ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಮಹೀಂದ್ರಾ ಕಂಪನಿಯು ತನ್ನ ಬಹುನೀರಿಕ್ಷಿತ ಎಕ್ಸ್‌ಯುವಿ ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರಿನ ಮೊದಲ ಟೀಸರ್ ಚಿತ್ರವನ್ನು ಬಹಿರಂಗಪಡಿಸಲಾಗಿದೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಆಟೋ ಬೂಸ್ಟರ್ ಹೆಡ್‌ಲ್ಯಾಂಪ್‌ ಪ್ರೇರಿತ ಎಕ್ಸ್‌ಯುವಿ700 ಕಾರಿನ ಟೀಸರ್ ಚಿತ್ರವನ್ನು ಹಂಚಿಕೊಂಡಿರುವ ಮಹೀಂದ್ರಾ ಕಂಪನಿಯು ಮುಂದಿನ ತಿಂಗಳು ಹೊಸ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದ್ದು, ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್‌ಯುವಿ500 ಮಾದರಿಯ ನ್ಯೂ ಜನರೇಷನ್ ಮಾದರಿಯಾಗಿ ಬಿಡುಗಡೆಗೊಳ್ಳುತ್ತಿದೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಬಲಿಷ್ಠ ಎಂಜಿನ್ ಆಯ್ಕೆ ಪಡೆದುಕೊಳ್ಳಲಿರುವ ಹೊಸ ಎಕ್ಸ್‌ಯುವಿ700 ಕಾರು ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ಆಟೋ ಬೂಸ್ಟರ್ ಹೆಡ್‌ಲ್ಯಾಂಪ್ ಜೋಡಣೆ ಮಾಡಿರುವ ಖಚಿತವಾಗಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್‌ನೊಂದಿಗೆ ಕಾರು ಚಾಲನೆ ವೇಳೆ ಹೆಡ್‌ಲ್ಯಾಂಪ್ ಬೆಳಕನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ನಗರ ಪ್ರದೇಶಗಳಲ್ಲಿ ಕಾರು ಚಾಲನೆ ವೇಳೆ ತುಸು ಮಂದಗತಿ ಬೆಳಕಿನಲ್ಲೂ ಚಾಲನೆ ಮಾಡಬಹುದಾದರೂ ಹೆದ್ದಾರಿಗಳಲ್ಲಿನ ಕಾರು ಚಾಲನೆ ವೇಳೆ ಪ್ರಖರವಾದ ಬೆಳಕಿನ ಸೌಲಭ್ಯವು ಅವಶ್ಯವಿರುತ್ತದೆ. ಹೀಗಾಗಿ ನಗರ ಪ್ರದೇಶಗಳಲ್ಲಿ ಕಾರು ಚಾಲನೆ ವೇಳೆ ಮಂದಗತಿಯಲ್ಲಿ ಮತ್ತು ಹೆದ್ದಾರಿ ಚಾಲನೆ ವೇಳೆ ಪ್ರಖರವಾದ ಬೆಳಕಿಗಾಗಿ ಆಟೋ ಬೂಸ್ಟರ್ ಸೌಲಭ್ಯ ನೀಡಲಾಗಿದ್ದು, ಪ್ರತಿ ಗಂಟೆಗೆ 80 ಕಿ.ಮೀ ಗೆ ಹೆಚ್ಚು ವೇಗದಲ್ಲಿ ಚಲಿಸುವಾಗ ಹೆಡ್‌ಲ್ಯಾಂಪ್ ಪ್ರಖರತೆ ಆಟೋಮ್ಯಾಟಿಕ್ ಆಗಿ ಹೆಚ್ಚಾಗುತ್ತದೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಇನ್ನು ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಡೀಸೆಲ್ ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸದ್ಯ ಕಂಪನಿಯು 180 ಬಿಎಚ್‌ಪಿ, 190 ಬಿಎಚ್‌ಪಿ ಮತ್ತು 210 ಬಿಎಚ್‌ಪಿ ಟ್ಯೂನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ 180-ಬಿಎಚ್‌ಪಿ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಹೊಸ ಕಾರಿನಲ್ಲಿ ನೀಡಲಾಗುತ್ತಿರುವ ಪೆಟ್ರೋಲ್ ಎಂಜಿನ್ ಮಾಹಿತಿ ಲಭ್ಯವಿಲ್ಲವಾದರೂ ಥಾರ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಕಂಪನಿಯು ಡೀಸೆಲ್ ಮಾದರಿಯ ಹೈ ಎಂಡ್ ಆವೃತ್ತಿಯಲ್ಲಿ 210 ಬಿಎಚ್‌ಪಿ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳಿವೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾದರಿಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸದ್ಯ ಲಭ್ಯವಿರುವಂತಹ 7 ಸೀಟರ್ ಸೌಲಭ್ಯವನ್ನು ತೆಗೆದುಹಾಕಿ ಆರಾಮದಾಯಕ ಕ್ಯಾಬಿನ್ ರೂಂ ಹೊಂದಿರುವ 5 ಸೀಟರ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲಿದೆ.

ಬಿಡುಗಡೆಗೂ ಮುನ್ನ ಮಹೀಂದ್ರಾ ಹೊಸ ಎಕ್ಸ್‌‌ಯುವಿ700 ಮೊದಲ ಟೀಸರ್ ಚಿತ್ರ ಬಹಿರಂಗ

ಈ ಮೂಲಕ 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ.

Most Read Articles

Kannada
English summary
Mahindra XUV700 Auto Booster Headlamp Feature Teased. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X