Just In
- 28 min ago
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- 2 hrs ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 4 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 14 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
Don't Miss!
- News
ವಿಜಯನಗರ ಜಿಲ್ಲೆ; ಮೇಲುಸ್ತುವಾರಿಗೆ ಐಎಎಸ್ ಅಧಿಕಾರಿ ನೇಮಕ
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಕಾರುಗಳಲ್ಲಿ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ಪರಿಚಯಿಸಿದ ಎಂಜಿ ಮೋಟಾರ್
ಎಂಜಿ ಮೋಟಾರ್ ಕಂಪನಿಯು ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಮೂಲಕ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಹೊಸ ಕಾರಿನಲ್ಲಿ ಮೊದಲ ಬಾರಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಯಲ್ಲಿ ಸದ್ಯ ಎಂಜಿ ಮೋಟಾರ್ ಕಂಪನಿಯು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಟರ್ಬೊ ಪೆಟ್ರೋಲ್ ಮಾದರಿಗಳಿಗಾಗಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತಿದ್ದು, ಹೊಸ ಕಾರುಗಳಲ್ಲಿ ಕಂಪನಿಯು ಇದೀಗ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇಕೋ ಮತ್ತು ಸ್ಪೋಟ್ ಮೋಡ್‌ಗಳನ್ನು ಹೊಸದಾಗಿ ಪರಿಚಯಿಸಿದೆ.

ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ಹೈ ಎಂಡ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆರಂಭಿಕ ಪೆಟ್ರೋಲ್ ಮಾದರಿಗಳಿಗಾಗಿ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ಸಿಟಿವಿ ಗೇರ್‌ಬಾಕ್ಸ್ ಆಯ್ಕೆಯನ್ನ ಹೆಕ್ಟರ್ ಮತ್ತು ಹೆಕ್ಟರ್ ಕಾರುಗಳ ಸ್ಮಾರ್ಟ್ ಮತ್ತು ಶಾರ್ಪ್ ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಹೆಕ್ಟರ್ ಸಿವಿಟಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 16.52 ಲಕ್ಷಕ್ಕೆ ಮತ್ತು ರೂ. 18.10 ಲಕ್ಷಕ್ಕೆ ಖರೀದಿ ಲಭ್ಯವಿದ್ದಲ್ಲಿ ಹೆಕ್ಟರ್ ಪ್ಲಸ್ ಸಿಟಿವಿ ಮಾದರಿಯು ರೂ. 17.22 ಲಕ್ಷಕ್ಕೆ ಮತ್ತು ರೂ. 18.90 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

ಸಿವಿಟಿ ಗೇರ್‌ಬಾಕ್ಸ್ ಹೊರತಾಗಿ ಹೊಸ ಮಾದರಿಯಲ್ಲೇ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಅಂಶಗಳನ್ನು ಮುಂದುವರಿಸಿದ್ದು, ಹೆಕ್ಟರ್ ಸರಣಿಯು ಇದೀಗ 5 ಸೀಟರ್, 6 ಸೀಟರ್ ಮತ್ತು 7 ಸೀಟರ್ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಾಗುವ ಮೂಲಕ ಮ್ಯಾನುವಲ್, ಸಿವಿಟಿ ಮತ್ತು ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಂಡಂತಾಗಿದೆ.

ಇನ್ನು ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ಹೆಕ್ಟರ್ ಫೇಸ್‌ಲಿಫ್ಟ್ ಮತ್ತು ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯನ್ನು ಬಿಡುಗಡೆ ಮಾಡಿದ್ದು, 2021ರ ಹೆಕ್ಟರ್ ಪ್ಲಸ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಸ್ಟೈಲ್, ಸೂಪರ್, ಸ್ಮಾರ್ಟ್, ಶಾರ್ಪ್ ಮತ್ತು ಸೆಲೆಕ್ಟ್ ವೆರಿಯೆಂಟ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

7 ಸೀಟರ್ ಸೌಲಭ್ಯವುಳ್ಳ ಹೆಕ್ಟರ್ ಪ್ಲಸ್ ಕಾರಿನಲ್ಲಿ ಆರಂಭಿಕ ಕಾರು ಮಾದರಿಯಾದ ಸ್ಟೈಲ್ ಆವೃತ್ತಿ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಇನ್ನುಳಿದ ಆವೃತ್ತಿಗಳಲ್ಲಿ ಕೆಲವು ಮಾದರಿಗಳಲ್ಲಿ ವೆರಿಯೆಂಟ್‌ಗೆ ಅನುಗುಣವಾಗಿ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಹೆಕ್ಟರ್ ಮತ್ತು ಹೆಕ್ಟರ್ ಕಾರು ಮಾದರಿಗಳು ಬಹುತೇಕ ತಾಂತ್ರಿಕ ಅಂಶಗಳನ್ನು ಒಂದೇ ಮಾದರಿಯಲ್ಲಿ ಪಡೆದುಕೊಂಡಿದ್ದು, ಎಂಜಿನ್ ಆಯ್ಕೆ ಮತ್ತು ಆಸನ ಸೌಲಭ್ಯಗಳು ಮಾತ್ರ ವಿಭಿನ್ನತೆಯೊಂದಿಗೆ ಗ್ರಾಹಕರನ್ನು ಸೆಳೆಯಲಿವೆ. ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯು, 6 ಸೀಟರ್ ಮಾದರಿಯಲ್ಲಿರುವಂತಹ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಅನ್ನು ಹೊಂದಿದೆ. ಆದರೆ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟಿನ ಬದಲಿಗೆ ಬೆಂಚ್ ಸೀಟನ್ನು ನೀಡಲಾಗಿದೆ.

ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.13.35 ಲಕ್ಷಗಳಿಂದ ರೂ.18.33 ಲಕ್ಷಗಳಾದರೆ, 6 ಸೀಟರ್ ಗಳ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.15.99 ಲಕ್ಷಗಳಿಂದ ರೂ.19.13 ಲಕ್ಷಗಳಾಗಿದೆ.

ಹೊಸ ಹೆಕ್ಟರ್ ಪ್ಲಸ್ 7 ಸೀಟರ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಹೆಕ್ಟರ್ ಕಾರಿನಲ್ಲಿರುವಂತಹ ಎಂಜಿನ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದ್ದು, ಗ್ರಾಹಕರು ತಮ್ಮಅಗತ್ಯಕ್ಕೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.