ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿ ಜೆಡ್ಎಸ್ ಇವಿ ಮಾರಾಟದೊಂದಿಗೆ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಮುಂಬರುವ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಎಂಜಿ ಮೋಟಾರ್ ಕಂಪನಿಯು ತನ್ನ ಜೆಡ್ಎಸ್ ಇವಿ ನಂತರ ಬಜೆಟ್ ಬೆಲೆಯ ಇವಿ ಕಾರು ಬಿಡುಗಡೆಗಾಗಿ ಯೋಜನೆ ರೂಪಿಸುತ್ತಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಸದ್ಯ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಕಾರು ಮಾದರಿಯು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಎನ್ನಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು ಮಾದರಿಯು ರೂ.11 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ನಂ.1 ಸ್ಥಾನ ಕಾಯ್ದುಕೊಂಡಿರುವ ಟಾಟಾ ನೆಕ್ಸಾನ್ ಇವಿ ಕಾರು ಮಾದರಿಗೆ ಪೈಪೋಟಿಯಾಗಿ ಎಂಜಿ ಕಂಪನಿಯು ಹೊಸ ಕಾರು ಮಾದರಿಯನ್ನು ನಿರ್ಮಾಣ ಮಾಡುತ್ತಿದ್ದು, ಹೊಸ ಕಾರು ಸಬ್ ಫೋರ್ ಮೀಟರ್ ಆವೃತ್ತಿಯಾಗಿರಲಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಸದ್ಯ ಮಾರಾಟ ಮಾಡುತ್ತಿರುವ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯು 44.5 kWh ಬ್ಯಾಟರಿ ಪ್ಯಾಕ್ ಜೊತೆ ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿದ್ದು, ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಮುಂಬರುವ ದಿನಗಳಲ್ಲಿ 44.5 kWh ಬ್ಯಾಟರಿ ಪ್ಯಾಕ್ ಅನ್ನೇ ಪ್ರತಿ ಚಾರ್ಜ್‌ಗೆ 500 ಕಿಮೀ ಗೆ ಹೆಚ್ಟಳವಾಗುವ ನಿಟ್ಟಿಯಲ್ಲಿ ಸಂಶೋಧನೆಗಳನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಎಂಜಿ ಮೋಟಾರ್ ಕಂಪನಿಯ ಮುಖ್ಯಸ್ಥರು ಉನ್ನತೀಕರಿಸಿದ ಆವೃತ್ತಿಯನ್ನು 2022ರ ಆವೃತ್ತಿಯಲ್ಲಿ ಬಿಡುಗಡೆ ಮಾಡಲಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಪ್ರಸ್ತುತ ಜೆಡ್ಎಸ್ ಇವಿಯಲ್ಲಿ ಜೋಡಿಸಲಾಗಿರುವ 44.5 kWh ಬ್ಯಾಟರಿ ಪ್ಯಾಕ್ ಮಾದರಿಯನ್ನೇ ಭವಿಷ್ಯದ ಇವಿ ಕಾರುಗಳಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೇರೆ ಬೇರೆ ಮೈಲೇಜ್ ಪ್ರಮಾಣ ಮತ್ತು ತಂತ್ರಜ್ಞಾನ ಬಳಕೆ ಹೊಂದಿದ್ದು, ಬಿಡುಗಡೆಯಾಗಲಿರುವ ಹೊಸ ಇವಿ ಕಾರುಗಳು ಬೆಲೆ ವಿಚಾರವಾಗಿ ಗಮನಸೆಳೆಯಲಿವೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಜೆಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿಯು ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಎಕ್ಸೈಟ್ ಮಾದರಿಯು ರೂ. 21 ಲಕ್ಷ ಮತ್ತು ಎಕ್ಸ್‌ಕ್ಲೂಸಿವ್ ಮಾದರಿಯು ರೂ. 24.21 ಲಕ್ಷ ಬೆಲೆ ಹೊಂದಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಆದರೆ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಎಂಜಿ ಇವಿ ಕಾರು ಮಾದರಿಯು ರೂ.10 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಪ್ರತಿ ಚಾರ್ಜ್‌ಗೆ ಕನಿಷ್ಠ 300 ರಿಂದ 350 ಕಿ.ಮೀ ಮೈಲೇಜ್ ಪ್ರೇರಿತ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಇದರೊಂದಿಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸ್ಥಳೀಯ ಸಂಪನ್ಮೂನ ಬಳಕೆಯು ಇವಿ ವಾಹನಗಳ ಬೆಲೆ ಇಳಿಕೆಯಲ್ಲಿ ಪಾತ್ರವಹಿಸುವುದಾಗಿ ಹೇಳಿರುವ ಎಂಜಿ ಮೋಟಾರ್ ಮುಖ್ಯಸ್ಥರು ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಉತ್ಪಾದನೆಯಾದ ಬ್ಯಾಟರಿ ಉತ್ಪನ್ನದೊಂದಿಗೆ ಮತ್ತಷ್ಟು ಬೆಲೆ ಇಳಿಕೆ ಮಾಡಲು ಸಹಕಾರಿಯಾಗಿದೆ ಎಂದಿದ್ದಾರೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಸದ್ಯ ಬಹುತೇಕ ಎಲೆಕ್ಟ್ರಿಕ್ ವಾಹನ ತಯಾಕ ಕಂಪನಿಗಳು ವಿದೇಶಿ ಮಾರುಕಟ್ಟೆಗಳಿಂದಲೇ ಹಲವಾರು ಬಿಡಿಭಾಗಗಳು ಮತ್ತು ಬ್ಯಾಟರಿ ಉತ್ಪನ್ನ ಆಮದು ಮಾಡಿಕೊಂಡು ಭಾರತದಲ್ಲಿ ಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದು, ಇದು ಸ್ಥಳೀಯವಾಗಿ ಹೆಚ್ಚಳವಾದಾಗ ಮಾತ್ರವೇ ಇವಿ ವಾಹನಗಳ ಬೆಲೆಯನ್ನು ತಗ್ಗಿಸಲು ಸಾಧ್ಯವೆಂದಿದ್ದಾರೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಇದರೊಂದಿಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಜಾಲ ವಿಸ್ತರಿಸುವ ಕುರಿತಾಗಿಯೂ ಕೆಲವು ಮಾಹಿತಿ ಹಂಚಿಕೊಂಡಿರುವ ಎಂಜಿ ಕಂಪನಿಯು ಹಂತ-ಹಂತವಾಗಿ ದೇಶದ ಪ್ರಮುಖ 31 ನಗರಗಳಲ್ಲಿ ಇವಿ ಮಾರಾಟವನ್ನು ಆರಂಭಿಸಿದ್ದು, ಆರಂಭದಲ್ಲಿ ಕೇವಲ 5 ಪ್ರಮುಖ ಮಾಹಾನಗರಗಳಲ್ಲಿ ಮಾತ್ರವೇ ಮಾರಾಟವನ್ನು ಹೊಂದಿತ್ತು.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಮೊದಲ ಹಂತದಲ್ಲೇ ಬೆಂಗಳೂರಿನಲ್ಲಿ ಇವಿ ಮಾರಾಟ ಆರಂಭಿಸಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ರಾಜ್ಯದಲ್ಲಿ ಹೊಸದಾಗಿ ಮೈಸೂರು ಮತ್ತು ಮಂಗಳೂರಿನಲ್ಲಿ ಜೆಡ್ಎಸ್ ಇವಿ ಮಾರಾಟದ ಆರಂಭದೊಂದಿಗೆ ದೇಶದ 31 ನಗರಗಳಲ್ಲಿ ಗ್ರಾಹಕರನ್ನು ತಲುಪುತ್ತಿದೆ.

 ಮುಂದಿನ ಒಂದು ವರ್ಷದೊಳಗೆ ಬಜೆಟ್ ಬೆಲೆ ಇವಿ ಕಾರು ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್

ಹೊಸದಾಗಿ ಬಿಡುಗಡೆಯಾಗಲಿರುವ ಬಜೆಟ್ ಇವಿ ಮಾದರಿಯೊಂದಿಗೆ ಕಂಪನಿಯು ಮತ್ತಷ್ಟು ಹೊಸ ನಗರಗಳಲ್ಲಿ ಇವಿ ಕಾರು ಮಾರಾಟವನ್ನು ವಿಸ್ತರಿಸುವ ಸಿದ್ದತೆಯಲ್ಲಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ ಆಧಾರದ ಮೇಲೆ ಕಂಪನಿಯು ಇವಿ ಮಾರಾಟ ಜಾಲವನ್ನು ವಿಸ್ತರಿಸಲಿದೆ.

Most Read Articles

Kannada
English summary
Mg motor india plans to launch affordable electric cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X