ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್‌ಗಳ ಮಾಹಿತಿ ಬಹಿರಂಗ

ಬಹುನೀರಿಕ್ಷಿತ ಮಹೀಂದ್ರಾ ಎಕ್ಸ್‌ಯುವಿ700(Mahindra XUV700) ಎಸ್‌ಯುವಿ ಮಾದರಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆ ಕೂಡಾ ಈಗಾಗಲೇ ಆರಂಭವಾಗಿದೆ. ಹೊಸ ಕಾರು ವಿವಿಧ ವೆರಿಯೆಂಟ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕಾಗಿ ಎಕ್ಸ್‌ಯುವಿ700 (XUV700) ಮಾದರಿಯು ರಸ್ತೆಗಿಳಿಯುತ್ತಿದ್ದು, ಕಂಪ್ಯಾಕ್ಟ್ ಎಸ‌್‌ಯುವಿ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ವಿಭಾಗದಲ್ಲಿ ಸುಮಾರು 15 ಕಾರು ಮಾದರಿಗಳಿಗೆ ಪೈಪೋಟಿ ನೀಡಲು ಅಚ್ಚರಿಯ ಬೆಲೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ಕಾರಿನ ಆರಂಭಿಕ ಮಾದರಿಗಳ ಬೆಲೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಕಾರು ಖರೀದಿಗಾಗಿ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗುತ್ತಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್‌ಯುವಿ500 ಕಾರಿನ ಹೊಸ ತಲೆಮಾರಿನ ಆವೃತ್ತಿಯಾಗಿ ಮಾರಾಟಗೊಳ್ಳಲಿರುವ ಎಕ್ಸ್‌ಯುವಿ700 ಕಾರು ಬೆಲೆ ವಿಚಾರವಾಗಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದು, ಹೊಸ ಎಸ್‌ಯುವಿ ಮಾದರಿಯ ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್‌ ಒಳಗೊಂಡಿರುವ ಹೊಸ ಕಾರಿನಲ್ಲಿ ಎಂಎಕ್ಸ್ ಸೀರಿಸ್ ಮಾದರಿಗಳು 5 ಸೀಟರ್‌ನೊಂದಿಗೆ ಬಿಡುಗಡೆಯಾಗಲಿದ್ದರೆ ಆಂಡ್ರಿನೊಎಕ್ಸ್ ಸೀರಿಸ್‌ ಕಾರುಗಳು 7 ಸೀಟರ್ ಸೌಲಭ್ಯದೊಂದಿಗೆ ತುಸು ಐಷಾರಾಮಿ ಫೀಚರ್ಸ್ ಆವೃತ್ತಿಯಾಗಿ ಬಿಡುಗಡೆಯಾಗಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಎಂಎಕ್ಸ್ ಸೀರಿಸ್ ಹೊಂದಿರುವ ಎಕ್ಸ್‌ಯುವಿ700 ಮಾದರಿಯು 5 ಸೀಟರ್ ಮಾದರಿಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆಗೆ ನಿಗದಿಪಡಿಸಿದ್ದು, 7 ಸೀಟರ್ ಹೊಂದಿರುವ ಆಂಡ್ರಿನೊಎಕ್ಸ್ ಸೀರಿಸ್‌ ಮಾದರಿಯ ಬೆಲೆಯು ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಎಕ್ಸ್‌ಯುವಿ700 ಕಾರಿನ ಆರಂಭಿಕ ಆವೃತ್ತಿಯಾದ ಎಂಎಕ್ಸ್ ಸೀರಿಸ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳಲ್ಲಿ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಗಳಲ್ಲಿ MX ನಂತರ AX3, AX5 ಮತ್ತು AX7 ವೆರಿಯೆಂಟ್ ಹೊಂದಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಎಂಎಕ್ಸ್ ವೆರಿಯೆಂಟ್‌ನಲ್ಲಿ ಮಹೀಂದ್ರಾ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಗಳನ್ನು ನೀಡುತ್ತಿದ್ದು, ಇದು 5 ಸೀಟರ್ ಆಸನ ಸೌಲಭ್ಯದೊಂದಿಗೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರ ಮಾರಾಟವಾಗಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಎಎಕ್ಸ್3 ವೆರಿಯೆಂಟ್‌ಗಳು ಐದು ಆಸನ ಮತ್ತು ಏಳು ಆಸನಗಳ ಸಂರಚನೆ ಹೊಂದಿದ್ದು, ಇದರಲ್ಲೂ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. ಆದರೆ ಈ ರೂಪಾಂತರದಲ್ಲಿ ಕೇವಲ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಲಭ್ಯವಿರುತ್ತದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಎಎಕ್ಸ್5 ವೆರಿಯೆಂಟ್‌ಗಳು ಸಹ ಐದು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಖರೀದಿ ಲಭ್ಯವಿರಲಿದ್ದು, ಎಎಕ್ಸ್5 ಮಾದರಿಗಳಲ್ಲೂ ಕಂಪನಿಯು ಕೇವಲ ಮ್ಯಾನುವಲ್ ಮಾದರಿಗಳನ್ನು ಮಾತ್ರ ಬಿಡುಗಡೆ ಮಾಡಲಿದೆ. ಮಧ್ಯಮ ಕ್ರಮಾಂಕದಲ್ಲಿರುವ ಎಎಕ್ಸ್5 ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಇಲ್ಲದಿರುವುದು ಎಸ್‌ಯುವಿ ಪ್ರಿಯರಿಗೆ ನಿರಾಸೆ ಉಂಟುಮಾಡಬಹುದು.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಇನ್ನುಳಿದಂತೆ ಟಾಪ್ ಎಂಡ್ ಮಾದರಿಯಲ್ಲಿ ಮಾತ್ರ ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಐದು ಆಸನ ಮತ್ತು ಏಳು ಆಸನ ಆವೃತ್ತಿಗಳ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳನ್ನು ಮಾರಾಟ ಮಾಡಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಸದ್ಯ ಎಂಎಕ್ಸ್ ಸರಣಿ ಬೆಲೆ ಹಂಚಿಕೊಂಡರುವ ಮಹೀಂದ್ರಾ ಕಂಪನಿಯು ಹೈ ಮಾದರಿಯಾದ ಆಂಡ್ರಿನೊಎಕ್ಸ್ ಸೀರಿಸ್‌ ಎಕ್ಸ್‌ಯುವಿ700 ಎಸ್‌ಯುವಿ ಬೆಲೆ ಹಂಚಿಕೊಳ್ಳಲಿದ್ದು, ಎಂಎಕ್ಸ್ ಸರಣಿಗಿಂತ ಆಂಡ್ರಿನೊಎಕ್ಸ್ ಸರಣಿ ಮಾದರಿಗಳ ಬೆಲೆ ತುಸು ದುಬಾರಿಯಾಗಿರಲಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

7 ಸೀಟರ್ ಮಾದರಿಯು 2+3+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 5 ಸೀಟರ್ ಮಾದರಿಯು 2+3 ಆಸನ ಸೌಲಭ್ಯ ಹೊಂದಿದ್ದು, ಆಂಡ್ರಿನೊಎಕ್ಸ್ ಸೀರಿಸ್‌ ಆವೃತ್ತಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ರೂ. 21 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿವೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಹೊಸ ಎಕ್ಸ್‌ಯುವಿ700 ಮಾದರಿಯಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದೆ. 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(ಎಂಟಿ),450-ಎನ್ಎಂ ಟಾರ್ಕ್(ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದ್ದು, ಹೈ ಎಂಡ್ ಮಾದರಿಗಳಲ್ಲಿ ಮಹೀಂದ್ರಾ ಕಂಪನಿಯು 4x4 ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಿದೆ.

ಹೊಸ Mahindra XUV700 ಎಸ್‌ಯುವಿ ಕಾರಿನ ವಿವಿಧ ವೆರಿಯೆಂಟ್ ಮಾಹಿತಿ ಬಹಿರಂಗ

ಹೊಸ ಎಕ್ಸ್‌ಯುವಿ700 ಮಾದರಿಯ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳನ್ನು ಜೋಡಿಸಿದ್ದು, ಹೊಸ ಕಾರಿಗೆ ಮತ್ತಷ್ಟು ಐಷಾರಾಮಿ ಲುಕ್ ನೀಡಲು ಬ್ರಾಂಡ್ ನ್ಯೂ ಲೋಗೋ ನೀಡುತ್ತಿರುವುದು ಮಹತ್ವದ ಬದಲಾವಣೆಯಾಗಿದೆ.

Most Read Articles

Kannada
English summary
Mahindra revealed new xuv700 suv variants details
Story first published: Saturday, September 11, 2021, 9:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X