Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಟಲ್ ಸುರಂಗದಲ್ಲಿ ಸಿಲುಕಿದ 80ಕ್ಕೂ ಹೆಚ್ಚು ವಾಹನಗಳು
ಚಳಿಗಾಲವಾಗಿರುವ ಕಾರಣಕ್ಕೆ ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದೆ. ಇದರಿಂದಾಗಿ ಈ ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಹೊರ ಊರುಗಳಿಂದ ಬರುವ ಪ್ರವಾಸಿಗರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಮೂಲಗಳ ಪ್ರಕಾರ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹಿಮಪಾತವಾಗುತ್ತಿದೆ. ಇತ್ತೀಚಿಗೆ ತೀವ್ರ ಹಿಮಪಾತದಿಂದಾಗಿ ಕುಲು ಜಿಲ್ಲೆಯ ಧುಂಧಿಯಿಂದ ಆರಂಭವಾಗುವ ಅಟಲ್ ಸುರಂಗದಲ್ಲಿ ಪ್ರವಾಸಿಗರಿಗೆ ಸೇರಿದ 82 ಕಾರುಗಳು ಸಿಲುಕಿಕೊಂಡಿದ್ದವು. ಸ್ಥಳಕ್ಕೆ ಧಾವಿಸಿದ ಕುಲು ಪೊಲೀಸರು ಅಟಲ್ ಸುರಂಗದ ದಕ್ಷಿಣ ದ್ವಾರದ ಮೂಲಕ ವಾಹನಗಳನ್ನು ಸ್ಥಳಾಂತರಿಸಿದರು.

ಶನಿವಾರ ರಾತ್ರಿ ಪೊಲೀಸರ ತಂಡವು ಈ ಪ್ರದೇಶದಲ್ಲಿದ್ದ 300ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿದೆ. ಮನಾಲಿಯ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರಾಮನ್ ಘರ್ಸಂಗಿ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಹಿಮಪಾತದಿಂದಾಗಿ ಸಿಕ್ಕಿ ಬಿದ್ದಿದ್ದ ವಾಹನಗಳನ್ನು ಹಾಗೂ ಅವುಗಳಲ್ಲಿರುವ ಜನರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು. ಡಿಸೆಂಬರ್ 29ರಂದು ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಪಾತವಾಗುವುದರ ಬಗ್ಗೆ ಹವಾಮಾನ ಇಲಾಖೆಯು ಯೆಲ್ಲೊ ಅಲರ್ಟ್ ನೀಡಿತ್ತು.

ಜನವರಿ 5ರಂದು ಎತ್ತರದ ಪರ್ವತ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗಲಿದೆ. ಜೊತೆಗೆ ಜನವರಿ 3ರಿಂದ 5ರವರೆಗೆ ಕಡಿಮೆ ಪರ್ವತ ಪ್ರದೇಶಗಳಲ್ಲಿ ಮಳೆ ಹಾಗೂ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಅಟಲ್ ಸುರಂಗವನ್ನು ಸಂಚಾರಕ್ಕೆ ಆರಂಭಿಸಿದಾಗಿನಿಂದ ಈ ಸುರಂಗದಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ಸಂಚರಿಸುತ್ತಿವೆ. ಕೆಲ ದಿನಗಳ ಹಿಂದಷ್ಟೇ ಈ ಸುರಂಗದಲ್ಲಿ ಒಂದೇ ದಿನ 5,450 ವಾಹನಗಳು ಸಂಚರಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದವು.

9.02 ಕಿ.ಮೀ ಉದ್ದದ ಈ ಸುರಂಗವನ್ನು 10,000 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. 3 ಸಾವಿರ ಕಾರುಗಳು ಹಾಗೂ 1500 ಟ್ರಕ್‌ಗಳು ಹಾದುಹೋಗುವ ರೀತಿಯಲ್ಲಿ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುವ ರೀತಿಯಲ್ಲಿ ಈ ಸುರಂಗವನ್ನು ನಿರ್ಮಿಸಲಾಗಿದೆ. ಈ ಸುರಂಗದಲ್ಲಿ ಪ್ರತಿ 250 ಮೀಟರ್‌ಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನವನ್ನು ನೀಡಲಾಗಿದೆ.

ಪ್ರತಿ 60 ಮೀಟರ್‌ಗೆ ಸುರಂಗದಲ್ಲಿ ಫೈರ್ ಹೈಡ್ರಾಂಟ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿ 150 ಮೀಟರ್‌ಗೆ ದೂರವಾಣಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತಿ 1 ಕಿ.ಮೀಗೆ ಗಾಳಿಯ ಗುಣಮಟ್ಟದ ಮಾನಿಟರ್ ನೀಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಸುರಂಗದ ಎರಡೂ ಬದಿಗಳಲ್ಲಿ 10.5 ಮೀಟರ್ ಅಗಲವಿರುವ 1 ಮೀಟರ್ ಫುಟ್‌ಪಾತ್ ನಿರ್ಮಿಸಲಾಗಿದೆ. ಈ ಸುರಂಗದ ಕಾಮಗಾರಿಯನ್ನು 6 ವರ್ಷಗಳಲ್ಲಿ ನಿರ್ಮಿಸಬೇಕೆಂದು ಗಡುವು ವಿಧಿಸಲಾಗಿತ್ತು.

ಆದರೆ ಈ ಸುರಂಗವು ಪೂರ್ಣಗೊಳ್ಳಲು ಹತ್ತು ವರ್ಷಗಳನ್ನು ತೆಗೆದುಕೊಂಡಿತು. ಅಟಲ್ ಸುರಂಗದಲ್ಲಿ ಗಂಟೆಗೆ 80 ಕಿ.ಮೀ ವೇಗವನ್ನು ನಿಗದಿಪಡಿಸಲಾಗಿದೆ. ಹಲವಾರು ಸೌಲಭ್ಯಗಳನ್ನು ಹೊಂದಿರುವ ಅಟಲ್ ಸುರಂಗಕ್ಕೆ ಬರುವ ಪ್ರವಾಸಿಗರು ನಿಯಮಗಳನ್ನು ಉಲ್ಲಂಘಿಸಿ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.