆಯ ಉದ್ಘಾಟನೆಯ ಬಗ್ಗೆ ಮಹೀಂದ್ರಾ ಫಸ್ಟ್ ಚಾಯ್ಸ್ ವೀಲ್ಸ್ ಲಿಮಿಟೆಡ್‌ನ ಸಿಇಒ ಹಾಗೂ ಎಂಡಿ ಅಶುತೋಷ್ ಪಾಂಡೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಹಾಗೂ ಅಕ್ಕ ಪಕ್ಕದ ಪ್ರದೇಶದಲ್ಲಿ ನಮ್ಮ ನೆಟ್‌ವರ್ಕ್ ಅನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ನಮ್ಮ ಆನ್‌ಲೈನ್ ಬಳಸಿದ ಕಾರ್ ಬುಕಿಂಗ್ ಪೋರ್ಟಲ್‌ನ ಅನುಕೂಲಕ್ಕಾಗಿ ಹೊಸ ಮಳಿಗೆಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಮಹೀಂದ್ರಾ ಫಸ್ಟ್ ಚಾಯ್ಸ್ ಭೌತಿಕ ಮಳಿಗೆಗಳ ನಡುವೆ ಯಾವುದೇ ತೊಂದರೆ ಇಲ್ಲದ ಮಾಲೀಕತ್ವದ ಅನುಭವವನ್ನು ನೀಡುತ್ತದೆ. ಈ ಎರಡೂ ಡೀಲರ್‌ಶಿಪ್‌ಗಳು ಮಹೀಂದ್ರಾ ಫಸ್ಟ್ ಚಾಯ್ಸ್ ಕುಟುಂಬಕ್ಕೆ ಬಹು ಗ್ರಾಹಕರನ್ನು ಸೇರಿಸುತ್ತವೆ ಹಾಗೂ ಕಂಪನಿಯನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರ ತರುತ್ತವೆ ಎಂದು ನಮಗೆ ಖಚಿತವಾಗಿದೆ ಎಂದು ಅವರು ಹೇಳಿದರು. ಹೊಸ ಮಹೀಂದ್ರಾ ಫಸ್ಟ್ ಚಾಯ್ಸ್ ಸ್ಟೋರ್‌ಗಳು MFCWL ಬ್ರ್ಯಾಂಡ್ ಪ್ರತಿನಿಧಿಸುವ ಎಲ್ಲಾ ಸೇವೆಗಳನ್ನು ನೀಡುತ್ತವೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಇವುಗಳಲ್ಲಿ ಪ್ರಮಾಣೀಕೃತ ಉಪಯೋಗಿಸಿದ ಕಾರುಗಳ ಮಾರಾಟ, ಮಹೀಂದ್ರಾ ಪ್ರಮಾಣೀಕೃತ ಉಪಯೋಗಿಸಿದ ಕಾರುಗಳ ಮೇಲಿನ ವಾರಂಟಿ ಸೇರಿವೆ. ಇದರ ಹೊರತಾಗಿ ಸುಲಭ ಹಣಕಾಸು, ತೊಂದರೆ ರಹಿತ ಆರ್‌ಟಿ‌ಒ ವರ್ಗಾವಣೆ, ಅತ್ಯುತ್ತಮ ಗ್ರಾಹಕ ಅನುಭವವನ್ನು ನೀಡಲಾಗುತ್ತದೆ. ಹಲವು ವರ್ಷಗಳಿಂದ MFCWL ಹೆಚ್ಚು ಅಸಂಘಟಿತ ಪೂರ್ವ ಸ್ವಾಮ್ಯದ ಕಾರು ವಿಭಾಗದಲ್ಲಿ ಸಂಘಟಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಈ ಪರಿಸರ ವ್ಯವಸ್ಥೆಯು ಫ್ರಾಂಚೈಸಿಗಳು, ಗ್ರಾಹಕರು, ವಿತರಕರು ಹಾಗೂ ಸಾಂಸ್ಥಿಕ ಗ್ರಾಹಕರಲ್ಲಿ ನಂಬಿಕೆ ಮತ್ತು ಪಾರದರ್ಶಕತೆಯ ವಾತಾವರಣವನ್ನು ಸೃಷ್ಟಿಸಿದೆ. ವಿಶೇಷವೆಂದರೆ ಎಲ್ಲಾ ಫ್ರ್ಯಾಂಚೈಸ್ ಮಾಲೀಕರು ತಂತ್ರಜ್ಞಾನ, ತರಬೇತಿ, ಸಾಫ್ಟ್‌ವೇರ್, ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್‌ಗೆ ಪ್ರವೇಶವನ್ನು ಹೊಂದಿರುತ್ತಾರೆ. MFCWL ದೇಶಾದ್ಯಂತ ಗ್ರಾಹಕರಿಗೆ ಓಮ್ನಿಚಾನಲ್ ಮಾದರಿಯ ಮೂಲಕ ಮಾರಾಟವಾದ 5000 ಕ್ಕೂ ಹೆಚ್ಚು ಪ್ರಮಾಣೀಕೃತ ವಾಹನಗಳ ದೊಡ್ಡ ಸಂಗ್ರಹವನ್ನು ಹೊಂದಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಬಳಸಿದ ಕಾರು ವಿಭಾಗದಲ್ಲಿ ಮಹೀಂದ್ರಾ ಫಸ್ಟ್ ಚಾಯ್ಸ್ ಉದ್ಯಮದ ನಾಯಕನಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಹೀಂದ್ರಾ ಫಸ್ಟ್ ಚಾಯ್ಸ್ ದೇಶದ 350 ಕ್ಕೂ ಹೆಚ್ಚು ನಗರಗಳಲ್ಲಿ 1100ಕ್ಕೂ ಹೆಚ್ಚು ರಿಟೇಲ್ ಮಳಿಗೆಗಳನ್ನು ಹೊಂದಿದ್ದು, ದೇಶದಲ್ಲಿ 2 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ಮಾರಾಟ ಮಾಡಲಾಗಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ ನಿನ್ನೆ ತನ್ನ ಗುತ್ತಿಗೆ ಹಾಗೂ ಚಂದಾದಾರಿಕೆ ವ್ಯವಹಾರಕ್ಕೆ ಸಂಬಂಧಿಸಿದ ಕ್ವಿಕ್ಲಿಜ್ (Quiklyz) ಪ್ಲಾಟ್ ಫಾರಂ ಅನ್ನು ಅಧಿಕೃತವಾಗಿ ಆರಂಭಿಸಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವಿಸಸ್, ಮಹೀಂದ್ರಾ ಗ್ರೂಪ್‌ನ ಒಂದು ಭಾಗವಾಗಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಇದು ಭಾರತದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ. ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳ ಮೇಲೆ ಗಮನಹರಿಸುತ್ತಿರುವ ಕಂಪನಿಯು 7 ಮಿಲಿಯನ್ ಅಂದರೆ 70 ಲಕ್ಷ ಗ್ರಾಹಕರನ್ನು ಹೊಂದಿದ್ದು, 11 ಶತಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಮಹೀಂದ್ರಾ ಕ್ವಿಕ್ಲಿಜ್ ಬಗ್ಗೆ ಹೇಳುವುದಾದರೆ, ಈ ಪ್ಲಾಟ್‌ಫಾರಂ ಮೂಲಕ ಕಂಪನಿಯು ತನ್ನ ಗ್ರಾಹಕರಿಗೆ ವಾಹನ ಗುತ್ತಿಗೆ ಹಾಗೂ ಚಂದಾದಾರಿಕೆ ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ವಾಹನ ಖರೀದಿಗೆ ಅನುಕೂಲವಾಗುವಂತೆ ಉತ್ತಮ ಆಯ್ಕೆಗಳನ್ನು ಒದಗಿಸುವುದು ಈ ಸೇವೆಯನ್ನು ಆರಂಭಿಸಿರುವುದರ ಪ್ರಮುಖ ಗುರಿಯಾಗಿದೆ. ಮಹೀಂದ್ರಾ ಕ್ವಿಕ್ಲಿಜ್ ಅಡಿಯಲ್ಲಿ ವಿವಿಧ ರೀತಿಯ ವಾಹನಗಳಿಗೆ ಗುತ್ತಿಗೆ ಹಾಗೂ ಹಣಕಾಸು ಸೇವೆಗಳನ್ನು ಒದಗಿಸಲಾಗುತ್ತದೆ. ಈ ಪ್ರಯೋಜನಗಳು ಕ್ವಿಕ್ಲಿಜ್ ಅಡಿಯಲ್ಲಿ ಲಭ್ಯವಿರಲಿವೆ. ಕ್ವಿಕ್ಲಿಜ್‌ನಿಂದ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಕಂಪನಿಯು ವಿಶೇಷ ಸೌಲಭ್ಯವನ್ನು ನೀಡಲಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಇದರ ಅಡಿಯಲ್ಲಿ ಗ್ರಾಹಕರು ಶೂನ್ಯ ಡೌನ್ ಪೇಮೆಂಟ್ ಮೂಲಕ ಅಂದರೆ ಯಾವುದೇ ಶುಲ್ಕ ಪಾವತಿಸದೇ ಹೊಸ ವಾಹನ ಖರೀದಿಸಬಹುದು. ಈ ಪ್ಲಾಟ್‌ಫಾರಂನಲ್ಲಿ ವಾಹನವನ್ನು ಖರೀದಿಸುವುದು ಸುಲಭವಾಗಲಿದೆ. ಇದರಡಿಯಲ್ಲಿ ಗ್ರಾಹಕರು ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಂತರ ಕಂಪನಿಯು ಎಲ್ಲಾ ನಿರ್ವಹಣೆ ಹಾಗೂ ಸೇವಾ ವೆಚ್ಚವನ್ನು ಭರಿಸುತ್ತದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಇದರ ಜೊತೆಗೆ ಗ್ರಾಹಕರಿಗೆ ವಾಹನವನ್ನು ಹಿಂದಿರುಗಿಸಲು, ಚಂದಾದಾರಿಕೆ ಅವಧಿಯನ್ನು ವಿಸ್ತರಿಸಲು, ವಾಹನವನ್ನು ಖರೀದಿಸಲು ಅಥವಾ ವಾಹನವನ್ನು ಬದಲಾಯಿಸುವ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಜೊತೆಗೆ ಗ್ರಾಹಕರಿಗೆ ಉತ್ತಮ ಮರು ಮಾರಾಟ ಮೌಲ್ಯವನ್ನು ನೀಡುವುದಾಗಿಯೂ ಕಂಪನಿ ಭರವಸೆ ನೀಡಿದೆ. ಕ್ವಿಕ್ಲಿಜ್ ಕಾರು ಬಳಕೆದಾರತ್ವದ ಮೊದಲ ಡಿಜಿಟಲ್ ಪ್ಲಾಟ್‌ಫಾರಂ ಆಗಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಇದರ ಮೂಲಕ ಗ್ರಾಹಕರು ಕಾರು ಮಾಲೀಕತ್ವದ ತೊಂದರೆಗಳಿಲ್ಲದೆ ಹೊಸ ಕಾರ್ ಅನ್ನು ಬಳಸಬಹುದು. ಕ್ವಿಕ್ಲಿಜ್ ಪ್ಲಾಟ್ ಫಾರಂ ನೋಂದಣಿ, ವಿಮೆ, ನಿಗದಿತ ನಿರ್ವಹಣೆ, ರಸ್ತೆ ಬದಿ ನೆರವು (ರೋಡ್ ಸೈಡ್ ಅಸಿಸ್ಟೆನ್ಸ್) ಇತ್ಯಾದಿಗಳನ್ನು ನೋಡಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿ ಕ್ವಿಕ್ಲಿಜ್ ಸೇವೆಗಳನ್ನು ಬೆಂಗಳೂರು, ಚೆನ್ನೈ, ದೆಹಲಿ, ಗುರುಗ್ರಾಮ, ಹೈದರಾಬಾದ್, ಮುಂಬೈ, ನೋಯ್ಡಾ, ಪುಣೆಯಂತಹ ಮೆಟ್ರೋ ನಗರಗಳಲ್ಲಿ ಆರಂಭಿಸಲಾಗುವುದು.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಮುಂದಿನ ದಿನಗಳಲ್ಲಿ ಈ ಪ್ಲಾಟ್ ಫಾರಂ ಅನ್ನು ಸಣ್ಣ ಪಟ್ಟಣ ಹಾಗೂ ಹಳ್ಳಿಗಳನ್ನು ಒಳಗೊಂಡಂತೆ ಭಾರತದಾದ್ಯಂತ ವಿಸ್ತರಿಸಲಾಗುವುದು, ಒಂದು ವರ್ಷದೊಳಗೆ 30 ಸ್ಥಳಗಳಲ್ಲಿ ಈ ಪ್ಲಾಟ್ ಫಾರಂ ಅನ್ನು ಆರಂಭಿಸಲಾಗುವುದು. ಕ್ವಿಕ್ಲಿಜ್ ಹಲವಾರು ಆಟೋಮೋಟಿವ್ OEMಗಳೊಂದಿಗೆ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಗುತ್ತಿಗೆ ಹಾಗೂ ಚಂದಾದಾರಿಕೆಯಲ್ಲಿ ಅವರೊಂದಿಗೆ ಪಾಲುದಾರಿಕೆ ಮಾಡಿ ಕೊಳ್ಳಲಿದೆ.

ಬೆಂಗಳೂರಿನಲ್ಲಿ ಎರಡು ಹೊಸ ಮಳಿಗೆಗಳನ್ನು ತೆರೆದ ಮಹೀಂದ್ರಾ ಫಸ್ಟ್ ಚಾಯ್ಸ್ ವ್ಹೀಲ್ಸ್

ಕಾರ್ಪೊರೇಟ್ (B2B) ಹಾಗೂ ರಿಟೇಲ್ (B2C) ಗ್ರಾಹಕರಿಗೆ ಕ್ವಿಕ್ಲಿಜ್ ಲಭ್ಯವಿರಲಿದೆ. B2B ವಿಭಾಗದ ಅಡಿಯಲ್ಲಿ, ಕಂಪನಿಯು ಕಾರ್ಪೊರೇಟ್‌ಗಳು ಹಾಗೂ ಫ್ಲೀಟ್ ಆಪರೇಟರ್‌ಗಳಿಗೆ ಸೇವೆ ನೀಡುವ ಗುರಿಯನ್ನು ಹೊಂದಿದೆ. ಆದರೆ B2C ವಿಭಾಗದಲ್ಲಿ ಇದು ರಿಟೇಲ್ ವಲಯದ ಗ್ರಾಹಕರನ್ನು ಗುರಿಯಾಗಿಸಿ ಕೊಂಡಿದೆ. ಇದು ವಾಹನ ಮಾದರಿ, ರೂಪಾಂತರ ಹಾಗೂ ಬಣ್ಣಗಳ ವಿಷಯದಲ್ಲಿ ವ್ಯಾಪಕ ಸರಣಿಯ ಆಯ್ಕೆಯೊಂದಿಗೆ ಎಲ್ಲಾ ಪ್ರಮುಖ ಆಟೋ OEMಗಳ ವಾಹನಗಳನ್ನು ಒಳಗೊಂಡಿದೆ.

Most Read Articles

Kannada
English summary
Mahindra first choice wheels limited opens two new retail stores in bengaluru details
Story first published: Friday, December 10, 2021, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X