2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ತನ್ನ 2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದೆ. ಈ ಹೊಸ ಹ್ಯುಂಡೈ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರು ಬ್ಲೂ ಬಣ್ಣವನ್ನು ಹೊಂದಿದ್ದು, ಇದು ಸ್ಪೋರ್ಟಿಯರ್ ಡಿಸೈನ್ ಬಿಟ್‌ಗಳನ್ನು ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಈ ಹ್ಯುಂಡೈ ಎಲಾಂಟ್ರಾ ಎನ್ ಹಾಟ್ ಸೆಡಾನ್ ನಲ್ಲಿ ಎಲ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 276 ಬಿಹೆಚ್‌ಪಿ ಪವರ್ ಮತ್ತು 392 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಎನ್-ಗ್ರಿನ್ ಶಿಫ್ಟ್ ಕಾರ್ಯವನ್ನು ಒಳಗೊಂಡ 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಒಳಗೊಂಡಿದೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಎಲಾಂಟ್ರಾ ಎನ್ 5.3 ಸೆಕೆಂಡುಗಳಲ್ಲಿ 0 ದಿಂದ 60 ಮೈಲ್ ವೇಗವನ್ನು ಪಡೆದುಕೊಳುತ್ತದೆ ಎಂದು ಬ್ರ್ಯಾಂಡ್ ಹೇಳಿದೆ. ಈ ಕಾರಿನಲ್ಲಿ ಸೀಮಿತ ಸ್ಲಿಪ್ ಡಿಫರೆನ್ಷಿಯಲ್ ಮುಂಭಾಗದ ಆಕ್ಸಲ್‌ನಲ್ಲಿ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಈ ಸೆಡಾನ್ ಮಾದರಿಯಲ್ಲಿ 245/35-ಸೀರಿಸ್ ಮೈಕೆಲಿನ್ ಪೈಲಟ್ ಸ್ಪೋರ್ಟ್ 4ಎಸ್ ಸಮ್ಮರ್ ಟೈರ್‌ಗಳನ್ನು ಹೊಂದಿರುವ 19 ಇಂಚಿನ ಎನ್-ನಿರ್ದಿಷ್ಟ ವ್ಹೀಲ್ ಗಳನ್ನು ಒಳಗೊಂಡಿರುತ್ತದೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ, ಈ ಸೆಡಾನ್ ತ್ವರಿತ ಸ್ಟೀಯರಿಂಗ್ ಮತ್ತು ಗಟ್ಟಿಯಾದ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಕಾರಿನ ಹಲವಾರು ಪರ್ಫಾಮೆನ್ಸ್ ಆಧಾರಿತ ತಂತ್ರಜ್ಙಾನಗಳನ್ನು ಒಳಗೊಂಡಿದೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಎಲಾಂಟ್ರಾ ಎನ್ ಕಾರಿನಲ್ಲಿ ನವೀಕರಿಸಿದ ಬ್ರೇಕ್ ಪ್ಯಾಡ್‌ಗಳೊಂದಿಗೆ 14.1-ಇಂಚಿನ ಮುಂಭಾಗದ ರೋಟಾರ್‌ಗಳು, ಸ್ಟೀಯರಿಂಗ್ ಮೌಂಟಡ್ ಬ್ಲೂ ಬಟನ್ ಮೂಲಕ ಪ್ರವೇಶಿಸಬಹುದಾದ ಪೂರ್ಣ-ಆನ್ ಎನ್ ಪರ್ಫಾಮೆನ್ಸ್ ಸೆಟ್ಟಿಂಗ್ ಸೇರಿದಂತೆ ಅನೇಕ ಡ್ರೈವ್ ಮೋಡ್‌ಗಳಿವೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

2022ರ ಎಲಾಂಟ್ರಾ ಎನ್ ಕಾರಿನ ಒಳಭಾಗದಲ್ಲಿ 10.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಮತ್ತು ಹಲವಾರು ಡ್ರೈವರ್ ಅಸಿಸ್ಟ್ ಫೀಚರ್ಸ್ ಗಳೊಂದಿಗೆ ಸೋರ್ಟ್ಸ್ ಸೀಟುಗಳನ್ನು ಒಳಗೊಂಡಿವೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಇನ್ನು ಈ ಹೊಸ ಹ್ಯುಂಡೈ ಎಲಾಂಟ್ರಾ ಎನ್ ಸಾಮಾನ್ಯ ಮಾದರಿಗಿಂತ ಸ್ಪೋರ್ಟಿಯರ್ ಆಗಿ ಕಾಣುತ್ತದೆ. ಇದರಲ್ಲಿ ಕೆಲವು ಪ್ರಮುಖ ವಿನ್ಯಾಸ ಅಂಶಗಳು ಸ್ಪಾಯ್ಲರ್, ರೆಡ್ ಸೈಡ್ ಸಿಲ್ ವಿಸ್ತರಣೆಗಳು, ದೊಡ್ಡ ಎಕ್ಸಾಸ್ಟ್ ಪೈಪ್ ಗಳಿವೆ ಮತ್ತು ರೇರ್ ವಿಂಗ್ ಅನ್ನು ಹೊಂದಿದೆ.

2022ರ ಎಲಾಂಟ್ರಾ ಎನ್ ಪರ್ಫಾಮೆನ್ಸ್ ಕಾರನ್ನು ಅನಾವರಣಗೊಳಿಸಿದ ಹ್ಯುಂಡೈ

ಕಾರ್ಯಕ್ಷಮತೆ-ಆಧಾರಿತ ಎಲಾಂಟ್ರಾ ಎನ್ ಅನ್ನು ಮೊದಲು ದಕ್ಷಿಣ ಕೊರಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ನಂತರ ಇತರ ಅಮೆರಿಕ ಮತ್ತು ಯುರೋಪ್ ಸೇರಿದಂತೆ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಬಹುದು.

Most Read Articles

Kannada
English summary
2022 Hyundai Elantra N Debuts. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X