ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಭಾರತ ಮೂಲದ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಹೊಸ ಎಕ್ಸ್‌ಯುವಿ 700 ಕಾರ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಗೂ ಮುನ್ನ ಕಂಪನಿಯು ಈ ಕಾರಿನ ಒಂದೊಂದೇ ಫೀಚರ್'ಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.

ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಕೆಲ ದಿನಗಳ ಹಿಂದಷ್ಟೇ ಕಂಪನಿಯು ಈ ಕಾರಿನ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್ ಬಗ್ಗೆ ಮಾಹಿತಿ ನೀಡಿತ್ತು. ಈಗ ಕಂಪನಿಯು ಈ ಕಾರಿನ ಮತ್ತೊಂದು ಫೀಚರ್ ಬಗ್ಗೆ ಟೀಸರ್ ವೀಡಿಯೊ ಬಿಡುಗಡೆಗೊಳಿಸುವ ಮೂಲಕ ಮಾಹಿತಿ ನೀಡಿದೆ. ಈ ವೀಡಿಯೊದಲ್ಲಿ ಎಕ್ಸ್‌ಯುವಿ 700 ಕಾರಿನಲ್ಲಿರುವ ಪನೋರಾಮಿಕ್ ಸನ್‌ರೂಫ್ ಬಗ್ಗೆ ಹೇಳಲಾಗಿದೆ. ಕಂಪನಿಯು ಈ ಸನ್‌ರೂಫ್ ಅನ್ನು ಸ್ಕೈರೂಫ್ ಎಂದು ಹೇಳಿದೆ.

ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಈ ಕಾರಿನಲ್ಲಿರುವ ಸ್ಕೈರೂಫ್ ಈ ಸೆಗ್ ಮೆಂಟಿನಲ್ಲಿಯೇ ದೊಡ್ಡದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಮಾಹಿತಿಗಳ ಪ್ರಕಾರ, ಹೊಸ ಎಕ್ಸ್‌ಯುವಿ 700 ಕಾರಿನಲ್ಲಿರುವ ಸ್ಕೈರೂಫ್ 1,360 ಎಂಎಂ ಉದ್ದ ಹಾಗೂ 870 ಎಂಎಂ ಅಗಲವಿದೆ.

ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಈಗ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಂಜಿ ಹೆಕ್ಟರ್, ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್, ಎಂಜಿ ಝಡ್ಎಸ್ ಇವಿ ಹಾಗೂ ಟಾಟಾ ಸಫಾರಿ ಹೈ ಎಂಡ್ ಮಾದರಿಗಳಲ್ಲಿ ಪನೋರಾಮಿಕ್ ಸನ್‌ರೂಫ್‌ ಫೀಚರ್ ನೀಡಲಾಗಿದೆ. ಹೊಸ ಮಹೀಂದ್ರಾ ಎಕ್ಸ್‌ಯುವಿ 700ನಲ್ಲಿರುವ ಆಟೋ ಬೂಸ್ಟರ್ ಹೆಡ್‌ಲ್ಯಾಂಪ್, ಕಾರಿನ ಹೆಡ್‌ಲ್ಯಾಂಪ್‌ನ ಬೆಳಕನ್ನು ಕತ್ತಲೆಯಲ್ಲಿ ನಿಯಂತ್ರಿಸುತ್ತದೆ.

ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಕಾರು ತುಂಬಾ ಕತ್ತಲಿರುವ ರಸ್ತೆಯಲ್ಲಿ ಹೋಗುವಾಗ ಹಾಗೂ ಕಾರಿನ ವೇಗವು 80 ಕಿ.ಮೀ ವೇಗಕ್ಕಿಂತ ಹೆಚ್ಚಿದ್ದರೆ, ಆಟೋ ಬೂಸ್ಟ್ ಆಟೋಮ್ಯಾಟಿಕ್ ಆಗಿ ಹೆಡ್‌ಲ್ಯಾಂಪ್‌ನ ಬೆಳಕನ್ನು ಹೆಚ್ಚಿಸುತ್ತದೆ. ಬೆಳಕಿನ ಅವಶ್ಯಕತೆ ಕಡಿಮೆ ಇರುವ ಸ್ಥಳಗಳಲ್ಲಿ ಈ ಆಟೋ ಬೂಸ್ಟರ್ ಹೆಡ್‌ಲೈಟ್‌ನ ಬೆಳಕನ್ನು ಕಡಿಮೆ ಮಾಡುತ್ತದೆ.

ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಕರೋನಾ ಸಾಂಕ್ರಾಮಿಕದಿಂದಾಗಿ ಮಹೀಂದ್ರಾ ಎಕ್ಸ್‌ಯುವಿ 700 ಕಾರಿನ ಬಿಡುಗಡೆಯು ವಿಳಂಬವಾಗುತ್ತಿದೆ. ಈ ಕಾರು ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ನಡೆಸುತ್ತಿರುವುದು ಹಲವು ಬಾರಿ ಕಂಡುಬಂದಿದೆ.

ಮಹೀಂದ್ರಾ ಎಕ್ಸ್‌ಯುವಿ 700 ಕಾರ್ ಅನ್ನು ಡಬ್ಲ್ಯು 601 ಮೊನೊಕೊಕ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗುತ್ತಿದೆ. ಈ ಕಾರು ಎಕ್ಸ್‌ಯುವಿ 500 ಕಾರಿಗಿಂತ ಹೆಚ್ಚು ಉದ್ದ ಹಾಗೂ ಅಗಲವನ್ನು ಹೊಂದಿರಲಿದೆ. ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ 700 ಕಾರ್ ಅನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ದೊಡ್ಡ ಗಾತ್ರದ ಪನೋರಾಮಿಕ್ ಸನ್‌ರೂಫ್'ನೊಂದಿಗೆ ಬಿಡುಗಡೆಯಾಗಲಿದೆ ಎಕ್ಸ್‌ಯುವಿ 700

ಮೊದಲ ಎಂಜಿನ್ 2.2-ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಹಾಗೂ ಎರಡನೇ ಎಂಜಿನ್ 2.0-ಲೀಟರ್ ಆಮ್ಸ್ಟಾಲಿಯನ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿರಬಹುದು. ಇನ್ನು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಟಾಪ್ ಎಂಡ್ ಮಾದರಿಗಳಲ್ಲಿ ನೀಡಬಹುದು. ಮಹೀಂದ್ರಾ ಕಂಪನಿಯು ಈ ಎಂಜಿನ್ ಅನ್ನು ಥಾರ್‌ ಎಸ್‌ಯು‌ವಿಯಿಂದ ಪಡೆಯಬಹುದು ಎಂದು ಹೇಳಲಾಗಿದೆ. ಆದರೆ ಈ ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು.

Most Read Articles

Kannada
English summary
Mahindra XUV 700 to get biggest panoramic sunroof. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X