ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಐಐಟಿ ದೆಹಲಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದನ್ವಯ ಕಂಪನಿಯು ಐಐಟಿ ದೆಹಲಿ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕ್ ಹಾಗೂ ಅಟಾನಾಮಸ್ ವಾಹನಗಳ ಬಗ್ಗೆ ಸಂಶೋಧನೆ ನಡೆಸಲು ನೆರವಾಗಲಿದೆ.

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಐಐಟಿ ದೆಹಲಿಯು ಕನೆಕ್ಟೆಡ್-ಅಟಾನಾಮಸ್-ಶೇರ್ಡ್-ಎಲೆಕ್ಟ್ರಿಕ್ ವಿಷಯದ ಮೇಲೆ ಗಮನ ಹರಿಸಿದೆ. ಈ ಕಾರಣಕ್ಕೆ ಎಂಜಿ ಮೋಟಾರ್ ಕಂಪನಿಯು ಐಐಟಿ ದೆಹಲಿಗೆ ತನ್ನ ಝಡ್ಎಸ್ ಎಲೆಕ್ಟ್ರಿಕ್ ಎಸ್‌ಯು‌ವಿಯನ್ನು ದಾನ ಮಾಡಿದೆ. ಎಲೆಕ್ಟ್ರಿಕ್ ಹಾಗೂ ಅಟಾನಾಮಸ್ ವಾಹನಗಳ ಬಗ್ಗೆ ಸಂಶೋಧನೆ ನಡೆಸಲು ಈ ಸಹಭಾಗಿತ್ವದಲ್ಲಿ ಎಂಜಿ ಮೋಟಾರ್ ಕಂಪನಿಯು ಐಐಟಿ ದೆಹಲಿಯ ಸೆಂಟರ್ ಫಾರ್ ಆಟೋಮೋಟಿವ್ ರಿಸರ್ಚ್ ಅಂಡ್ ಟ್ರಿಬಾಲಜಿ ನಡುವೆ ಒಪ್ಪಂದಕ್ಕೆ ಸಹಿ ಹಾಕಿದೆ.

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಭಾರತದ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ಹಾಗೂ ಅಟಾನಾಮಸ್ ವಾಹನಗಳನ್ನು ಚಾಲನೆ ಮಾಡುವ ಮೂಲಕ ಈ ಅಧ್ಯಯನವನ್ನು ನಡೆಸಲಾಗುತ್ತದೆ. ಈ ಅಧ್ಯಯನದಡಿಯಲ್ಲಿ ಕನೆಕ್ಟೆಡ್ ಮೊಬಿಲಿಟಿ ಮೇಲೂ ಕೆಲಸ ಮಾಡಲಾಗುವುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಇದರಲ್ಲಿ ಮಾರ್ಗದ ಬಗ್ಗೆ, ಅಡೆ ತಡೆ ಬಗ್ಗೆ ಹಾಗೂ ತಡೆರಹಿತ ಚಾಲನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನೆರವಾಗಲಿದೆ. ಐಐಟಿ ದೆಹಲಿ ಎಂಜಿ ಮೋಟರ್‌ ಕಂಪನಿ ಜೊತೆಗೆ ಇದೇ ಮೊದಲ ಬಾರಿ ಅಧ್ಯಯನ ಮಾಡುತ್ತಿಲ್ಲ.

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಇದಕ್ಕೂ ಮುನ್ನ ಎಂಜಿ ಮೋಟಾರ್ ಹಾಗೂ ಐಐಟಿ ದೆಹಲಿ ಜಂಟಿಯಾಗಿ ಜಿಯೋಫೆನ್ಸಿಂಗ್ ಅಡಿಯಲ್ಲಿ ಮಕ್ಕಳ ಸುರಕ್ಷತಾ ಆಸನ ಯೋಜನೆಯಲ್ಲಿ ಕೆಲಸ ಮಾಡಿದ್ದವು. ಇದಕ್ಕಾಗಿ ಇನ್ನೋವೇಶನ್ ಚಾಲೆಂಜ್ ಅನ್ನು ಸಹ ಆಯೋಜಿಸಲಾಗಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಎಂಜಿ ಝಡ್ಎಸ್ ಇವಿ ದೇಶದ ಮೊದಲ ಇಂಟರ್ನೆಟ್ ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದರೆ, ಕಂಪನಿಯ ಎಂಜಿ ಗ್ಲೋಸ್ಟರ್ ದೇಶದ ಮೊದಲ ಲೆವೆಲ್ 1 ಅಟಾನಾಮಸ್ ವಾಹನವಾಗಿದೆ. ಈಗ ಅಟಾನಾಮಸ್ ವಾಹನಗಳ ಭವಿಷ್ಯವನ್ನು ದೇಶದ ಐಐಟಿಗಳಲ್ಲಿ ರೂಪಿಸಲಾಗುವುದು.

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಹಾಗೂ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಪರ್ಯಾಯ ಇಂಧನ ಮೂಲ, ಅಟಾನಾಮಸ್ ಹಾಗೂ ಕನೆಕ್ಟೆಡ್ ವಾಹನಗಳ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆಗೆ ಆಟೋಮೋಟಿವ್ ರಿಸರ್ಚ್ ಅಂಡ್ ಟ್ರಿಬಾಲಜಿ ಕೇಂದ್ರವು ಹೆಸರುವಾಸಿಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಇತ್ತೀಚೆಗೆ ನಮ್ಮ ಡ್ರೈವ್‌ಸ್ಪಾರ್ಕ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಎಂಜಿ ಮೋಟಾರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಗೌರವ್ ಗುಪ್ತಾ ಕಂಪನಿಯು ತನ್ನ ಉತ್ಪನ್ನಗಳ ಸ್ಥಳೀಕರಣಕ್ಕೆ ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಭಾರತದಲ್ಲಿ ತಯಾರಿಸಿದ ಉಪಕರಣಗಳ ಬಳಕೆಯಿಂದ ಕಾರುಗಳ ಬೆಲೆ ಕಡಿಮೆಯಾಗುತ್ತದೆ. ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬ್ಯಾಟರಿ ಪ್ಯಾಕ್ ತಯಾರಿಸಲು ಚಿಂತನೆ ನಡೆಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಐಐಟಿಗೆ ಎಲೆಕ್ಟ್ರಿಕ್ ಎಸ್‌ಯು‌ವಿ ದಾನ ಮಾಡಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯ ಪ್ರಕಾರ ಸ್ಥಳೀಯವಾಗಿ ಬ್ಯಾಟರಿ ಉತ್ಪಾದಿಸುವುದರಿಂದ ಕಾರಿನ ಉತ್ಪಾದನಾ ವೆಚ್ಚವು ಕಡಿಮೆಯಾಗುತ್ತದೆ. ಇದರಿಂದಾಗಿ ಎಲೆಕ್ಟ್ರಿಕ್ ಕಾರುಗಳ ಬೆಲೆಯು ಸಹ ಕಡಿಮೆಯಾಗುತ್ತದೆ.

Most Read Articles

Kannada
English summary
MG Motor donates ZS EV to IIT Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X